ಬಂಡವಾಳ ಹೂಡಿಕೆ ಪ್ರಸ್ತಾವ ಸ್ವೀಕಾರದಲ್ಲಿ ರಾಜ್ಯ ನಂ.1

Published : Oct 13, 2018, 09:11 AM ISTUpdated : Oct 13, 2018, 11:03 AM IST
ಬಂಡವಾಳ ಹೂಡಿಕೆ ಪ್ರಸ್ತಾವ  ಸ್ವೀಕಾರದಲ್ಲಿ ರಾಜ್ಯ ನಂ.1

ಸಾರಾಂಶ

ಬಂಡ​ವಾಳ ಹೂಡಿ​ಕೆಗೆ ಉದ್ಯ​ಮಿ​ಗಳು ಸಲ್ಲಿ​ಸುವ ಬಂಡವಾಳ ಹೂಡಿಕೆ ಪ್ರಸ್ತಾ​ವ​ನೆಗಳನ್ನು ಪಡೆ​ಯುವ ರಾಜ್ಯ​ದಲ್ಲಿ ಕರ್ನಾ​ಟಕ ಕಳೆದ ಎರಡು ವರ್ಷ​ಗಳಿಂದಲೂ ಮೊದಲನೇ ಸ್ಥಾನದಲ್ಲಿದೆ. ಈಗಲೂ ಅದೇ ಸ್ಥಾನದಲ್ಲಿದೆ. 

ಬೆಂಗಳೂರು: ಇಡೀ ದೇಶ​ದಲ್ಲೇ ಬಂಡ​ವಾಳ ಹೂಡಿ​ಕೆಗೆ ಅತಿ ಹೆಚ್ಚು ಪ್ರಸ್ತಾ​ವನೆ ಪಡೆ​ಯುವ ರಾಜ್ಯ​ಗಳ ಯಾದಿ​ಯಲ್ಲಿ ಕರ್ನಾ​ಟಕ ಮೊದಲ ಸ್ಥಾನ​ವನ್ನು ಮತ್ತೆ ಕಾಯ್ದು​ಕೊಂಡಿದೆ. ಆದರೆ, ವಾಸ್ತ​ವಿಕ ಬಂಡ​ವಾಳ ಹೂಡಿ​ಕೆ​ಯಾಗಿರುವ ರಾಜ್ಯ​ಗಳ ಪಟ್ಟಿ​ಯಲ್ಲಿ ಕರ್ನಾ​ಟ​ಕ ಎಂಟನೇ ಸ್ಥಾನ​ದ​ಲ್ಲಿ​ದೆ.

ಬಂಡ​ವಾಳ ಹೂಡಿ​ಕೆಗೆ ಉದ್ಯ​ಮಿ​ಗಳು ಸಲ್ಲಿ​ಸುವ ಬಂಡವಾಳ ಹೂಡಿಕೆ ಪ್ರಸ್ತಾ​ವ​ನೆಗಳನ್ನು ಪಡೆ​ಯುವ ರಾಜ್ಯ​ದಲ್ಲಿ ಕರ್ನಾ​ಟಕ ಕಳೆದ ಎರಡು ವರ್ಷ​ಗಳಿಂದ ಅಗ್ರ ಸ್ಥಾನ​ದ​ಲ್ಲಿತ್ತು. ಈ ಬಾರಿಯೂ ಅದು ಮುಂದು​ವ​ರೆ​ದಂತೆ ಆಗಿ​ದೆ.

ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಮಾಹಿತಿ ಪ್ರಕಾರ, 2018ನೇ ಸಾಲಿನ ಜನವರಿಯಿಂದ ಆಗಸ್ಟ್‌ವರೆಗೆ ರಾಜ್ಯದಲ್ಲಿ 79,866 ಕೋಟಿ ರು. ಬಂಡವಾಳ ಹೂಡಲು ವಿವಿಧ ಉದ್ಯಮಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಇದರಲ್ಲಿ ಹೂಡಿಕೆಯಾಗಿರುವುದು ಕೇವಲ 4,723 ಕೋಟಿ ರು. ಮಾತ್ರ. ಮಹಾರಾಷ್ಟ್ರದಲ್ಲಿ ಈಗಾಗಲೇ ಆಗಸ್ಟ್‌ವರೆಗೆ 21,197 ಕೋಟಿ ರು. ಬಂಡವಾಳ ಹೂಡಿಕೆಯಾಗಿದೆ. ನಂತರ ಸ್ಥಾನದಲ್ಲಿ ಗುಜರಾತ್‌ ಇದ್ದು 20,373 ಕೋಟಿ ರು.ನಷ್ಟುಬಂಡವಾಳ ಹೂಡಿಕೆಯಾಗಿದೆ.

2013ರಲ್ಲಿ ಬಂಡವಾಳ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕ, 2014 ಮತ್ತು 2015ರಲ್ಲಿ ಕ್ರಮವಾಗಿ 5 ಮತ್ತು 4ನೇ ಸ್ಥಾನಕ್ಕೇರಿತ್ತು. ನಂತರ 2016ರಲ್ಲಿ 1.54 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯೊಂದಿಗೆ ಪ್ರಥಮ ಸ್ಥಾನಕ್ಕೇರಿತ್ತು. 2017ರಲ್ಲೂ 1.41 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯೊಂದಿಗೆ ಪ್ರಥಮ ಸ್ಥಾನದಲ್ಲೇ ಮುಂದುವರೆದಿತ್ತು.

ಆದರೆ, ಇದೀಗ 2018ನೇ ಸಾಲಿನಲ್ಲೂ ಆಗಸ್ಟ್‌ ತಿಂಗಳ ವರೆಗೆ ರಾಜ್ಯದಲ್ಲಿ ಪ್ರಸ್ತಾವಿತ ಬಂಡವಾಳ ಮೊತ್ತಕ್ಕೂ, ಹೂಡಿಕೆಯಾಗಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ರಾಜ್ಯದಲ್ಲಿ 79,866 ಕೋಟಿ ರು. ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಬಂದಿದ್ದು, ಪ್ರಸ್ತಾಪಿತ ಬಂಡವಾಳದ ಲೆಕ್ಕಾಚಾರದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೂ, ಈಗಾಗಲೇ ಹೂಡಿಕೆಯಾಗಿರುವ ಬಂಡವಾಳಕ್ಕೆ ಹೋಲಿಸಿದರೆ 8ನೇ ಸ್ಥಾನದಲ್ಲಿದೆ. 2017ರಲ್ಲಿ ಇದೇ ಅವಧಿಯಲ್ಲಿ ಹೂಡಿಕೆಯಾಗಿದ್ದ ಬಂಡವಾಳಕ್ಕೆ ಹೋಲಿಸಿದರೆ ಶೇ.93.38ರಷ್ಟುಕಡಿಮೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ವಯಸ್ಸಾಯ್ತು ಅಂತ ಮಂಡೆ ಬಿಸಿ ಬೇಡ… ಇವರೆಲ್ಲಾ ಜನಪ್ರಿಯತೆ ಪಡೆದದ್ದು 30+ ಆದ್ಮೇಲೇ
ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?