
ಬೆಂಗಳೂರು (ಸೆ.4): ರಾಜ್ಯ ಆರೋಗ್ಯ ಇಲಾಖೆ ಡೆಂಗ್ಯೂವನ್ನು ಸಾಂಕ್ರಾಮಿಕ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲಿಯೇ ಷೇರುಮಾರುಕಟ್ಟೆಯಲ್ಲಿ ಒಂದು ಷೇರಿನ ಅದೃಷ್ಟ ಖುಲಾಯಿಸಿದೆ. ಮಂಗಳವಾರ ಹಾಗೂ ಬುಧವಾರದ ವಹಿವಾಟಿನಲ್ಲಿ ಪನೇಸಿಯಾ ಬಯೋಟೆಕ್ (Panacea Biotec) ಕಂಪನಿಯ ಷೇರುಗಳಲ್ಲಿ ಭಾರಿ ಏರಿಕೆ ಕಂಡಿದೆ. ಬುಧವಾರ ಷೇರು ಮಾರುಕಟ್ಡೆ ಇಡೀ ಕುಸಿತ ಕಂಡಿದ್ದರೂ, ಪನೆಕ್ಕಾ ಬಯೋಟೆಕ್‌ನ ಷೇರುಗಳಲ್ಲಿ ಶೇ. 2.97 ಅಂದರೆ 7 ರೂಪಾಯಿಯಷ್ಟು ಏರಿಕೆ ಕಂಡಿದೆ. ಸೋಮವಾರದ ವಹಿವಾಟಿನ ಮುಕ್ತಾಯಕ್ಕೆ ಪ್ರತಿ ಷೇರಿಗೆ 225 ರೂಪಾಯಿ ಆಗಿದ್ದ ಈ ಷೇರಿನ ಬೆಲೆ ಬುಧವಾರದ ವಹಿವಾಟಿನ ಮುಕ್ತಾಯಕ್ಕೆ 239.95 ರೂಪಾಯಿ ಆಗಿದೆ. ಅದರಲ್ಲೂ ಮಂಗಳವಾರ ಒಂದೇ ದಿನ ಷೇರಿನ ಬೆಲೆಯಲ್ಲಿ 13 ರೂಪಾಯ ಏರಿಕೆಯಾಗಿತ್ತು. ಕರ್ನಾಟಕ ಸರ್ಕಾರ ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ ಬೆನ್ನಲ್ಲಿಯೇ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡಿ. ಪ್ರಮುಖ ಫಾರ್ಮಾ ಕಂಪನಿಯಾಗಿರುವ ಪನೇಸಿಯಾ ಬಯೋಟೆಕ್, ಡೆಂಗ್ಯೂ ಜ್ವರದ ಲಸಿಕೆಯಲ್ಲಿ ದೊಡ್ಡ ಪ್ರಮಾಣದ ಕೆಲಸ ಮಾಡುತ್ತಿದೆ. ಇದು ಷೇರಿನ ಬೆಲೆ ಏರಿಕೆಗೆ ಕಾರಣವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ಅನುಮೋದನೆಯ ನಂತರ, ಭಾರತದಲ್ಲಿ ತನ್ನ ಟೆಟ್ರಾವಲೆಂಟ್ ಡೆಂಗ್ಯೂ ಕ್ಯಾಂಡಿಡೇಟ್ ಲಸಿಕೆ-DengiALL ಗಾಗಿ ಹಂತ-3 ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಕಂಪನಿಯು ಆಗಸ್ಟ್ 14 ರಂದು ಮಾಹಿತಿ ನೀಡಿತ್ತು. ಪ್ರಯೋಗಗಳು 19 ಸೈಟ್‌ಗಳಲ್ಲಿ ನಡೆಯಲಿದ್ದು, 10,335 ಜನರ ಮೇಲೆ ಪ್ರಯೋಗವಾಗಲಿದೆ. ಪನೇಸಿಯಾ ಬಯೋಟೆಕ್ 2006 ರಿಂದ ಈ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಮಾರ್ಚ್ 2022 ರಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನೊಂದಿಗೆ ಪಾಲುದಾರಿಕೆಗೆ ಸಹಿ ಹಾಕಿದೆ.
ಕರ್ನಾಟಕ ಸರ್ಕಾರದ ಅಧಿಸೂಚನೆಯು ಡೆಂಗ್ಯೂವನ್ನು ಸಾಂಕ್ರಾಮಿಕ ರೋಗವೆಂದು ಪರಿಗಣಿಸಿದೆ. ಇದರ ಕುರಿತಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುತ್ತದೆ. ಡೆಂಗ್ಯೂ ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳು ಮತ್ತು ನಿಯಮ ಉಲ್ಲಂಘನೆಗೆ ದಂಡವನ್ನು ಸಹ ಹೊಂದಿದೆ. ಭಾರತದಲ್ಲಿ ಅತಿಯಾದ ಮಾನ್ಸೂನ್ ಬೆನ್ನಲ್ಲಿಯೇ ಡೆಂಗ್ಯೂ ಜ್ವರದ ಅಪಾಯ ಕೂಡ ಹೆಚ್ಚಾಗಿದೆ. ಈ ಹಂತದಲ್ಲಿ ಕಂಪನಿಯ ಲಸಿಕೆ ಪ್ರಯತ್ನಗಳು ಹೆಚ್ಚು ನಿರ್ಣಾಯಕವಾಗುವುದರಿಂದ ಈ ಘೋಷಣೆಯು ಪನೇಸಿಯಾ ಬಯೋಟೆಕ್ ಸ್ಟಾಕ್‌ನ ಮೇಲೆ ಪರಿಣಾಮ ಬೀರಿದೆ.
'ನಿಮ್ಮ ಮನೆಯ ಐರನ್ ಡೋಮ್' ಡೆಂಗ್ಯೂ ತಡೆಯಲು ಆನಂದ್ ಮಹೀಂದ್ರಾ ಹೊಸ ಐಡಿಯಾ!
ಒಂದು ತಿಂಗಳ ಹಿಂದೆ ಅಂದರೆ, ಆಗಸ್ಟ್ 5 ರಂದು ಪನೇಸಿಯಾ ಬಯೋಟೆಕ್‌ನ ಕಂಪನಿಯ ಪ್ರತಿ ಷೇರಿಗೆ 132 ರೂಪಾಯಿಯಂತೆ ವಹಿವಾಟು ನಡೆಸಿದ್ದವು. ಇಂದು ಪ್ರತಿ ಷೇರಿಗೆ 239.95 ರೂಪಾಯಿ ಆಗಿದೆ. ಅಂದರೆ, 30 ದಿನಗಳಲ್ಲಿಯೇ 107.82 ರೂಪಾಯಿ ಏರಿಕೆ ಕಂಡಿದೆ.
ಡೆಂಘೀ ಸೊಳ್ಳೆ ತಡೆಗೆ ಸಹಕರಿಸದ ಜನರಿಗೆ ದಂಡ ವಿಧಿಸಿ: ಹೈಕೋರ್ಟ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.