Karnataka Budget 2022: ಪುಣ್ಯ ಕ್ಷೇತ್ರಗಳಿಗೆ ಬಂಪರ್, ಅರ್ಚಕರಿಗೆ, ಯಾತ್ರಾರ್ಥಿಗಳಿಗೆ ಗುಡ್‌ನ್ಯೂಸ್

By Suvarna News  |  First Published Mar 4, 2022, 4:36 PM IST

* ಕರ್ನಾಟಕ ಬಜೆಟ್‌ನಲ್ಲಿ ಮುಜರಾಯಿ ಇಲಾಖೆಗೆ ಹಲವು ಪ್ರಮುಖ ಘೋಷಣೆಗಳು
* ಪುಣ್ಯ ಕ್ಷೇತ್ರಗಳಿಗೆ ಬಂಪರ್ ಘೋಷಣೆ ಮಾಡಿದ ಬಸವರಾಜ ಬೊಮ್ಮಾಯಿ"
* ಅರ್ಚಕರಿಗೆ,  ಯಾತ್ರಾರ್ಥಿಗಳಿಗೆ ಗುಡ್‌ನ್ಯೂಸ್


ಬೆಂಗಳೂರು, (ಮಾ.4): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) ತಮ್ಮ ಚೊಚ್ಚಲ ಬಜೆಟ್ ಅನ್ನು ಮಂಡಿಸಿದ್ದು,  2022-23ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ (Karnataka Budget 2022-23)ಮುಜರಾಯಿ ಇಲಾಖೆಗೆ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರ ದೇವಾಲಯಗಳ (Temples) ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಆನೆ ಬಲ ತುಂಬಿದ ಬಜೆಟ್ ಇದಾಗಿದೆ ಎಂದಿದ್ದಾರೆ.

Tap to resize

Latest Videos

undefined

Karnataka Budget 2022 Live: ತೆರಿಗೆ ಬರೆ ಇಲ್ಲ, ವಾಣಿಜ್ಯ ತೆರಿಗೆ ಹೆಚ್ಚಳ ಪ್ರಸ್ತಾಪವೂ ಇಲ್ಲ!

ಭಕ್ತರ ಬಹುಬೇಡಿಕೆಯಾಗಿದ್ದ ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಗಳಿಗೆ ಸ್ವಯತ್ತತೆ ನೀಡಲು ಕ್ರಮ ಕೈಗೊಳ್ಳವುದಾಗಿ ಬೊಮ್ಮಾಯಿ ತಿಳಿಸಿದರು. ಈ ಮೂಲಕ ದೇಗುಲಗಳೇ ತನ್ನ ಅಭಿವೃದ್ಧಿ ಕಾಮಾರಿಗಳ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳ ಅರ್ಚಕರ ತಸ್ತೀಕೆ ಮೊತ್ತವನ್ನು 48 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗುವುದು. ಭಕ್ತರಿಗೆ ಆನ್‌ಲೈನ್ ಮೂಲಕವೇ ವಿವಿಧ ಸೇವೇಗಳನ್ನು ಒದಗಿಸಲು ಸಂಯೋಜಿತ ದೇವಾಲ ನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

* ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಿಗಳ ಅನುಕೂಲಕ್ಕಾಗಿ ಯಾತ್ರಿನಿವಾಸ ಸಂಕೀರ್ಣ ನಿರ್ಮಾಣಕ್ಕೆ ಎರಡು ಹಂತದಲ್ಲಿ 85 ಕೋಟಿ ರೂಪಾಯಿಗಳನ್ನು ಘೋಷಿಸಿದ್ದು, ಮೊದಲ ಹಂತದಲ್ಲಿ 45 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. 
* ಪಂಡರಾಪುರದಲ್ಲೂ ಅತಿಥಿಗೃಹವನ್ನು ಅಭಿವೃದ್ದಿಪಡಿಸಲು ಘೋಷಿಸಲಾಗಿದೆ.

 * ಪುಣ್ಯಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಕೆ.ಎಸ್‌.ಟಿ.ಡಿ.ಸಿ ವತಿಯಿಂದ ರಿಯಾಯಿತಿ ದರದಲ್ಲಿ ಪ್ಯಾಕೇಜುಗಳನ್ನು ರೂಪಿಸಲಾಗುವುದು
* ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆಯನ್ನು 30 ಸಾವಿರ ಯಾತ್ರಾರ್ಥಿಗಳಿಗೆ ತಲಾ 5,000 ರೂಗಳ ಸಹಾಯಧನ ನೀಡುವುದನ್ನ ಘೋಷಿಸಲಾಗಿದೆ.

* ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಿ, ಅಭಿವೃದ್ದಿ ಕಾಮಗಾರಿಗಳ ವಿವೇಚನೆಯನ್ನು ದೇವಾಲಯಗಳಿಗೆ ಪ್ರತ್ಯಾಯೋಜಿಸಲು ಕಾನೂನು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಘೋಷನೆ ನೀಡಲಾಗಿದೆ.
* ಚಾಮುಂಡಿ ಬೆಟ್ಟ, ಮುಳ್ಳಯನಗಿರಿ, ನಂದಿಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ ಪ್ರವಾಸೋದ್ಯಮಕ್ಕೆ ಬೂಸ್ಟ್‌ ನೀಡಲಿದೆ. 
* ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ದಿಗೆ 100 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ.

* ಬಹುದಿನಗಳ ಬೇಡಿಕೆಯಾಗಿದ್ದ ತಸ್ತೀಕ್‌ ಹಣವನ್ನು 48 ಸಾವಿರಗಳಿಂದ 60 ಸಾವಿರಗಳಿಗೆ ಹೆಚ್ಚಿಸಲಾಗಿದೆ.
* ಪ್ರಧಾನಿ ನರೆಂದ್ರ ಮೋದಿ ಡಿಜಿಟಲ್‌ ಇಂಡಿಯಾ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಲಾಖೆಯ ದೇವಾಲಯಗಳಲ್ಲಿ ಪಾರದರ್ಶಕತೆ, ದೇವಾಲಯದ ಹಣಕಾಸಿನ ಉತ್ತರದಾಯಿತ್ವ, ಡಿಜಿಟಲ್‌ ಪೇಮೆಂಟ್ಸ್‌ ಸೌಲಭ್ಯ, ಇತಿಹಾಸ, ಸೇವಾ ವಿವರ, ಉತ್ಸವ ಇತ್ಯಾದಿ ಮಾಹಿತಿಗಳನ್ನು ಆನ್‍ಲೈನ್ ಮುಖಾಂತರ ಭಕ್ತಾಧಿಗಳಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಐ.ಟಿ.ಎಂ.ಎಸ್ (Integrated Temple Management System) ತಂತ್ರಾಂಶ ಅನುಷ್ಠಾನ.

ನಿರೀಕ್ಷೆ ಮಾಡಿದ್ದ  ಮುಜರಾಯಿ ಇಲಾಖೆ ಸಚಿವೆ
ರಾಜ್ಯದ ಮುಜರಾಯಿ ಇಲಾಖೆ 'ಸಿ' ದರ್ಜೆ ದೇವಾಲಯಗಳ ಅರ್ಚಕರ ತಸ್ತೀಕ್ ಭತ್ಯೆಯನ್ನು ಬಜೆಟ್‌ನಲ್ಲಿ ಹೆಚ್ಚಿಸುವ ನಿರೀಕ್ಷೆ ಇದೆ. ದೇವಸ್ಥಾನಗಳ ಅಭಿವೃದ್ದಿಯತ್ತ ವಿಶೇಷ ಕಾಳಜಿಯನ್ನು ಹೊಂದಿರುವ ಮುಖ್ಯಮಂತ್ರಿಗಳು ಮುಂದಿನ ಆಯವ್ಯಯದಲ್ಲಿ ದೇವಸ್ಥಾನಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ,'' ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ(Shashikala Jolle) ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!