ದಿನದ ಕೆಲಸದ ಸಮಯ 9 ರಿಂದ 10 ಗಂಟೆಗೆ ಏರಿಸಲು ಮುಂದಾದ ರಾಜ್ಯ ಸರ್ಕಾರ: ವರದಿ

Published : Jun 18, 2025, 03:58 PM IST
Santosh Lad

ಸಾರಾಂಶ

ಕರ್ನಾಟಕ ಸರ್ಕಾರವು ದಿನಕ್ಕೆ 10 ಗಂಟೆಗಳ ಕೆಲಸದ ಅವಧಿ ಮತ್ತು 144 ಗಂಟೆಗಳ ಓವರ್‌ಟೈಮ್‌ಗೆ ಪ್ರಸ್ತಾವನೆ ಸಲ್ಲಿಸಿದೆ. ಕಾರ್ಮಿಕ ಸಂಘಟನೆಗಳು ಇದನ್ನು ವಿರೋಧಿಸುತ್ತಿವೆ.

ಬೆಂಗಳೂರು (ಜೂ.18): ಮಹತ್ವದ ಬದಲಾವಣೆಯೊಂದರಲ್ಲಿ, ಕರ್ನಾಟಕ ಸರ್ಕಾರವು ಕೆಲಸದ ಸಮಯದ ಗರಿಷ್ಠ ಮಿತಿಯನ್ನು ಪ್ರಸ್ತುತ 9 ಗಂಟೆಗಳಿಂದ 10 ಗಂಟೆಗೆ ಹೆಚ್ಚಿಸಲು ಮತ್ತು ಹೆಚ್ಚಿನ ಓವರ್‌ಟೈಮ್ ಸಮಯವನ್ನು ಅನುಮತಿಸಲು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1961 ಕ್ಕೆ ತಿದ್ದುಪಡಿ ತರುವ ಮೂಲಕ ಈ ಬದಲಾವಣೆಗಳನ್ನು ತರಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ. ಕರ್ನಾಟಕವು 10 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳನ್ನು ಕಾಯ್ದೆಯ ವ್ಯಾಪ್ತಿಯಿಂದ ತೆಗೆದುಹಾಕಲು ಕೂಡ ಬಯಸಿದೆ.

ರಾಜ್ಯದ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತರೆ, ಗರಿಷ್ಠ ಕೆಲಸದ ಸಮಯ ದಿನಕ್ಕೆ 10 ಗಂಟೆಗಳಿಗೆ ಏರುತ್ತದೆ ಮತ್ತು ಓವರ್‌ಟೈಮ್‌ ಸಮಯವು ದಿನಕ್ಕೆ 12 ಗಂಟೆಗಳಿಗೆ ಏರುತ್ತದೆ ಎಂದು ವರದಿ ತಿಳಿಸಿದೆ. ಮೂರು ತಿಂಗಳ ಓವರ್‌ಟೈಮ್ ಮಿತಿಯೂ 144 ಗಂಟೆಗಳಿಗೆ ಏರುತ್ತದೆ.

ಸಮಾಲೋಚನೆಗಾಗಿ ಈ ಬದಲಾವಣೆಗಳನ್ನು ಹೊರಡಿಸಿರುವ ಕಾರ್ಮಿಕ ಇಲಾಖೆ, ಪ್ರಸ್ತಾವನೆಗಳನ್ನು ಸಮರ್ಥಿಸಿಕೊಂಡಿದೆ. ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಛತ್ತೀಸ್‌ಗಢಗಳು ಈಗಾಗಲೇ ಇದೇ ರೀತಿಯ ಬದಲಾವಣೆಗಳನ್ನು ಪರಿಚಯಿಸಿರುವ ಪ್ರಮುಖ ರಾಜ್ಯಗಳಲ್ಲಿ ಸೇರಿವೆ ಎಂದು ಇಲಾಖೆ ತಿಳಿಸಿದೆ.

ಆದರೆ, ಕಾರ್ಮಿಕ ಸಂಘಗಳು ಈ ಪ್ರಸ್ತಾಪಗಳನ್ನು 'ಅಸಂವಿಧಾನಿಕ' ಮತ್ತು ಡೈರೆಕ್ಟಿವ್‌ ತತ್ವಗಳಿಗೆ ವಿರುದ್ಧವೆಂದು ತಿರಸ್ಕರಿಸಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಪ್ರಸ್ತಾವನೆಗಳ ಕುರಿತು ಚರ್ಚೆಗಾಗಿ ಜೂನ್ 18 ರಂದು ಕಾರ್ಮಿಕ ಸಂಘಗಳು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಪಾಲುದಾರರ ಪ್ರತಿನಿಧಿಗಳು ಸಭೆ ನಡೆಸಿದೆ. ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಸಭೆ ನಡೆದಿದೆ.

10 ಗಂಟೆ ಕೆಲಸದ ಅವಧಿ ವಿಸ್ತರಣೆಯ ಬಗ್ಗೆ ಚರ್ಚೆಯಾಗಿದೆ. ಈಗ 8 ಗಂಟೆ 9 ಗಂಟೆ ಕೆಲಸದ ಅವಧಿ ಇದೆ. ಇದನ್ನು 10 ಗಂಟೆಗೆ ವಿಸ್ತರಣೆಗೆ ಚರ್ಚೆ ಮಾಡಲಾಗಿದೆ. ಈಗಾಗಲೇ ಕೇಂದ್ರ ಹಾಗೂ ಖಾಸಗಿ ಉದ್ಯೋಗಿಗಳ ಅಸೋಸಿಯೇಷನ್ ನಿಂದಲೂ ಪ್ರಸ್ತಾವನೆ ಬಂದಿದೆ. ನಿತ್ಯ 10 ಗಂಟೆ ಕೆಲಸ ಶನಿವಾರ ಭಾನುವಾರ ಎರಡು ದಿನದ ರಜೆ ನೀಡುವ ಪ್ರಸ್ತಾಪವಿದೆ. ನಿತ್ಯ ಒಂದು ಗಂಟೆ ಹೆಚ್ಚು ಕೆಲಸ ಮಾಡಿದಲ್ಲಿ ಎರಡು ದಿನ ವಾರಾಂತ್ಯ ದಲ್ಲಿ ರಜೆ ಸಿಕ್ಕಂತೆ ಆಗಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಭಿಪ್ರಾಯ ಆಲಿಸಿದೆ.

ಹೋಟೆಲ್‌ ಮಾಲೀಕರ ಸಂಘ ಸ್ವಾಗತ: ಸರ್ಕಾರದ ಚಿಂತನೆಯನ್ನ ಕಾರ್ಮಿಕ ಸಂಘಟನೆಗಳು ಅರ್ಥ ಮಾಡಿಕೊಳ್ತಿಲ್ಲ. ವಾರದಲ್ಲಿ 48 ಗಂಟೆ ಮಾತ್ರ ಕೆಲಸ ಮಾಡಿಸೋದು, 10 ಗಂಟೆಗೆ ಅವಧಿ ಹೆಚ್ಚಳ ಮಾಡಿದರೆ ವ್ಯತ್ಯಾಸ ಆಗಲ್ಲ. ವಾರದಲ್ಲಿ ಎರಡು ದಿನ ರಜೆ ಇರುತ್ತೆ, ಒಟ್ಟಾರೆ ಸಮಯ ಅಷ್ಟೇ ಆಗುತ್ತೆ. ಸರ್ಕಾರದ ಚಿಂತನೆಯನ್ನ‌ ನಾವು ಸ್ವಾಗತಿಸುತ್ತೇವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

ಜಾರಿ ಆಗಬಾರದು: ಯಾವುದೇ ಕಾರಣಕ್ಕೂ ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಬಾರದು. ಕಾರ್ಮಿಕರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಬಾರದು. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇವೆ. ಇದು ಕಾರ್ಮಿಕರಿಗೆ ಹೊರೆ ಆಗುತ್ತದೆ. ಯಾವುದೇ ಕಾರಣಕ್ಕೂ ಜಾರಿ ಆಗಬಾರದು ಎಂದು ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ ಹೇಳಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ