Karnataka Budget 2023: ವಿವಿಧ ಇಲಾಖೆಗೆ ಬೊಮ್ಮಾಯಿ ಕೊಟ್ಟಿದ್ದೆಷ್ಟು, ಸಿದ್ಧರಾಮಯ್ಯ ಕೊಟ್ಟಿದ್ದೆಷ್ಟು, ಇಲ್ಲಿದೆ ಹೋಲಿಕೆ!

Published : Jul 07, 2023, 06:42 PM IST
Karnataka Budget 2023: ವಿವಿಧ ಇಲಾಖೆಗೆ ಬೊಮ್ಮಾಯಿ ಕೊಟ್ಟಿದ್ದೆಷ್ಟು, ಸಿದ್ಧರಾಮಯ್ಯ ಕೊಟ್ಟಿದ್ದೆಷ್ಟು, ಇಲ್ಲಿದೆ ಹೋಲಿಕೆ!

ಸಾರಾಂಶ

Karnataka State Budget 2023: ಕೆಲ ತಿಂಗಳ ಹಿಂದಷ್ಟೇ ಅಂದಿನ ಬಿಜೆಪಿ ಸರ್ಕಾರದಲ್ಲಿ ಬಸವರಾಜ್‌ ಬೊಮ್ಮಾಯಿ ಬಜೆಟ್‌ ಮಂಡನೆ ಮಾಡಿದ್ದರು. ಹೊಸ ಸರ್ಕಾರದಲ್ಲಿ ಸಿದ್ಧರಾಮಯ್ಯ ಪೂರಕ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ನಡುವೆ ಬೊಮ್ಮಾಯಿ ಹಾಗೂ ಸಿದ್ಧರಾಮಯ್ಯ ವಿವಿಧ ಇಲಾಖೆಗಳಿಗೆ ನೀಡಿದ ಅನುದಾನದ ಹೋಲಿಕೆ ಇಲ್ಲಿದೆ.  

ಬೆಂಗಳೂರು (ಜು.7): ಕೆಲ ತಿಂಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್‌ ಬೊಮ್ಮಾಯಿ 3.09 ಲಕ್ಷದ ಬಜೆಟ್‌ ಅನ್ನು ಮಂಡನೆ ಮಾಡಿದ್ದರು. ಅದಾದ ಕೆಲವೇ ತಿಂಗಳಲ್ಲಿ ಹೊಸ ಸರ್ಕಾರದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಸಿಎಂ ಸಿದ್ಧರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ 18,565 ಕೋಟಿ ಏರಿಕೆಯಾಗಿದೆ. ಈ ಬಾರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್‌ನ ಗಾತ್ರ 3,27, 747 ಕೋಟಿ ರೂಪಾಯಿಯ ಬಜೆಟ್‌ಅನ್ನು ಮಂಡಿಸಿದ್ದಾರೆ. ಬೊಮ್ಮಾಯಿ ಹಾಗೂ ಸಿದ್ಧರಾಮಯ್ಯ ಸರ್ಕಾರದಲ್ಲಿ ಒಂದೇ ಒಂದು ವಿಚಾರದಲ್ಲಿ ಯಾವುದೇ ವ್ಯವಸ್ಥೆ ಆಗಿಲ್ಲ ಎಂದರೆ, ಅದು ಸಾಲ ಮರುಪಾವತಿಯಲ್ಲಿ ಎರಡೂ ಸರ್ಕಾರಗಳು ಈ ವರ್ಷ 22,441 ಕೋಟಿ ಸಾಲ ಮರುಪಾವತಿ ಮಾಡುವುದಾಗಿ ಘೋಷಣೆ ಮಾಡಿವೆ. ಇನ್ನು ಬೊಮ್ಮಾಯಿ ಸರ್ಕಾರ 77, 750 ಕೋಟಿ ಸಾಲದ ಮೊತ್ತ ಎಂದು ಬಜೆಟ್‌ನಲ್ಲಿ ಹೇಳಿದ್ದರೆ, ಬಂಡವಾಳ ವೆಚ್ಚವನ್ನು 61, 234 ಎಂದು ಹೇಳಿತ್ತು. ರಾಜಸ್ವ ವೆಚ್ಚವನ್ನು 2, 25, 57 ಕೋಟಿ ರೂಪಾಯಿ ಎಂದು ಹೇಳಿತ್ತು. ಇನ್ನೊಂದೆಡೆ ಸಿದ್ಧರಾಮಯ್ಯ ಸರ್ಕಾರ ಸಾಲದ ಮೊತ್ತವನ್ನು 85, 818 ಕೋಟಿಗೆ ಏರಿಸಿದ್ದರೆ, ಬಂಡವಾಳ ವೆಚ್ಚವನ್ನು 54, 374 ಕೋಟಿಗೆ ಇಳಿಸಿದೆ. ರಾಜಸ್ವ ವೆಚ್ಚವನ್ನು 2, 50, 933 ಕೋಟಿ ರೂಪಾಯಿ ಎಂದು ಹೇಳಿದೆ.

ಇಂಧನ, ಆಹಾರ ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ ಸಿದ್ಧು ಸರ್ಕಾರದ ಬಂಪರ್‌: ಇನ್ನು ಎರಡೂ ಬಜೆಟ್‌ಗಳನ್ನು ಹೋಲಿಕೆ ಮಾಡುವುದಾದರೆ, ಸಿದ್ಧರಾಮಯ್ಯ ಸರ್ಕಾರ ಇಂಧನ, ಆಹಾರ ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ ಬಂಪರ್‌ ಅನುದಾನ ನೀಡಿದೆ. ಅದಕ್ಕೆ ಕಾರಣ ಈ ಮೂರೂ ಇಲಾಖೆಗಳು ಸರ್ಕಾರದ ಗ್ಯಾರಂಟಿ ಯೋಜನೆಯ ಭಾಗವಾಗಿದೆ. ಬೊಮ್ಮಾಇ ಸರ್ಕಾರ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ 5676 ಕೋಟಿ ರೂಪಾಯಿ ಮೀಸಲಿಟ್ಟಿದ್ದರೆ, ಸಿದ್ಧರಾಮಯ್ಯ ಸರ್ಕಾರ 24,166 ಕೋಟಿ ಘೋಷಣೆ ಮಾಡಿದೆ. ಇದೆ ಇಲಾಖೆಯಿಂದ ಬಹುನಿರೀಕ್ಷಿತ ಗೃಹಲಕ್ಷ್ಮೀ ಯೋಜನೆ ಜಾರಿಯಾಗಬೇಕಿದೆ. ಇನ್ನು ಅನ್ನಭಾಗ್ಯ ಗ್ಯಾರಂಟಿಯ ಇಲಾಖೆಯಾಗಿರುವ ಅಹಾರ ಇಲಾಖೆಗೆ ಸಿದ್ಧರಾಮಯ್ಯ ಸರ್ಕಾ 10, 460 ಕೋಟಿ ಮೀಸಲಿಟ್ಟಿದೆ. ಇದೇ ಇಲಾಖೆಗೆ ಬೊಮ್ಮಾಯಿ ಸರ್ಕಾರ 4608 ಕೋಟಿ ಮೀಸಲಿಟ್ಟಿತ್ತು. ಅದೇ ರೀತಿ ಇಂಧನ ಇಲಾಖೆಯ ಅಡಿಯಿಂದ ಗೃಹಜ್ಯೋತಿ ಗ್ಯಾರಂಟಿ ಜಾರಿಯಾಗಬೇಕಿದೆ. ಅದಕ್ಕಾಗಿ ಈ ಇಲಾಖೆಗೆ ಸಿದ್ಧರಾಮಯ್ಯ ಸರ್ಕಾರ 22,773 ಕೋಟಿ ಹಣ ಮೀಸಲಿಟ್ಟಿದೆ. ಬೊಮ್ಮಾಯಿ ಸರ್ಕಾರ ಇದೇ ಇಲಾಖೆಗೆ 13,803 ಕೋಟಿ ರೂಪಾಯಿ ಮೀಸಲಿಟ್ಟಿತ್ತು.

ಇನ್ನುಳಿದ ಇಲಾಖೆಗೆ ನೀಡಿರುವ ಹಣ

ಇಲಾಖೆ2022- 23 ಬೊಮ್ಮಾಯಿ ಸರ್ಕಾರ2023-24 ಸಿದ್ಧರಾಮಯ್ಯ ಸರ್ಕಾರ
ಶಿಕ್ಷಣ ಇಲಾಖೆ 37,960  ಕೋಟಿ37,587 ಕೋಟಿ 
ಜಲಸಂಪನ್ಮೂಲ22,854 ಕೋಟಿ19,044 ಕೋಟಿ
ಗ್ರಾಮೀಣಾಭಿವೃದ್ಧಿ 20,494 ಕೋಟಿ18,038 ಕೋಟಿ
ಕಂದಾಯ ಇಲಾಖೆ 15,943 ಕೋಟಿ16,167 ಕೋಟಿ
ನಗರಾಭಿವೃದ್ಧಿ‌17,938 ಕೋಟಿ8,082 ಕೋಟಿ
ಸಾರಿಗೆ ಇಲಾಖೆ14,509 ಕೋಟಿ16,638 ಕೋಟಿ
ಲೋಕೋಪಯೋಗಿ 10,741 ಕೋಟಿ10,143 ಕೋಟಿ
ಸಮಾಜ ಕಲ್ಯಾಣ 11,163 ಕೋಟಿ11,173 ಕೋಟಿ
ಕೃಷಿ ಮತ್ತು ತೋಟಗಾರಿಕೆ 9,456 ಕೋಟಿ5,860 ಕೋಟಿ

ಶಾಸಕನೆಂದು ಹೇಳಿ ವಿಧಾನಸಭೆ ಒಳಹೋದ ವಕೀಲ: ಪೊಲೀಸರ ಕೈಗೆ ಸಿಕ್ಕು ವಿಲವಿಲ

ಬಿಜೆಪಿ ಸರ್ಕಾರದ 10 ಯೋಜನೆಗೆ ಕೊಕ್‌: ಉಳಿದಂತೆ ಬಿಜೆಪಿ ಸರ್ಕಾರದ ಪ್ರಮುಖ ಯೋಜನೆಗಳಾಗಿದ್ದ ರೈತರ ಹೆಣ್ಣುಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ 2500 ರಿಂದ 11000 ವಿದ್ಯಾರ್ಥಿವೇತನ ನೀಡುವ ವಿದ್ಯಾನಿಧಿ ಯೋಜನೆ, ಜಿಲ್ಲೆಗೊಂದು ಗೋಶಾಲೆ, ವಿವೇಕ ಶಾಲೆ ಅಭಿವೃದ್ಧಿ ಯೋಜನೆ, ಹಳ್ಳಿಗಳಲ್ಲಿ ಯುವಕ ಸಂಘ ಕಟ್ಟಿ ತರಬೇತಿ ನೀಡಿ ಉದ್ಯೋಗ ನೀಡುವ  ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ ಸಹಾಯಧನ ನೀಡುವ ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ, ರೈತರಿಗೆ ೧೦ ಸಾವಿರ ರೂ ಸಹಾಯಧನ ನೀಡುವ ಭೂಸಿರಿ ಯೋಜನೆ, ಪ್ರತಿ ತಿಂಗಳು ಕೃಷಿ ಮಹಿಳೆಯರಿಗೆ 500 ರೂ ಸಹಾಯಧನ ನೀಡುವ ಶ್ರಮಶಕ್ತಿ ಯೋಜನೆ, ಎಸ್ ಸಿ-ಎಸ್ ಟಿ ಯುವಕರಿಗೆ ತರಬೇತಿ ನೀಡುವ ಯೋಜನೆ ಆಗಿರುವ ಅಗ್ನಿ ವೀರ ಯೋಜನೆ, ಹಳ್ಳಿಗಳಲ್ಲಿ ಶಾಲಾ ಮಕ್ಕಳಿಗಾಗಿ ಇದ್ದ ಉಚಿತ ಬಸ್ ಯೋಜನೆ ಮಕ್ಕಳ‌ ಬಸ್ ಹಾಗೂ  ಅಂರ್ತಜಲ ಹೆಚ್ಚಿಸುವ ಜಲನಿಧಿ ಯೋಜನೆಗೆ ಕೊಕ್‌ ನೀಡಲಾಗಿದೆ. 

Karnataka Budget 2023: ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ, 10ನೇ ತರಗತಿವರೆಗೆ ವಿಸ್ತರಣೆ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌