Published : Mar 08, 2021, 10:41 AM ISTUpdated : Mar 08, 2021, 05:03 PM IST

Live| Karnataka Budget 2021: ಬಿಎಸ್‌ವೈ ಟಾನಿಕ್ ಬಜೆಟ್: ಇಲ್ಲಿದೆ ಹೈಲೈಟ್ಸ್!

ಸಾರಾಂಶ

ಸಿಎಂ ಬಿ. ಎಸ್. ಯಡಿಯೂರಪ್ಪ ಎಂಟನೇ ಬಾರಿ ಬಜೆಟ್ ಮಂಡಿಸಿದ್ದಾರೆ. 2,46,207 ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಜಿಲ್ಲಾವಾರು ಹಾಗೂ ಇಲಾಖಾವಾರು ಅನುದಾನ ಘೋಷಿಸಲಾಗಿದೆ. ಮಹಿಳಾ ದಿನದಂದೇ ಮಂಡಿಸಲಾದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ನಾರಿ ಶಕ್ತಿ ಹಾಗೂ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಇನ್ನು ಕೃಷಿ ಕ್ಷೇತ್ರಕ್ಕೂ ಅನುದಾನ ಘೋಷಿಸಿರುವ ಮುಖ್ಯಮಂತ್ರಿಗಳು ತೆರಿಗೆ ಹೆಚ್ಚಳಕ್ಕೆ ಬ್ರೇಕ್ ಹಾಕಿದ್ದಾರೆ. ಅತ್ತ ಧಾರ್ಮಿಕ ಕ್ಷೇತ್ರಕ್ಕೂ ಮಹತ್ವ ನಿಡಿರುವ ಬಿಎಸ್‌ವೈ, ಆರೋಗ್ಯ ಕ್ಷೇತ್ರಕ್ಕೂ ಭಾರೀ ಅನುದಾನ ಘೋಷಿಸಿದ್ದಾರೆ.  ಎಲ್ಲಾ ಜಿಲ್ಲೆಗಳಿಗೂ ಅನುದಾನ ಘೋಷಿಸಿರುವ ಬಿ. ಎಸ್. ವೈ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಪಾಲು ಮೀಸಲಿರಿಸಿದ್ದಾರೆ. ಬಿ. ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್‌ ಹೈಲೈಟ್ಸ್ ಇಲ್ಲಿದೆ ನೋಡಿ

Live| Karnataka Budget 2021: ಬಿಎಸ್‌ವೈ ಟಾನಿಕ್ ಬಜೆಟ್: ಇಲ್ಲಿದೆ ಹೈಲೈಟ್ಸ್!

05:11 PM (IST) Mar 08

ಬಜೆಟ್‌ನಲ್ಲಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ಕೊಟ್ಟ ಸಿಎಂ

 ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಸೋಮವಾರ) 2021-22ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದರು. ಸೋಮವಾರ ಮಧ್ಯಾಹ್ನ 12.05ಕ್ಕೆ ಬಜೆಟ್ ಭಾಷಣ ಆರಂಭಿಸಿದ ಬಿಎಸ್​ವೈ, 105 ಪುಟಗಳನ್ನು ಬರೋಬ್ಬರಿ ಎರಡು ತಾಸಲ್ಲಿ ಓದಿ ಮುಗಿಸಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಬಜೆಟ್‌ನಲ್ಲಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ಕೊಟ್ಟ ಸಿಎಂ

05:11 PM (IST) Mar 08

'ಓಲ್ಡ್ ವೈನ್ ಇನ್ ನ್ಯೂ ಬಾಟೆಲ್ ತರ ಬಜೆಟ್ ಮಂಡನೆ'

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಸೋಮವಾರ) 2021-22ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದರು. ಸಾಮಾನ್ಯವಾಗಿ ವಿರೋಧ ಪಕ್ಷಗಳು ಬಜೆಟ್‌ಗೆ ವ್ಯಂಗ್ಯವಾಡಿದ್ರೆ, ಆಡಳಿತ ಪಕ್ಷದ ನಾಯಕರು ಬಜೆಟ್‌ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಾರೆ.

ಸಂಪೂರ್ಣ ಸುದ್ದಿಗಾಘಿ ಇಲ್ಲಿ ಕ್ಲಿಕ್ ಮಾಡಿ: 'ಓಲ್ಡ್ ವೈನ್ ಇನ್ ನ್ಯೂ ಬಾಟೆಲ್ ತರ ಬಜೆಟ್ ಮಂಡಿನೆ'

05:10 PM (IST) Mar 08

ಕರ್ನಾಟಕ ಬಜೆಟ್ 2021: ಶಿಕ್ಷಣ ಕ್ಷೇತ್ರಕ್ಕೆ ಯಡಿಯೂರಪ್ಪ ಘೋಷಿಸಿದ ಪ್ರಮುಖಾಂಶಗಳು

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಸೋಮವಾರ) ಮಂಡಿಸಿರುವ ಕರ್ನಾಟಕ ಬಜೆಟ್ 2021ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ 50 ಮೆಟ್ರಿಕ್ ನಂತರದ ಹಾಸ್ಟೆಲ್ ಗಳ ಸ್ಥಾಪನೆ ಮಾಡುವುದಾಗಿ ಹೇಳಿರುವ ಯಡಿಯೂರಪ್ಪ, ಇದಕ್ಕಾಗಿ 50 ಕೋಟಿ ರೂಪಾಯಿ ವ್ಯಯಿಸಲಾಗುವುದು, ಇದರಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕರ್ನಾಟಕ ಬಜೆಟ್ 2021: ಶಿಕ್ಷಣ ಕ್ಷೇತ್ರಕ್ಕೆ ಯಡಿಯೂರಪ್ಪ ಘೋಷಿಸಿದ ಪ್ರಮುಖಾಂಶಗಳು

05:09 PM (IST) Mar 08

'ಒಂದು ಪೈಸೆ ತೆರಿಗೆ ಹಾಕಿಲ್ಲ, ಇದೊಂದು ಸರ್ವವ್ಯಾಪಿ ಬಜೆಟ್'

 ಬಜೆಟ್ ಮಂಡಿಸಿದ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಮಂಡನೆಯಾದ ಬಜೆಟ್ ಇದು. ನೈಸರ್ಕಿಗ ವಿಕೋಪ, ಕೊರೋನಾ ಕಾರಣಕ್ಕೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದವು. ಲಾಕ್ ಡೌನ್ ಮತ್ತಿತರ ಕಾರಣಕ್ಕೆ ಆರ್ಥಿಕ ಚಟುವಟಿಕೆ ನಡೆಯದೆ ರಾಜಸ್ವ ಸಂಗ್ರಹಕ್ಕೆ ಪೆಟ್ಟು ಬಿದ್ದಿದೆ. ಆದರೆ ಧ್ರತಿಗೆಡದೆ ಸಂಬಳ
 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 'ಒಂದು ಪೈಸೆ ತೆರಿಗೆ ಹಾಕಿಲ್ಲ, ಇದೊಂದು ಸರ್ವವ್ಯಾಪಿ ಬಜೆಟ್'

05:04 PM (IST) Mar 08

ಬಿಎಸ್‌ವೈ ಬಜೆಟ್ ಹೈಲೈಟ್ಸ್

"

05:01 PM (IST) Mar 08

ಬಜೆಟ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?

04:59 PM (IST) Mar 08

ರಾಜ್ಯ ಬಜೆಟ್ ಗೆ ಸಿದ್ದರಾಮಯ್ಯ ಅಸಮಾಧಾನ

ಇದನ್ನ ಸಿಎಂ ಯಡಿಯೂರಪ್ಪ ಒಳ್ಳೆ ಬಜೆಟ್ ಅಂತ ಹೇಳ್ತಾ ಇದ್ದಾರೆ

ಇದು ಅಂತ್ಯತ ಕಳಪೆ ಬಜೆಟ್

ಈ ವರ್ಷದ ದಿವಾಳಿ ಬಜೆಟ್

ಹೋಗ್ಲಿ ಅಭಿವೃದ್ಧಿ ಕೆಲಸಕ್ಕೆ ಹಣ ಕೊಟ್ಟಿದ್ದಾರಾ?

ಕಳೆದ ವರ್ಷಕ್ಕಿಂತ ಕಡಿಮೆ ಅಯ್ತು

ರಾಜ್ಯ ಬಜೆಟ್ ಗೆ ಸಿದ್ದರಾಮಯ್ಯ ಅಸಮಾಧಾನ

04:27 PM (IST) Mar 08

ರಾಜ್ಯ ಬಜೆಟ್ ಸಿಎಂ ತವರು ಶಿವಮೊಗ್ಗ ಜಿಲ್ಲೆಗೆ ಸಿಕ್ಕಿದ್ದೇನು

ಶಿವಮೊಗ್ಗದಲ್ಲಿ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರಕ್ಕೆ 2 ಕೋಟಿ ರೂಪಾಯಿ ಅನುದಾನ

ಆಯುರ್ವೇದ ಕಾಲೇಜ್ ಅನ್ನು ಆಯುಷ್ ವಿವಿ ಯಾಗಿ ಮೇಲ್ದರ್ಜೆಗೆ ಕ್ರಮ

ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ , ಕಿದ್ವಾಯಿ ಮಾದರಿಯ ಕ್ಯಾನ್ಸರ್ ಕೇಂದ್ರ ಸ್ಥಾಪನೆ

ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ

04:24 PM (IST) Mar 08

ಮೀನುಗಾರಿಕೆಗೆ ಬಿಎಸ್‌ವೈ ಬಜೆಟ್‌ನಲ್ಲಿ ಸಿಕ್ಕ ಅನುದಾನ, ಕೊಡುಗೆ ಏನು?

ಕೊರೋನಾದಿಂದ ಕಂಗೆಟ್ಟು ಆರ್ಥಿಕವಾಗಿ ನಲುಗಿದ್ದ ರಾಜ್ಯಕ್ಕೆ ಬಿಎಸ್‌ ಯಡಿಯೂರಪ್ಪ ಬಜೆಟ್ ಟಾನಿಕ್ ನೀಡಿದ್ದಾರೆ. ಆರೋಗ್ಯ, ಕೃಷಿ, ಮಹಿಳಾ ವರ್ಗ ಹೀಗೆ ಅನೇಕ ಕ್ಷೇತ್ರಗಳಿಗೆ ಅನುದಾನ, ಘೊಷಣೆ ಮಾಡಿರುವ ಸಿಎಂ ಯಡಿಯೂರಪ್ಪ ಮೀನುಗಾರಿಕಾ ಕ್ಷೇತ್ರಕ್ಕೂ ಕೆಲ ಘೋಷಣೆಗಳನ್ನು ಮಾಡಿದ್ದಾರೆ.

sಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಮೀನುಗಾರಿಕೆಗೆ ಬಿಎಸ್‌ವೈ ಬಜೆಟ್‌ನಲ್ಲಿ ಸಿಕ್ಕ ಅನುದಾನ, ಕೊಡುಗೆ ಏನು?

04:05 PM (IST) Mar 08

ಇಡೀ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಜಾಸ್ತಿ ಇದೆ

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೀಲ್ ತೆರಿಗೆ ಕಡಿಮೆ ಮಾಡದ ವಿಚಾರ.

ಇಡೀ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಜಾಸ್ತಿ ಇದೆ..

ಆದರೆ ಕರ್ನಾಟಕದಲ್ಲಿ ಮಾತ್ರ ಉಳಿದ ರಾಜ್ಯಕ್ಕಿಂತ ಕಡಿಮೆ ಇದೆ..

ಯಾವ ಇಲಾಖೆಗೂ ನಾನು ಹಣ ಕಟ್ ಮಾಡಿಲ್ಲ

ಕಳೆದ ವರ್ಷ ಕೊಟ್ಟಿದ್ದಕ್ಕಿಂತ ಈ ಬಾರಿ ಹೆಚ್ಚಿಗೆ ಇಲಾಖೆಗಳಿಗೆ ಅನುದಾನ ಕೊಟ್ಟಿದ್ದೇನೆ

04:03 PM (IST) Mar 08

ಇದು ಆಶಾದಾಯಕ ಬಜೆಟ್ ಆಗಿದೆ.

ಈ ವರ್ಷ ಬೆಳೆ ವಿಮೆ ಯೋಜನೆಗೆ 900 ಕೋಟಿ.

ಸಾವಯವ ಕೃಷಿ ಉತ್ತೇಜನಕ್ಕೆ ಆದ್ಯತೆ ನೀಡಲಾಗಿದೆ.

ಫುಡ್ ಪಾರ್ಕ್ ನಿರ್ಮಾಣ. ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ 40 ರಿಂದ 50ಕ್ಕೆ ಮೀಸಲಾತಿ.

25-45 ಹೆಚ್.ಪಿ ಟ್ರಾಕ್ಟರ್ ನಿರ್ಮಾಣ ಮಾಡಲಾಗ್ತಿದೆ.

ಕಳೆದ ವರ್ಷದ ಯೋಜನೆಯನ್ನೂ ಮುಂದುವರೆಸಲಾಗ್ತಿದೆ.

ಇದು ಆಶಾದಾಯಕ ಬಜೆಟ್ ಆಗಿದೆ.

ಬಿಸಿ ಪಾಟೀಲ್ ಹೇಳಿಕೆ

04:02 PM (IST) Mar 08

ಬಿಎಸ್‌ವೈ ಬಜೆಟ್ ಭಾಷಣದ ಒಂದು ಝಲಕ್!

"

04:00 PM (IST) Mar 08

ಬಿಎಸ್‌ವೈ ಬಜೆಟ್ ಭಾಷಣದ ಪ್ರತಿ!

03:49 PM (IST) Mar 08

ಜನಪ್ರಿಯ ಮುಖ್ಯ ಮಂತ್ರಿ ಬಜೆಟ್ ಮಂಡಿಸಿದ್ದಾರೆ

ಜನಪ್ರಿಯ ಮುಖ್ಯ ಮಂತ್ರಿ ಬಜೆಟ್ ಮಂಡಿಸಿದ್ದಾರೆ. ಗೋ ಹತ್ಯೆ ನಿಷೇಧ ಜಾರಿಗೆ ತಂದಿದ್ದಾರೆ. ಪ್ರತೀ ಜಿಲ್ಲೆಗೂ ಗೋಶಾಲೆ ನಿರ್ಮಾಣ ಮಾಡಿದ್ದಾರೆ. ನೂರು ಎಕರೆ ಜಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಬೃಹತ್ ಪಾರ್ಕ್ ನಿರ್ಮಾಣ ಮಾಡಲಾಗ್ತಿದೆ. ಮುಂದಿನ ದಿನಗಳಲ್ಲಿ ಗೋ ಶಾಲೆ ಅಭಿವೃದ್ಧಿ ಮಾಡ್ತೀವಿ: ಸಚಿವ ಪ್ರಭು ಚೌಹಾಣ್ ಹೇಳಿಕೆ

03:46 PM (IST) Mar 08

ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಪರವಾದ ಬಜೆಟ್

ಈ ಬಜೆಟ್ ನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನ ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೂ ನ್ಯಾಯ ಒದಗಿಸುವಂತ ಪ್ರಯತ್ನವನ್ನ ಸಿಎಂ ಮಾಡಿದ್ದಾರೆ. 3788 ಕೋಟಿ ಹಣವನ್ನ ಮಹಿಳಾ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದಾರೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಪರವಾದ ಬಜೆಟ್ ಇದಾಗಿದೆ. ಮಹಿಳೆಯರನ್ನ ಉಮ್ಯಮಿಗಳನ್ನಾಗಿಸುವ ವಿಶೇಷ ಯೋಜನೆಯನ್ನು ಘೋಷಿಸಲಾಗಿದೆ: ಸಚಿವ ಶಶಿಕಲಾ ಜೊಲ್ಲೆ ಹೇಳಿಕೆ

03:45 PM (IST) Mar 08

'ಬೃಹ್ಮನಿಗೂ ಏನು ಮಾಡಲಾಗದ ಸಂದರ್ಭದಲ್ಲಿ ಬಿಎಸ್'ವೈ ಒಳ್ಳೆಯ ಬಜೆಟ್ ನೀಡಿದ್ದಾರೆ'

ಕರೋನಾದಂತ ಕಷ್ಟದ ಕಾಲದಲ್ಲಿ ಸಿಎಂ ಯಡಿಯೂರಪ್ಪ ಬಜೆಟ್

ಬೃಹ್ಮನಿಗೂ ಏನು ಮಾಡಲಾಗದ ಸಂದರ್ಭದಲ್ಲಿ ಬಿಎಸ್'ವೈ ಒಳ್ಳೆಯ ಬಜೆಟ್ ನೀಡಿದ್ದಾರೆ. 

ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ 500 ಕೋಟಿ ನೀಡಿದ್ದಾರೆ

ಎತ್ತಿನಹೊಳೆ ಯೋಜನೆಗೆ ವೇಗ ನೀಡಲು ಹೆಚ್ಚಿನ ಒತ್ತು ನೀಡಿದ್ದಾರೆ

ಬೆಂಗಳೂರಿಗೆ ಹೆಚ್ಚುವರಿ ನೀರು ತರಲು ಯೋಜನೆ ರೂಪಿಸಿದ್ದಾರೆ

ಕಂದಾಯ ಇಲಾಖೆ ಅಡಿ ಜನರಿಗೆ ಅನುಕೂಲ ಆಗುವಂತೆ,  ಮಲೆನಾಡಿನ ಭಾಗದ ಜನರ ಸಮಸ್ಯೆಗೆ ಪರಿಹಾರ ನೀಡಲು ಒತ್ತು ನೀಡಿದ್ದಾರೆ

ಕಾಂಗ್ರೆಸ್ ವಿರೋಧ ಮಾಡಿದ ವಿಚಾರ: ಕೇಂದ್ರದಲ್ಲಿ ಮೋದಿ ಬಗ್ಗೆ ಮಾತಾಡಲು ಕಾಂಗ್ರೆಸ್ ಗೆ ವಿಷಯ ಇಲ್ಲ
.
ರಾಜ್ಯದಲ್ಲಿ ಯಡಿಯೂರಪ್ಪ ವಿರುದ್ಧ ಮಾತಾಡಲು ವಿಚಾರ ಇಲ್ಲ

ಹೀಗಾಗಿ ಸುಮ್ನೆ ಕಾಂಗ್ರೆಸ್ ವಿರೊಕಧಕ್ಕಾಗಿ ವಿರೋಧ ಮಾಡಿದೆ ಅಷ್ಟೇ 

ಕಂದಾಯ ಸಚಿವ ಅಶೋಕ್ ಹೇಳಿಕೆ

03:02 PM (IST) Mar 08

ಆರೋಗ್ಯವೇ ಭಾಗ್ಯ: ಯಡಿಯೂರಪ್ಪ ಆರೋಗ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳು

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2021-22ನೇ ಸಾಲಿನ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೊಸ ಕೊಡುಗೆಗಳನ್ನು ಘೋಷಿಸಿದ್ದಾರೆ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಿದೆ. ಆರೋಗ್ಯವಿದ್ದರೆ ಏನು ಬೇಕಿದ್ದರೂ ಪಡೆಯಬಹುದು ಎನ್ನುವುದು ಇದರರ್ಥ.ಅದರಂತೆ ಈ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಯಡಿಯೂಪ್ಪನವರು ಆರೋಗ್ಯ ಇಲಾಖೆಗೆ ಒಟ್ಟು 11,908 ಕೋಟಿ ರೂ. ಅನುದಾನ ನಿಗದಿಪಡಿಸಿದ್ದಾರೆ. ಹಾಗಾದ್ರೆ, ಆರೋಗ್ಯ ಇಲಾಖೆಗೆ ಏನೆಲ್ಲಾ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಸಂಪೂರ್ಣ ಸುದ್ದಿಗಾಘಿ ಇಲ್ಲಿ ಕ್ಲಿಕ್ ಮಾಡಿ: ಆರೋಗ್ಯವೇ ಭಾಗ್ಯ: ಯಡಿಯೂರಪ್ಪ ಆರೋಗ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳು

03:01 PM (IST) Mar 08

ಕರ್ನಾಟಕ ಬಜೆಟ್; ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಸಿದ್ದು ಬೇಡಿಕೆಗೆ ಮನ್ನಣೆ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಕೃಷಿ ಕ್ಷೇತ್ರಕ್ಕೆ  31,028 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.  ಹಸಿರೆಲೆ ಗೊಬ್ಬರ, ಸಾವಯವ, ಸಿರಿಧಾನ್ಯ ಮಾರಾಟಕ್ಕೆ ಇ ಮಾರುಕಟ್ಟೆ ಪ್ರೈ. ಲಿಮಿಟೆಡ್, ಅಡಿಕೆ ಬೆಳೆಗೆ ಪರಿಹಾರ ಬೆಲೆಯಾಗಿ 25 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕರ್ನಾಟಕ ಬಜೆಟ್; ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಸಿದ್ದು ಬೇಡಿಕೆಗೆ ಮನ್ನಣೆ

02:59 PM (IST) Mar 08

ಕರ್ನಾಟಕ ಬಜೆಟ್‌: ಕ್ರೀಡಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಿಎಸ್‌ವೈ ನೀಡಿದ್ದೇನು?

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಮ್ಮ 8ನೇ ರಾಜ್ಯ ಬಜೆಟ್‌ ಮಂಡಿಸಿದ್ದು, ಎಲ್ಲಾ ಕ್ಷೇತ್ರಗಳಿಗೂ ಸಾಕಷ್ಟು ಅಳೆದು ತೂಗಿ ಬಂಪರ್ ಯೋಜನೆಗಳನ್ನು ಘೋಷಿಸಿದ್ದಾರೆ. ಅದೇ ರೀತಿ ಕ್ರೀಡಾ ಕ್ಷೇತ್ರಕ್ಕೂ ಸಿಎಂ ಬಿಎಸ್‌ವೈ ಅನುದಾನ ಮೀಸಲಿಟ್ಟಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕರ್ನಾಟಕ ಬಜೆಟ್‌: ಕ್ರೀಡಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಿಎಸ್‌ವೈ ನೀಡಿದ್ದೇನು?

02:43 PM (IST) Mar 08

ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್

ಸಿಎಂ ಯಡಿಯೂರಪ್ಪ ಎಂಟನೇ ಬಜೆಟ್ ಮಂಡಿಸಿದ್ದಾರೆ. ಯಾವುದೇ ನಿರ್ಧಿಷ್ಟ ಗುರಿ, ಕಾರಣ ಇಲ್ಲದಿರೋ ಬಜೆಟ್.

ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್. 71ಸಾವಿರ ಕೋಟಿ ಸಾಲ ಮಾಡಿರೋದಾಗಿ ಘೋಷಣೆ ಮಾಡಿದ್ದಾರೆ.

2002 ರಲ್ಲಿ ಫಿಸಿಕಲ್ ಆಕ್ಟ್ ತಂದಿದ್ದರು. ಅವರ ಪ್ರಕಾರ 25ರಷ್ಟು ಮೇಲೆ ಹೋಗದಂತೆ ಸೂಚಿಸಲಾಗಿತ್ತು.

ಅದನ್ನು ಮೀರಿ 26% ಸಾಲ ಪಡೆದಿದ್ದಾರೆ. ಮುಂದಿನ ದಿನದಲ್ಲಿ ಕರ್ನಾಟಕದ ಆಯವ್ಯಯ ಕೆಟ್ಟ ಪರಿಸ್ಥಿತಿ ಬರಲಿದೆ.

ಅಮೆಂಡ್ ಮಾಡಿ ಸರಿಸಮ ಮಾಡೋದಾಗಿ ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ ಇನ್ ಡಿಸಿಪ್ಲೀನ್ ಮಾಡಲು ಹೊರಟಿದ್ದಾರೆ.

ಹಸಿರು ಶಾಲು ಹಾಕಿ ಬಜೆಟ್ ಮಂಡಿಸ್ತಿದ್ದಾರೆ. ಆದ್ರೆ ರೈತರಿಗೆ ಅನುಕೂಲವಾಗೋ ಯಾವುದೇ ಯೋಜನೆ ಕಾಣ್ತಿಲ್ಲ.

ಇಡೀ ದೇಶದಲ್ಲಿ ಕೃಷಿ ಅಮೇಂಡ್‌ಮೆಂಟ್ ವಿರೋಧಿಸ್ತಿದ್ದಾರೆ. ಕೃಷಿ, ನಿರಾವರಿಗೆ ಯಾವುದೇ ಯೋಜನೆ ಕಾಣ್ತಿಲ್ಲ.

ಎರಡು ಇದಾಯಕ್ಕೆ 500ಕೋಟಿ ಕೊಡೋದಾಗಿ ಘೋಷಿಸಿದ್ದಾರೆ. ಅಂಬೇಡ್ಕರ್, ಜಗಜೀವನ್ ಸೇರಿದಂತೆ ಕೆಲ ಕಾರ್ಪೊರೇಷನ್‌ಗಳಿಗೆ 500 ಕೋಟಿ ನೀಡಿದ್ದಾರೆ.

ಇದು ಯಾವ ಪುರುಷಾರ್ಥಕ್ಕೆ ಇದು ಘೋಷಿಸಬೇಕು. ಕಳೆದ‌ ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಬಿಡುಗಡೆ ಮಾಡೋದಾಗಿ ಹೇಳಿ, ಒಂದು ರೂಪಾಯಿ ಬಿಡುಗಡೆಯಾಗಿಲ್ಲ.

ದಾವೋಸ್‌ಗೆ ತೆರಳಿ ಹೂಡಿಕೆದಾರರನ್ನ ಕರೆದುಕೊಂಡು ಬರೋದಾಗಿ ಹೇಳಿದ್ರು. ಯಾರನ್ನೂ ಸಹ ಕರೆತಂದಿಲ್ಲ.

ಮಾಜಿ ಸಚಿವ ಪರಮೇಶ್ವರ್ ಹೇಳಿಕೆ

02:36 PM (IST) Mar 08

ಬಜೆಟ್ ಮಂಡನೆ ಮುಕ್ತಾಯ!

02:34 PM (IST) Mar 08

ಗೋ ಸಂಪತ್ತಿನ ರಕ್ಷಣೆಗೆ ಗೋಶಾಲೆಗಳು!

02:33 PM (IST) Mar 08

ಮೀನುಗಾರಿಕೆಗೆ ಉತ್ತೇಜನ!

02:30 PM (IST) Mar 08

ಚಿಕ್ಕಮಗಳೂರು ಜಿಲ್ಲೆಯ ‌ಪಾಲಿಗೆ ನಿರಾಶೆ

ಚಿಕ್ಕಮಗಳೂರು ಜಿಲ್ಲೆಯ ‌ಪಾಲಿಗೆ ನಿರಾಶೆ.

ಕಳೆದ ವರ್ಷ ಆದ್ಯತೆ ಇರಲಿಲ್ಲ, ಈ ಬಾರಿಯೂ ನಿರಾಶೆ

02:24 PM (IST) Mar 08

ಸಹಕಾರ ಕ್ಷೇತ್ರದ ಮೂಲಕ ರೈತರ ಅಭಿವೃದ್ಧಿ

02:22 PM (IST) Mar 08

ಇಲಾಖಾವಾರು ಅನುದಾನ ನಿಗದಿ!

02:19 PM (IST) Mar 08

ನಾರಿ ಸುರಕ್ಷತೆಗೆ ಬಿಎಸ್‌ವೈ ಒತ್ತು!

02:18 PM (IST) Mar 08

ಇದೊಂದು ಡಬ್ಬಾ ಬಜೆಟ್

ಈ ಬಜೆಟ್ ನಲ್ಲಿ ಏನೂ ಇಲ್ಲ. ಕಳೆದ ಬಾರಿ ಕೋವಿಡ್ ಇತ್ತು. ಬಡವರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಬೆಳೆ ನಾಶ ಆಗಿತ್ತು, ಬರವಿತ್ತು, ರೈತರಿಗೆ ಏನಾದ್ರೂ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. 2019-20 ರಲ್ಲಿ ಘೋಷಣೆ  ಕಾರ್ಯಕ್ರಮ ಗಳಿಗೆ  ಇನ್ನೂ ಅನುದಾನ ಬಿಡುಗಡೆ ಆಗಿಲ್ಲ. ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆ ಹೆಚ್ಚಾಗಿದೆ. ಅದರ ಮೇಲಿನ ತೆರಿಗೆ ಕಡಿಮೆ  ಮಾಡಬೇಕಾಗಿತ್ತು. ಇದೊಂದು ಡಬ್ಬಾ ಬಜೆಟ್ ದಿಕ್ಕು ದೆಸೆ ಇಲ್ಲದ ಬಜೆಟ್ ಇದು- ಬಂಡೆಪ್ಪ ಕಾಂಶಂಪುರ್ 

02:13 PM (IST) Mar 08

ಬೆಂಗಳೂರು ಮಿಷನ್ 2022: ಬಜೆಟ್‌ನಲ್ಲಿ ರಾಜ್ಯ ರಾಜಧಾನಿಗೆ ಸಿಕ್ಕಿದ್ದಿಷ್ಟು...!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಸೋಮವಾರ) 2021-22ರ ಬಜೆಟ್ ಮಂಡನೆ ಮಾಡಿದ್ದು, ಸಿಲಿಕಾನ್ ಸಿಟಿ, ರಾಜ್ಯದ ರಾಜಧಾನಿ ಬೆಂಗಳೂರಿಗೆ ಅನುದಾದ ಜೊತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಬೆಂಗಳೂರು ಮಿಷನ್ 2022: ಬಜೆಟ್‌ನಲ್ಲಿ ರಾಜ್ಯ ರಾಜಧಾನಿಗೆ ಸಿಕ್ಕಿದ್ದಿಷ್ಟು...!

02:12 PM (IST) Mar 08

ಕರ್ನಾಟಕ ಬಜೆಟ್; ಗೋ ಹತ್ಯೆ ನಿಷೇಧ ಕಾಯ್ದೆ ನಂತರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ

ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿದ್ದ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮತ್ತೊಂದು ದಿಟ್ಟ ಹೆಜ್ಜೆ  ಇಟ್ಟಿದೆ. ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ  ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಜಾರಿ  ಮಾಡಿದ್ದಾರೆ. ಇದರ ಅನ್ವಯ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗೋ ಹತ್ಯೆ ನಿಷೇಧ ಕಾಯ್ದೆ ನಂತರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ

02:11 PM (IST) Mar 08

ರಾಜ್ಯ ಬಜೆಟ್ 2021: ವಿಶ್ವ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಭರ್ಜರಿ ಗಿಫ್ಟ್

 ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು (ಸೋಮವಾರ) 2021ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಮಂಡನೆಯ ಆರಂಭದಲ್ಲಿ ವಿಶ್ವ ಮಹಿಳಾ ದಿನಾಚರಣೆಯಂದೇ ರಾಜ್ಯದ ಮಹಿಳೆಯರ ಕುರಿತಂತೆ ಮೊದಲು ಘೋಷಣೆಗಳನ್ನು ಮಾಡಿದಂತ ಸಿಎಂ ಯಡಿಯೂರಪ್ಪ ಅವರು,ತಮ್ಮ ಬಜೆಟ್‌ನಲ್ಲಿ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. 

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಮಹಿಳೆಯರಿಗೆ ಭರ್ಜರಿ ಗಿಫ್ಟ್

02:02 PM (IST) Mar 08

ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಕ್ರಮ

ಬೆಂಗಳೂರಿನ ವಿವಿಧೆಡೆ ಮೇಲ್ಸೇತುವೆ ನಿರ್ಮಾಣಕ್ಕೆ ಆದ್ಯತೆ

ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಕ್ರಮ

ರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿಗೆ 169 ಕೋಟಿ

01:58 PM (IST) Mar 08

ವಲಸೆ ಕಾರ್ಮಿಕರು, ಬಡವರಿಗಾಗಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಬೆಂಗಳೂರು 57 ವಾರ್ಡ್‌ಗಳಲ್ಲಿ 10 ಕೋಟಿ ವೆಚ್ಚದ ಜನಾರೋಗ್ಯ ಕೇಂದ್ರ

ಆರೋಗ್ಯ ಇಲಾಖೆ ಮೂಲಕ ತಪಾಸಣಾ ಸೌಲಭ್ಯ ವ್ಯವಸ್ಥೆ

ಕೆಸಿ ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆಯ ಉಪಕೇಂದ್ರ ನಿರ್ಮಾಣ

20 ಕೋಟಿ ವೆಚ್ಚದಲ್ಲಿ ಉಪಕೇಂದ್ರ ನಿರ್ಮಾಣ

ವಿಕ್ಟೋರಿಯಾದಲ್ಲಿ ಅಂಗಾಂಗ ಕಸಿ ಸೌಲಭ್ಯಕ್ಕೆ ಚಾಲನೆ

28 ಕೋಟಿ ವೆಚ್ಚದಲ್ಲಿ 120 ಹಾಸಿಗೆ ವ್ಯವಸ್ಥೆ

ವಲಸೆ ಕಾರ್ಮಿಕರು, ಬಡವರಿಗಾಗಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
 

01:52 PM (IST) Mar 08

ಮುಖ್ಯಮಂತ್ರಿ ಗಳ ಮೆಗಾ ಸಂಯೋಜಿತ ಟೌನ್ ಶಿಪ್

ಬೆಂಗಳೂರು - ಮುಂಬೈ ಮಾರ್ಗದಲ್ಲಿ ಕೈಗಾರಿಕಾ ಕಾರಿಡಾರ್ ನಲ್ಲಿ 500 ಎಕರೆ ಜಮೀನಿನಲ್ಲಿ ಮುಖ್ಯಮಂತ್ರಿ ಗಳ ಮೆಗಾ ಸಂಯೋಜಿತ ಟೌನ್ ಶಿಪ್

01:51 PM (IST) Mar 08

234 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ

ವೃಷಭಾವತಿ ಕಣಿವೆಯಿಂದ 500 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ನಗರ, ಗ್ರಾಮಾಂತರ , ತುಮಕೂರು, ಚಿಕ್ಕಬಳ್ಳಾಪುರದ 234 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ

01:49 PM (IST) Mar 08

ವಿವಿಧ ಜಾತಿ ಸಮುದಾಯಗಳಿಗೆ ಬಜೆಟ್ಟಿನಲ್ಲಿ ಇಷ್ಟಿಷ್ಟು ಕೋಟಿ ಅನುದಾನ

2021ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವರ್ಷವೂ ಮಠಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ ಘೋಷಿಸಿದ್ದಾರೆ

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಜಾತಿ ಸಮುದಾಯಗಳಿಗೆ, ಮಠಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಅನುದಾನ

01:45 PM (IST) Mar 08

ಈ ಬಜೆಟ್ ನಲ್ಲಿ ಇಲಾಖಾವಾರು‌ ಅನುದಾನ ನಿಗದಿ

- ಶಿಕ್ಷಣ ಇಲಾಖೆ - 29,688 ಕೋಟಿ

- ನಗರಾಭಿವೃದ್ಧಿ ಇಲಾಖೆ - 27,386 ಕೋಟಿ 

- ಜಲಸಂಪನ್ಮೂಲ ಇಲಾಖೆ - 21,181 ಕೋಟಿ

- ಇಂಧನ ಇಲಾಖೆ - 16,516 ಕೋಟಿ ರೂ

- ಗ್ರಾಮೀಣಾಭಿವೃದ್ಧಿ ಇಲಾಖೆ - 16,036 ಕೋಟಿ

- ಕಂದಾಯ ಇಲಾಖೆ - 12,384 ಕೋಟಿ ರೂ

- ಆರೋಗ್ಯ ಇಲಾಖೆ - 11,908 ಕೋಟಿ ರೂ

- ಒಳಾಡಳಿತ ಮತ್ತು ಸಾರಿಗೆ - 10,330 ಕೋಟಿ ರೂ

- ಲೋಕೋಪಯೋಗಿ ಇಲಾಖೆ - 10,256 ಕೋಟಿ ರೂ

- ಸಮಾಜ ಕಲ್ಯಾಣ ಇಲಾಖೆ - 8,864 ಕೋಟಿ ರೂ

- ಕೃಷಿ/ತೋಟಗಾರಿಕೆ ಇಲಾಖೆ - 7,297 ಕೋಟಿ ರೂ

- ಮಹಿಳಾ / ಮಕ್ಕಳ ಕಲ್ಯಾಣ ಇಲಾಖೆ - 4,531 ಕೋಟಿ ರೂ

- ವಸತಿ ಇಲಾಖೆ - 2,290 ಕೋಟಿ ರೂ

- ಆಹಾರ ಇಲಾಖೆ - 2,374 ಕೋಟಿ ರೂ

01:43 PM (IST) Mar 08

ಹೊಸ ಮಾರುಕಟ್ಟೆ ಸ್ಥಾಪನೆಯಿಂದ ರೈತರ ಆದಾಯ ಹೆಚ್ಚಳ!

01:43 PM (IST) Mar 08

ಕೇಂದ್ರ ಸರ್ಕಾರದ ಮಾದರಿಯಲ್ಲಿ ಬ್ರಾಂಡ್ ಪ್ರೊಮೋಷನ್ ಕೌನ್ಸಿಲ್ ರಚನೆ..

ಸರ್ಕಾರದ ಜಾಹಿರಾತು ಮತ್ತು ಪ್ರಕಟಣೆಗಳನ್ನು ಸಂಯೋಜಿಸಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ಬ್ರಾಂಡ್ ಪ್ರೊಮೋಷನ್ ಕೌನ್ಸಿಲ್ ರಚನೆ..

01:36 PM (IST) Mar 08

ಹೊಸ ವಿಜಯನಗರ ಜಿಲ್ಲೆಯ ಮೂಲಸೌಕರ್ಯ ಕ್ಕೆ ಪ್ರತ್ಯೇಕ ನಿಧಿ ಇಲ್ಲ

ಹೊಸ ವಿಜಯನಗರ ಜಿಲ್ಲೆಯ ಮೂಲಸೌಕರ್ಯ ಕ್ಕೆ ಪ್ರತ್ಯೇಕ ನಿಧಿ ಇಲ್ಲ

ಆದ್ಯತೆ ಮೇಲೆ ಮೂಲಸೌಕರ್ಯ ಒದಗಿಸಲು ತಿರ್ಮಾನ

ಎಲ್ಲಾ ಶೈಕ್ಷಣಿಕ ದಾಖಲೆಗಳು ಆನ್ ಲೈನ್ ನಲ್ಲಿ ಸಂಗ್ರಹ