ಬೆಂಗಳೂರಿನಲ್ಲಿ ಏಪ್ರಿಲ್ 1 ರಿಂದ ಹಾಲು, ಮೊಸರು, ನೀರು, ವಿದ್ಯುತ್ ದರಗಳು ಹೆಚ್ಚಾಗಲಿವೆ. ಇದರ ಜೊತೆಗೆ ಕಸ ವಿಲೇವಾರಿಗೂ ತೆರಿಗೆ ಕಟ್ಟಬೇಕಾಗುತ್ತದೆ. ಈ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಹೊರೆಯಾಗಲಿದೆ.
ಬೆಂಗಳೂರು (ಮಾ.31): ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರಿಗೆ ಇದೀಗ ಏಪ್ರಿಲ್ 1ರಿಂದ ಈ ವಸ್ತುಗಳ ಬೆಲೆಗಳು ಕೂಡ ಹೆಚ್ಚಾಗಲಿವೆ. ನಾಳೆಯಿಂದ ಹಾಲು, ಮೊಸರು, ನೀರು, ಕರೆಂಟ್ ದರಗಳು ಹೆಚ್ಚಾಗುವುದಲ್ಲದೇ ಕಸ ಹಾಕುವುದಕ್ಕೂ ತೆರಿಗೆ ಕಟ್ಟಬೇಕಾಗುತ್ತದೆ. ಯಾವುದಕ್ಕೆ ಎಷ್ಟು ಬೆಲೆ ಏರಿಕೆ ಆಗುತ್ತದೆ ಎಂಬುದರ ವಿವರ ಇಲ್ಲಿದೆ..
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರ ಜೀವನ ಸುಧಾರಣೆ ಮಾಡುವುದಾಗಿ 5 ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡದ ಒಂದೇ ಒಂದು ವಸ್ತುವೂ ಇಲ್ಲ. ಹಾಲು, ನೀರು, ಮೊಸರು, ಕರೆಂಟ್, ಬಸ್ ಪ್ರಯಾಣ ದರ, ಮೆಟ್ರೋ ದರ, ಪೆಟ್ರೋಲ್-ಡೀಸೆಲ್, ಟೋಲ್ ದರ, ವಾಹನ ಖರೀದಿ ದರ, ಮುದ್ರಾಂಕ ಶುಲ್ಕ ಹೇಳುತ್ತಾ ಹೋದರೆ ಆಂಜನೇಯನ ಬಾಲವೂ ಚಿಕ್ಕದಾಗಬಹುದೇನೋ.... ಉಸಿರಾಡುವ ಗಾಳಿ ಬಿಟ್ಟರೆ ಎಲ್ಲದಕ್ಕೂ ತೆರಿಗೆ ಹಾಗೂ ಶುಲ್ಕ ವಸೂಲಿ ಮಾಡುವುದರ ಜೊತೆಗೆ ಇದೀಗ ದರ ಹೆಚ್ಚಳವನ್ನೂ ಮಾಡಿದ್ದಾರೆ. ಇಷ್ಟೆಲ್ಲಾ ದುಬಾರಿ ದುನಿಯಾದ ಜೊತೆ ನಾಳೆಯಿಂದ ಏನೇನು ದುಬಾರಿ ಆಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..
ನಾಳೆಯಿಂದ ಹೆಚ್ಚಾಗಲಿರುವ ದರಗಳು! |
ನಂದಿನಿ ಹಾಲು ಮತ್ತು ಮೊಸರು : | ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ |
ವಿದ್ಯುತ್ ಸೆಸ್ : | 36 ಪೈಸೆ ಏರಿಕೆ |
ಬೆಂಗಳೂರಿನ ಜನತೆಗೆ ಕಾವೇರಿ ನೀರು: | ಪ್ರತಿ ಲೀಟರ್‌ಗೆ 1 ಪೈಸೆ ಏರಿಕೆ |
ರಾಜ್ಯಾದ್ಯಂತ ಟೋಲ್ : | ಶೇ.5 ಹೆಚ್ಚಳ |
ಮನೆ, ಕಚೇರಿಗಳ ಲಿಫ್ಟ್ ರಿನೀವಲ್ ಶುಲ್ಕ: | 5000 ರೂ.ನಿಂದ 8000ಕ್ಕೆ ಹೆಚ್ಚಳ |
ಹೊಸ ವಾಹನ ಖರೀದಿ ಸೆಸ್: | 500 ರೂ.ನಿಂದ 1000 ರೂ.ಗೆ ಹೆಚ್ಚಳ |
ಬೆಂಗಳೂರು ಜನರಿಗೆ ನಾಳೆಯಿಂದ ಕಸದ ತೆರಿಗೆ | ಮಾಸಿಕ 50 ರೂ. |
ಇದನ್ನೂ ಓದಿ: Breaking ಹಾಲಿನ ಬೆನ್ನಲ್ಲೇ ರಾಜ್ಯದ ಜನತಗೆ ಮತ್ತೊಂದು ಬೆಲೆ ಏರಿಕೆ ಶಾಕ್
ರಾಜ್ಯ ಇಂಧನ ಇಲಾಖೆ ಲಿಫ್ಟ್, ಟ್ರಾನ್ಸ್‌ಫಾರ್ಮರ್, ಜನರೇಟರ್ ಪರಿಶೀಲನೆ ಮತ್ತು ರಿನೀವಲ್ ಶುಲ್ಕ ಏಕಾಏಕಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಹಿಂದೆ ಇದ್ದ ದರಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಿದೆ. 800 ರೂ. ನಿಂದ 1,000 ರೂ.ನಷ್ಟಿದ್ದ ಶುಲ್ಕದ ಮೊತ್ತವನ್ನ ಏಕಾಏಕಿ 5,000 ರೂ. ನಿಂದ 8,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ದರ ನಾಳೆಯಿಂದಲೇ ಅನ್ವಯವಾಗಲಿದೆ. ಇದರಿಂದ ಕಟ್ಟಡ ಹಾಗೂ ಮನೆ ನಿರ್ಮಾಣ ಮಾಡುವವರಿಗೆ ಭಾರೀ ಹೊಡೆತ ಬೀಳಲಿದೆ. ಇನ್ನು ಲಿಫ್ಟ್ ಅಳವಡಿಕೆ ಶುಲ್ಕವನ್ನೂ ಇತ್ತೀಚೆಗೆ ಸರ್ಕಾರ ಹೆಚ್ಚಳ ಮಾಡಿತ್ತು.
ನಂದಿನಿ ಹಾಲಿನ ಯಾವ ಪಾಕೆಟ್‌ಗೆ ಎಷ್ಷು ಹೆಚ್ಚಳ
ಇದನ್ನೂ ಓದಿ: ಗ್ಯಾರಂಟಿ ಎಂಟಾಣೆ ತೋರಿಸಿ ಜನರನ್ನ ಲಂಗೋಟಿ ಮೇಲೆ ನಿಲ್ಲಿಸಿದ ಸರ್ಕಾರ, 22 ತಿಂಗಳ ಅಧಿಕಾರದಲ್ಲಿ 'ಬೆಲೆ ಏರಿಕೆ'ಯದ್ದೇ ಕಾರುಬಾರು!
ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಅಹೋರಾತ್ರಿ ಧರಣಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ಹೆಚ್ಚಾಗಿದೆ. ಮೆಟ್ರೊ, ಸ್ಟಾಂಪ್ ದರ, ಹಾಲಿನ ದರ ಎಲ್ಲಾ ಜಾಸ್ತಿ ಮಾಡಿದೆ. ಇದರ ಪರಿಣಾಮ ಭಾರತದಲ್ಲೆ ಅತ್ಯಂತ ದುಬಾರಿ ಜೀವನ ರಾಜ್ಯದ ನಡೆಸುತ್ತಿದ್ದಾರೆ. ಬಹುಶಃ ಸೇವಿಸುವ ಗಾಳಿ ಬಿಟ್ಟರೆ ಬೇರೆ ಎಲ್ಲಾ ದರ ಏರಿಕೆ ಮಾಡಿದ್ದಾರೆ. ಮರಣ ಪ್ರಮಾಣ ಶುಲ್ಕವನ್ನೂ ಹೆಚ್ಚಳ ಮಾಡಿದ ಸರ್ಕಾರವಿದು. ಹೀಗಾಗಿ, ಬೆಲೆ ಏರಿಕೆಯನ್ನು ಖಂಡಿಸಿ ಏ.02ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೊರಾತ್ರಿ ಧರಣಿ ಮಾಡಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರು, ಶಾಸಕರು ಭಾಗಿಯಾಗಲಿದ್ದಾರೆ. ಏ.5ರಂದು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.