ಹಬ್ಬದ ಸೀಸನ್ ಶುರುವಾದ ತಕ್ಷಣ ಬಟ್ಟೆಗಳಿಂದ ಹಿಡಿದು ಶೂಗಳ ತನಕ ಕಂಡಿದ್ದೆಲ್ಲ ಖರೀದಿಸುವ ಭಾರತೀಯರು, ಒಳ ಉಡುಪುಗಳನ್ನು ಖರೀದಿಸಲು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಜನಪ್ರಿಯ ಒಳ ಉಡುಪುಗಳ ಬ್ರ್ಯಾಂಡ್ ಗಳಾದ ಜಾಕಿಯಿಂದ ಹಿಡಿದು ರೂಪ ತನಕ ಎಲ್ಲದರ ಮಾರಾಟದಲ್ಲೂ ಭಾರೀ ಇಳಿಕೆಯಾಗಿದೆ.
Business Desk: ಹಬ್ಬದ ಸೀಸನ್ ಶುರುವಾಗಿದೆ. ಶಾಪಿಂಗ್ ಮಾಡಲು ಇದಕ್ಕಿಂತ ಉತ್ತಮ ನೆಪ ಬೇರೆ ಬೇಕೆ? ನಾನಾ ವಿಧದ ಬಟ್ಟೆಗಳನ್ನು ಖರೀದಿಸುವಲ್ಲಿ ಬಹುತೇಕರು ತಲ್ಲೀನರಾಗಿದ್ದಾರೆ. ಆದರೆ, ಈ ನಡುವೆ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಸೀರೆಯಿಂದ ಹಿಡಿದು ಮಾಡರ್ನ್ ಡ್ರೆಸ್ ಗಳ ತನಕ ನಾನಾ ನಮೂನೆಯ ಬಟ್ಟೆಗಳು, ಸೌಂದರ್ಯವರ್ಧಕಗಳು, ಶೂ, ಬ್ಯಾಗ್ ಎಂದು ಎಲ್ಲವನ್ನೂ ಖರೀದಿಸುವ ಭಾರತೀಯರು ಚಡ್ಡಿ, ಬ್ರಾ ಸೇರಿದಂತೆ ಒಳಉಡುಪುಗಳನ್ನು ಮಾತ್ರ ಖರೀದಿಸೋದಿಲ್ಲವಂತೆ. ಇದು ಬಟ್ಟೆ ಖರೀದಿಸೋಕೆ ಹಿಂದೆಮುಂದೆ ನೋಡದ ಭಾರತೀಯರು ಒಳಉಡುಪು ಕೊಳ್ಳಲು ಮಾತ್ರ ಹಿಂದೇಟು ಹಾಕೋದು ಏಕೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಒಳಉಡುಪುಗಳ ಖರೀದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಜನಪ್ರಿಯ ಒಳ ಉಡುಪುಗಳ ಬ್ರ್ಯಾಂಡ್ ಗಳಾದ ಜಾಕಿಯಿಂದ ಹಿಡಿದು ರೂಪ ತನಕ ಎಲ್ಲದರ ಮಾರಾಟದಲ್ಲೂ ಭಾರೀ ಇಳಿಕೆಯಾಗಿದೆ. ಹಾಗಾದ್ರೆ ಈಗ ಭಾರತೀಯರು ಒಳ ಉಡುಪುಗಳನ್ನು ಏಕೆ ಖರೀದಿಸುತ್ತಿಲ್ಲ? ಇದಕ್ಕೆ ಹಣದುಬ್ಬರದಲ್ಲಿ ಏರಿಕೆಯಾಗಿರೋದು ಕಾರಣನಾ? ಎಂಬ ಪ್ರಶ್ನೆಗಳು ಮೂಡೋದು ಸಹಜ. ಅವುಗಳಿಗೆ ಉತ್ತರ ಇಲ್ಲಿದೆ.
ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದೇ ಕಥೆ
ಹಬ್ಬದ ಸೀಸನ್ ಪ್ರಾರಂಭವಾಗಿದೆ. ಇದರಿಂದ ಸಹಜವಾಗಿ ಬಟ್ಟೆಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಆದರೆ, ಒಳಉಡುಪುಗಳ ಮಾರಾಟದಲ್ಲಿ ಮಾತ್ರ ಯಾವುದೇ ಏರಿಕೆ ಕಂಡುಬಂದಿಲ್ಲ. ಇದು ಬರೀ ಮಹಿಳೆಯರ ವಿಚಾರದಲ್ಲಿ ಅಂತಲ್ಲ, ಪುರುಷರು, ಮಕ್ಕಳು ಹೀಗೆ ಎಲ್ಲ ವಯೋಮಾನದವರಲ್ಲೂ ಇದೇ ಟ್ರೆಂಡ್ ಇದೆ.
undefined
ಅರ್ಧ ಹಾಸಿಗೆ ಅಪರಿಚಿತರಿಗೆ ನೀಡಿ, ಈಕೆ ಗಳಿಸ್ತಿದ್ದಾಳೆ ಹಣ! ಏನಿದು ಹೊಸ ಬ್ಯುಸಿನೆಸ್?
ಒಳ ಉಡುಪು ಬಳಸೋರೆ ಇಲ್ವಾ?
ಭಾರತದಲ್ಲಿ ಹಣದುಬ್ಬರ ಹೆಚ್ಚಳದಿಂದ ಜನರು ಒಳ ಉಡುಪುಗಳನ್ನು ಖರೀದಿಸೋದು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಜನರ ಬಳಿ ಹಣವಿಲ್ಲದ ಕಾರಣ ಒಳ ಉಡುಪು ಖರೀದಿಸಿಲ್ಲ ಎಂದು ಹೇಳಲಾಗುತ್ತಿದೆ. 2022ರ ಡಿಸೆಂಬರ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಒಳ ಉಡುಪುಗಳ ಬಳಕೆ ಶೇ.55ರಷ್ಟು ತಗ್ಗಿತ್ತು. ಇನ್ನು2023-24ನೇ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಾಕಿ ಬ್ರ್ಯಾಂಡ್ ಒಟ್ಟು ಆದಾಯದಲ್ಲಿ ಶೇ.28ರಷ್ಟು ಏರಿಕೆಯಾಗಿದೆ. ಹಾಗೆಯೇ ಪ್ರಮಾಣದಲ್ಲಿ ಕೂಡ ಶೇ.31ರಷ್ಟು ಹೆಚ್ಚಳವಾಗಿದೆ. ಇನ್ನು ಈ ತ್ರೈಮಾಸಿಕದಲ್ಲಿ ಮಾರುಕಟ್ಟೆ ಪರಿಸ್ಥಿತಿಗಳಿಂದ ಕೂಡ ಕೆಲವು ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಒಳ ಉಡುಪುಗಳ ಖರೀದಿಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಒಳ ಉಡುಪುಗಳ ಮಾರಾಟದ ಆದಾಯದಲ್ಲಿ ಶೇ.7.5ರಷ್ಟು ಇಳಿಕೆಯಾಗಿದೆ. ಹಾಗೆಯೇ ಅವುಗಳ ಪ್ರಮಾಣದಲ್ಲಿ ಕೂಡ ಶೇ11.5ರಷ್ಟು ಇಳಿಕೆ ಕಂಡುಬಂದಿದೆ.
ಇನ್ನು ಭಾರತೀಯರು ಆನ್ ಲೈನ್ ಮಾರ್ಕೆಟಿಂಗ್ ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಹೀಗಾಗಿ ಅವರು ಸ್ಥಳೀಯ ಶಾಪ್ ಗಳಿಂದ ಖರೀದಿಸುವ ಬದಲು ಆನ್ ಲೈನ್ ಸ್ಟೋರ್ ಗಳಿಂದ ಡಿಸ್ಕೌಂಟ್ ಪಡೆದು ಖರೀದಿಸುತ್ತಿದ್ದಾರೆ. ಹಾಗೆಯೇ ಮಲ್ಟಿ ಬ್ರ್ಯಾಂಡ್ ಔಟ್ ಲೆಟ್ ಗಳು ಕೂಡ ಈ ಮೊದಲಿನಂತೆ ದೊಡ್ಡ ಪ್ರಮಾಣದಲ್ಲಿ ಸ್ಟಾಕ್ ಖರೀದಿಸುತ್ತಿಲ್ಲ.
ಈ ಕಂಪನಿಗಳ ಮಾರಾಟದಲ್ಲಿ ಇಳಿಕೆ
2022ರ ಡಿಸೆಂಬರ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಜಾಕಿ ಹಾಗೂ ಲಕ್ಸ್ ಇಂಡಸ್ಟ್ರೀಸ್ ಮಾತೃಸಂಸ್ಥೆ ಪೇಜ್ ಇಂಡಸ್ಟ್ರೀಸ್ ಮಾರಾಟದಲ್ಲಿ ಇಳಿಕೆಯಾಗಿದೆ. ಇನ್ನು ರೂಪ ಹಾಗೂ ಕೋ.ಮಾರಾಟದ ಪ್ರಮಾಣದಲ್ಲಿ ಕೂಡ ಶೇ.52ರಷ್ಟು ಇಳಿಕೆಯಾಗಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ರೂಪ ಷೇರುಗಳಲ್ಲಿ ಶೇ52ರಷ್ಟು ಇಳಿಕೆಯಾಗಿದೆ. ಇನ್ನು ಪೇಜ್ ಇಂಡಸ್ಟ್ರಿಸ್ ಮಾರಾಟದಲ್ಲಿ ಶೇ.11 ಹಾಗೂ ಷೇರಿನ ಬೆಲೆಯಲ್ಲಿ ಶೇ.5ರಷ್ಟು ಇಳಿಕೆಯಾಗಿದೆ.
ಐಐಟಿಯಲ್ಲಿಓದಿದ ಈಕೆ ವಿಶ್ವದಲ್ಲೇ ಅತೀಹೆಚ್ಚು ವೇತನ ಪಡೆಯವ ಭಾರತೀಯ ಸಿಇಒ ಪತ್ನಿ;ಇವರ ಆದಾಯ ಎಷ್ಟು ಗೊತ್ತಾ?
ಮುಂದಿನ ದಿನಗಳು ಇನ್ನೂ ಕಷ್ಟಕರ
ಭವಿಷ್ಯದಲ್ಲಿ ಒಳ ಉಡುಪುಗಳ ಮಾರಾಟದಲ್ಲಿ ಇಳಿಕೆ ಮುಂದುವರಿದರೆ ಜಾಕಿ ಸೇರಿದಂತೆ ಅನೇಕ ಕಂಪನಿಗಳಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸವಾಲಗಳು ಎದುರಾಗಲಿವೆ.
ಭಾರತದಲ್ಲಿ ಒಳ ಉಡುಪುಗಳ ಮಾರುಕಟ್ಟೆ
ಯುರೋಮಾನಿಟರ್ ಇಂಟರ್ ನ್ಯಾಷನಲ್ ಮಾಹಿತಿ ಅನ್ವಯ ಭಾರತದ ಒಳ ಉಡುಪು ಮಾರುಕಟ್ಟೆ ಅಂದಾಜು 48,123 ಕೋಟಿ ರೂ. ಡಾಲರ್ ಮೌಲ್ಯದಾಗಿದೆ. ಇನ್ನು ಪುರುಷ ಹಾಗೂ ಮಹಿಳೆಯರ ವಿಭಾಗದಿಂದ ಒಳಉಡುಪುಗಳ ಖರೀದಿ ಪ್ರಮಾಣ ಶೇ.39 ಹಾಗೂ ಶೇ.61ರಷ್ಟಿದೆ.