
ಬೆಂಗಳೂರು(ಫೆ.08) ಜಿಎಸ್‌ಟಿ ಬಂದ ಮೇಲೆ ರಾಜ್ಯಗಳಿಗೆ ತೆರಿಗೆ ಸಂಗ್ರಹ ಒಂದು ಸವಾಲಾಗಿರುವುದೆಂತೂ ನಿಜ. ಅನಿವಾರ್ಯವಾಗಿ ಅವಕಾಶ ಇರುವ ಜಾಗದಲ್ಲಿಯೇ ಸರಕಾರ ತೆರಿಗೆ ಹಾಕಬೇಕಾಗುತ್ತದೆ. ಅದೇ ರೀತಿ ಅಬಕಾರಿ ವಿಭಾಗದಲ್ಲಿ ಆದಾಯ ಸಂಗ್ರಹಣೆ ಮಾಡಲು ಸರಕಾರ ಮುಂದಾಗಿದೆ.
ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮತ್ತು ಲೋ ಆಲ್ಕೋಹಾಲಿಕ್ ಬಿವೆರೇಜಸ್ ಮೇಲಿನ ಅಬಕಾರಿ ಸುಂಕ ಹೆಚ್ಚಳಕ್ಕೆ ಸರಕಾರ ಬಜೆಟ್ ನಲ್ಲಿ ನಿರ್ಧಾರ ಮಾಡಿದೆ. 2019-20ನೇ ಹಣಕಾಸು ವರ್ಷದಲ್ಲಿ 20, 950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಇಟ್ಟುಕೊಳ್ಳಲಾಗಿದೆ.
ಕುಡುಕರು ಅನಿವಾರ್ಯವಾಗಿ ಹೆಚ್ಚಿನ ದರ ನೀಡಲೇಬೇಕಾಗಿದೆ. ಜಿಎಸ್‌ಟಿಯಿಂದ ಆಗುತ್ತಿರುವ ನಷ್ಟವನ್ನು ತುಂಬಿಕೊಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಉಲ್ಲೇಖ ಮಾಡಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.