33000 ಕೋಟಿ ರೂ ವಹಿವಾಟು ದಾಟಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೋವಿಡ್ ನಂತರದ ಸಂದಿಗ್ಧ ಪರಿಸ್ಥಿತಿ ಹಾಗೂ ಪ್ರಕೃತಿ ವಿಕೋಪದ ಕಾರಣ ಕುಂಠಿತಗೊಂಡ ಆರ್ಥಿಕ ವ್ಯವಸ್ಥೆಯ ನಡುವೆಯೂ ಕೆನರಾ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 7.82 ಪ್ರತಿಶತ ಪ್ರಗತಿ ದರದಲ್ಲಿ 33150 ಕೋಟಿ ರೂ. ಒಟ್ಟಾರೆ ವಹಿವಾಟು ದಾಖಲಿಸಿದೆ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ : ಆರ್ಥಿಕ ವರ್ಷ 2022-2023
33000 ಕೋಟಿ ರೂ ವಹಿವಾಟು ದಾಟಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೋವಿಡ್ ನಂತರದ ಸಂದಿಗ್ಧ ಪರಿಸ್ಥಿತಿ ಹಾಗೂ ಪ್ರಕೃತಿ ವಿಕೋಪದ ಕಾರಣ ಕುಂಠಿತಗೊಂಡ ಆರ್ಥಿಕ ವ್ಯವಸ್ಥೆಯ ನಡುವೆಯೂ ಕೆನರಾ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 7.82 ಪ್ರತಿಶತ ಪ್ರಗತಿ ದರದಲ್ಲಿ 33150 ಕೋಟಿ ರೂ. ಒಟ್ಟಾರೆ ವಹಿವಾಟು ದಾಖಲಿಸಿದೆ ಮತ್ತು ಬ್ಯಾಂಕಿನ ನಿಕ್ಕಿ ಲಾಭ 31.90 ಕೋಟಿ ರೂ. ಗಳಿಂದ 40.25 ಕೋಟಿ ರೂ. ಗಳಿಗೆ ವೃದ್ಧಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಮ್ ಭಂಡಿವಾಡ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರದಂದು ಮಾತನಾಡಿದ ಅವರು ಬ್ಯಾಂಕಿನ ನಿವ್ವಳ ಸಂಪತ್ತು 1224.42 ಕೋಟಿ ರೂ.ಗಳಿಂದ 1264.56 ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದು ತಿಳಿಸಿದರು.
ರಬಕವಿ-ಬನಹಟ್ಟಿ: ನೇಕಾರಿಕೆ ಉದ್ಯಮಕ್ಕೆ ಬಲ ತಂದ ‘ಆನೆ’..!
ವೃದ್ಧಿಸಿದ ವಹಿವಾಟು: ಪ್ರಗತಿ ವಿವರಿಸಿ ಮಾತನಾಡಿದ ಶ್ರೀಕಾಂತ ಎಮ್ ಭಂಡಿವಾಡ(Shrikant M Bhandiwad) 2021-2022 ರ ಸಾಲಿನ ಒಟ್ಟು ವ್ಯವಹಾರದ (ರೂ.30748 ಕೋಟಿ) ಮೇಲೆ 2403 ಕೋಟಿ ರೂ. ನಿವ್ವಳ ಹೆಚ್ಚಳವನ್ನು ಸಾಧಿಸಿರುವ ಬ್ಯಾಂಕು ವರದಿಯ ವರ್ಷದಲ್ಲಿ 7.82 % ಪ್ರಗತಿ ದರದಲ್ಲಿ 33150 ಕೋಟಿ ರೂ. ವಹಿವಾಟು ದಾಖಲಿಸಿದೆ. ಠೇವಣಿ ಸಂಗ್ರಹಣೆಯಲ್ಲಿ 6.03% ಪ್ರತಿಶತ ಪ್ರಗತಿ ದರದಲ್ಲಿ 18710 ಕೋಟಿ ರೂ. ಮಟ್ಟವನ್ನು ತಲುಪಿರುವ ಬ್ಯಾಂಕು ಗ್ರಾಹಕರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದು, ಅದು 88 ಲಕ್ಷ ಮೀರಿದೆ. ಪ್ರತಿ ಉದ್ಯೋಗಿಯ ಸರಾಸರಿ ವಹಿವಾಟು 9.34 ಕೋಟಿ ರೂ.ಗಳಿಂದ 10.08 ಕೋಟಿ ರೂ.
ಗಳಿಗೆ ಏರಿದೆ ಎಂದೂ ಶ್ರೀಕಾಂತ ಭಂಡಿವಾಡ ತಿಳಿಸಿದರು.
ಪ್ರಗತಿಗೆ ಪೂರಕವಾದ ಸಾಲ ಸೌಲಭ್ಯ :
ಜಿಲ್ಲೆಗಳಲ್ಲಿ 629 ಶಾಖೆಗಳನ್ನು ಹೊಂದಿರುವ ಬ್ಯಾಂಕು 2022-2023 ರ ಸಾಲಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿ 10383 ಕೋಟಿ ರೂ. ಸಾಲ ವಿತರಿಸಿದೆ ಪ್ರತಿಶತವಾಗಿದೆ. 12304 ಕೋಟಿ ರೂ. ಸಾಲವನ್ನು ಹೊಂದಿದ್ದು ಇದು ಸಾಲದಲ್ಲಿ ಕೃಷಿರಂಗದ ಸಾಲದ ಪ್ರಮಾಣ 10276 ಕೋಟಿ ರೂ. ಗಳಾಗಿದ್ದು ಅದು ಒಟ್ಟಾರೆ ಸಾಲದ 71 ಕೋಟಿ ರೂ. ಸಾಲ ವಿತರಿಸಿದೆ . ಒಟ್ಟಾರೆ ಸಾಲ ವಿತರಣೆಯಲ್ಲಿ ಕೃಷಿ ಅಭಿವೃದ್ಧಿಗೆ 708 ಕೋಟಿ ರೂ., ಎಮ್ ಎಸ್ ಕಳೆದ ಸಾಲಿನಲ್ಲಿ ಬ್ಯಾಂಕು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 354314 ರೈತರಿಗೆ 7814 ಎಮ್ ಇ ರಂಗಕ್ಕೆ 776 ಕೋಟಿ ರೂ. ಮತ್ತು ಗೃಹ ರಂಗಕ್ಕೆ 99 ಕೋಟಿ ರೂ.ವಿತರಿಸಿದೆ.
ಬ್ಯಾಂಕಿನ ಸಾಲ ಹಾಗೂ ಮುಂಗಡಗಳು 10.22% ಪ್ರಗತಿ ಆದ್ಯತಾ ರಂಗಕ್ಕೆ ಮಹತ್ವ ನೀಡಿರುವ ಬ್ಯಾಂಕು ಈ ರಂಗದಡಿ ಒಟ್ಟೂ ಸಾಲದ 90 ಪ್ರತಿಶತವಾಗಿದೆ. ಅನುತ್ಪಾದಕ ಆಸ್ತಿಗಳ ನಿಯಂತ್ರಣ : (NPA) ಕೋವಿಡ್ ನಂತರದ ಮತ್ತು ಪ್ರಕೃುತಿ ಅನಿಯತನ, ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಿದ್ದರೂ ಅನುತ್ಪಾದಕ ಸಾಲ ವಸೂಲಾತಿಯ ಮೇಲೆ ಬ್ಯಾಂಕು ಉತ್ತಮ ನಿಯಂತ್ರಣ ಸಾಧಿಸಿದೆ. ಅನುತ್ಪಾದಕ ಸಾಲದ ಪ್ರಮಾಣ 9.37 ಪ್ರತಿಶತದಿಂದ 6.96 ಪ್ರತಿಶತಕ್ಕೆ ತಗ್ಗಿದೆ ಮತ್ತು ನಿಕ್ಕಿ ಅನುತ್ಪದಾಕ ಸಾಲದ ಬ್ಯಾಂಕಿನ ಒಟ್ಟಾರೆ ಪ್ರಮಾಣವೂ 5.90 % ದಿಂದ 4.64 % ಕ್ಕೆ ತಗ್ಗಿದೆ ಎಂದೂ ಶ್ರೀಕಾಂತ ಭಂಡಿವಾಡ ಹೇಳಿದರು.
ಉತ್ತಮ ಲಾಭ ಗಳಿಕೆ: ಬ್ಯಾಂಕು ವರದಿ ವರ್ಷದಲ್ಲಿ 279 ಕೋಟಿ ರೂ. ಒಟ್ಟಾರೆ ಲಾಭಗಳಿಸಿದ್ದು ಹಲವು ನಿಬಂಧನೆಗಳನ್ನು ಕಲ್ಪಿಸಿಯೂ 40.25 ಕೋಟಿ ರೂ. ನಿಕ್ಕಿ ಲಾಭ ಗಳಿಸಿದೆ. ಲಾಭದ ಪ್ರಮಾಣ 26.18 ಪ್ರತಿಶತ ವರ್ಧಿಸಿದೆ.
ವಿತ್ತೀಯ ಸೇರ್ಪಡೆಯಡಿ ಶ್ಲಾಘನೀಯ ಕಾರ್ಯ: ವಿತ್ತೀಯ ಸೇರ್ಪಡೆಯಡಿ (Financial Inclusion) ಬ್ಯಾಂಕಿನ ಪ್ರಯತ್ನ ನಿರಂತರವಾಗಿ ಸಾಗಿದ್ದು ಅಸಂಘಟಿತ ವರ್ಗ ಮತ್ತು ಹಳ್ಳಿಗಾಡಿನ ಜನರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕು ಮಹತ್ವದ ಪಾತ್ರ ವಹಿಸುತ್ತಲಿದೆ. ಬ್ಯಾಂಕು ಇಲ್ಲಿಯವರೆಗೆ ಸುಮಾರು 16.33 ಲಕ್ಷ ಜನರನ್ನು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ(Pradhan Mantri Suraksha Vima Yojana) ಮತ್ತು 7.36 ಲಕ್ಷ ಜನರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ(PMJJBY) ವ್ಯಾಪ್ತಿಗೆ ತಂದಿದೆ. ಅಟಲ್ ಪೆನ್ಷನ್ ಯೋಜನೆಯಡಿ ಇಲ್ಲಿಯವರೆಗೆ 3.41 ಲಕ್ಷ ಜನರನ್ನು ತಂದ ಬ್ಯಾಂಕಿನ ಕಾರ್ಯವನ್ನು ಪರಿಗಣಿಸಿ ಭಾರತೀಯ ಪಿಂಚಣಿ ಪ್ರಾಧಿಕಾರ ಬ್ಯಾಂಕಿಗೆ ರಾಷ್ಟ್ರಮಟ್ಟದ 9 ಪ್ರಶಸ್ತಿಗಳನ್ನು ನೀಡಿದೆ.
35700 ಕೋಟಿ ರೂ. ವಹಿವಾಟು ದಾಟಿ ಮುನ್ನಡೆಯುವ ಮಹತ್ತರ ಗುರಿ:
2023-2024 ರ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು 20400 ಕೋಟಿ ರೂ. ಠೇವಣಿ ಮತ್ತು 15300 ಕೋಟಿ ರೂ. ಮುಂಗಡ ಮಟ್ಟವನ್ನು ತಲುಪುವ ಮೂಲಕ 35700 ಕೋಟಿ ರೂ. ವಹಿವಾಟು ಸಾಧಿಸುವ ಹಾಗೂ ಕನಿಷ್ಠ 150 ಕೋಟಿ ರೂ.ನಿಕ್ಕಿ ಲಾಭಗಳಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಶ್ರೀಕಾಂತ ಭಂಡಿವಾಡ ಪ್ರಕಟಿಸಿದರು.
2,000 ರೂ ನೋಟು ಹಿಂತೆಗೆದ ಬೆನ್ನಲ್ಲೇ ಸರ್ಕಾರಿ ಕಚೇರಿಯಲ್ಲಿ 2.31 ಕೋಟಿ ನಗದು ಹಣ ಪತ್ತೆ!
ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು ಹೊಸ ಆರ್ಥಿಕ ವರ್ಷದ ಸಾಲಿನಲ್ಲೂ ಕೃಷಿ ,ಉದ್ಯಮ ಮತ್ತು ಗೃಹಸಾಲ ಒಳಗೊಂಡು ರಿಟೇಲ್ ಸಾಲಗಳಿಗೆ ಆದ್ಯತೆ ನೀಡಲಾಗುವುದು ಎಂದೂ ಶ್ರೀಕಾಂತ ಎಮ್ ಭಂಡಿವಾಡಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕಿನ ಮಹಾ ಪ್ರಬಂಧಕರುಗಳಾದ ವಿ. ಥನಾರಸು, ಸತೀಶ ಆರ್, ಮಾಲಾಕಿ ಪುನೀತ, ಸತ್ಯಪ್ರಸಾದ ಎನ್, ಆರ್. ಟಿ. ಕಾಂಬ್ಳೆ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.