ಕರ್ನಾಟಕ ಬಜೆಟ್‌ 2019: ಕ್ರೀಡಾ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

By Web Desk  |  First Published Feb 8, 2019, 4:31 PM IST

2019-20ನೇ ಸಾಲಿನ ಕುಮಾರಸ್ವಾಮಿ ಬಜೆಟ್‌ನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಅಂದರೆ ಕ್ರೀಡೆಗೆ ಕೂಡ ಕೊಂಚ ಒತ್ತು ನೀಡಲಾಗಿದೆ. 


ಬೆಂಗಳೂರು, (ಫೆ.08): ಕುಮಾರಸ್ವಾಮಿ ಮಂಡಿಸಿರುವ ಕರ್ನಾಟಕ ರಾಜ್ಯ 2019-20ನೇ ಸಾಲಿನ ಬಜೆಟ್‌ನಲ್ಲಿ ಪಠ್ಯದ ಜೊತೆಗೆ ಆಟಕ್ಕೂ ಕೊಂಚ ಒತ್ತು ಕೊಟ್ಟಿದ್ದಾರೆ.

ಓದಿನ ಜೊತೆಗೆ ಆಟೋಟಗಳಿಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒತ್ತು ನೀಡಿದ್ದು, ಕ್ರೀಡಾಂಗಣ, ಕ್ರೀಡಾ ಹಾಸ್ಟೇಲ್ ಗಳನ್ನು ಘೋಷಣೆ ಮಾಡಲಾಗಿದೆ.

Tap to resize

Latest Videos

ಕರ್ನಾಟಕ ಬಜೆಟ್ 2019: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಛತ್ರಿ ಭಾಗ್ಯ

* ಕ್ರೀಡಾ ವಸತಿ ನಿಲಯಗಳ ಊಟೋಪಚಾರದ ದಿನಭತ್ಯೆ ಹೆಚ್ಚಳ
* ಭಾರತೀಯ ಕ್ರೀಡಾ ಪ್ರಾಧಿಕಾರದಂತೆಯೇ, ವಸತಿ ನಿಲಯಗಳಲ್ಲಿ ಭತ್ಯೆ
*ಊಟೋಪಾಚರದ ಭತ್ಯೆ ಹೆಚ್ಚಳಕ್ಕೆ 6 ಕೋಟಿ ರೂ. ಅನುದಾನ

*ರಾಜ್ಯದ 5 ಕಡೆಗಳಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ.
(ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್​, ಮಡಿಕೇರಿಯಲ್ಲಿ ಕ್ರೀಡಾ ಹಾಸ್ಟೆಲ್​)

* 10 ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ 
(ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ,
ಕಲಬುರಗಿ, ಕೋಲಾರ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಕ್ರೀಡಾ ಹಾಸ್ಟೆಲ್)
 
* ರಾಜ್ಯದ 4 ಜಿಲ್ಲಾ ಕ್ರೀಡಾಂಗಣಗಳ ಮೇಲ್ದರ್ಜೆಗೆ, 4 ಕೋಟಿ ರೂ. ಅನುದಾನ
(ಮಂಡ್ಯ, ಬೀದರ್, ತುಮಕೂರು, ಹಾಸನ ಕ್ರೀಡಾಂಗಣಗಳ ಅಭಿವೃದ್ಧಿ)

click me!