JioHome: ದಸರಾ ಹಬ್ಬಕ್ಕೆ ಜಿಯೋ ಗ್ರಾಹಕರಿಗೆ ಭರ್ಜರಿ ಗಿಫ್ಟ್: ಒಂದೇ ಪ್ಲ್ಯಾನ್‌ನಲ್ಲಿ Wi-Fi + TV + 12ಕ್ಕೂ ಹೆಚ್ಚು OTT!

Published : Sep 29, 2026, 11:06 AM IST
JioHome 3-in-1 plans

ಸಾರಾಂಶ

ರಿಲಯನ್ಸ್ ಜಿಯೋ ತನ್ನ JioHome ಸೇವೆಯನ್ನು ವಿಸ್ತರಿಸಿದ್ದು, ಹೊಸ 3-in-1 ಪ್ಲ್ಯಾನ್‌ಗಳ ಜೊತೆಗೆ ಪ್ರತ್ಯೇಕ Wi-Fi ಮತ್ತು TV ಪ್ಯಾಕ್‌ ಪರಿಚಯಿಸಿದೆ. ಗ್ರಾಹಕರು ಈಗ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, OTT ಆ್ಯಪ್‌ಗಳು ಮತ್ತು ಅನಿಯಮಿತ ಡೇಟಾವನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಪಡೆಯಬಹುದು.

ರಿಲಯನ್ಸ್ ಜಿಯೋ ತನ್ನ JioHome ಸೇವೆಯನ್ನು ವಿಸ್ತರಿಸಿದ್ದು, ಹೊಸ 3-in-1 ಪ್ಲ್ಯಾನ್‌ಗಳ ಜೊತೆಗೆ ಪ್ರತ್ಯೇಕ Wi-Fi ಮತ್ತು TV ಪ್ಯಾಕ್‌ಗಳನ್ನು ಪರಿಚಯಿಸಿದೆ. ಗ್ರಾಹಕರು ಈಗ ಈ ಸೇವೆಗಳನ್ನು ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಪಡೆಯಬಹುದಾಗಿದೆ. ಅಂದರೆ 3-in-1 ಪ್ಲ್ಯಾನ್‌ಗಳಲ್ಲಿ ಒಂದೇ ಸಬ್‌ಸ್ಕ್ರಿಪ್ಶನ್‌ನಲ್ಲಿ ಆನ್‌ಲಿಮಿಟೆಡ್ Wi-Fi, 1000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, 12ಕ್ಕೂ ಹೆಚ್ಚು OTT ಆ್ಯಪ್‌ಗಳು ಸಿಗುತ್ತವೆ. ಇದು JioFiber ಮತ್ತು JioAirFiber ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು Jio ಕಂಪನಿ ತಿಳಿಸಿದೆ.

Jio 3-in-1 ಪ್ಲ್ಯಾನ್‌ಗೆ ಎಷ್ಟು ರಿಚಾರ್ಜ್ ಮಾಡಿಸಬೇಕು?

100 Mbps ಪ್ಲ್ಯಾನ್‌ಗೆ ಎರಡು ತಿಂಗಳಿಗೆ ₹2,122 ಪಾವತಿಸಬೇಕು. ಇದು ಮೂರನೇ ತಿಂಗಳು ಉಚಿತವಾಗಿರುತ್ತದೆ. ಅಂದರೆ ತಿಂಗಳಿಗೆ ಸರಾಸರಿ ₹707 ಖರ್ಚಾಗುತ್ತದೆ. 30 Mbps ಪ್ಲ್ಯಾನ್‌ಗೆ ಮೂರು ತಿಂಗಳಿಗೆ ₹2,222 ಪಾವತಿಸಬೇಕು. ಇದರಲ್ಲಿ ಒಂದು ತಿಂಗಳು ಉಚಿತವಾಗಿದ್ದು ಅನಂತರ ತಿಂಗಳಿಗೆ ಸರಾಸರಿ ₹555 ಖರ್ಚಾಗುತ್ತದೆ.

30 Mbps ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 100 GB ಡೇಟಾ ಸಿಗುತ್ತದೆ. ಈ ಡೇಟಾವನ್ನು 90 ದಿನಗಳವರೆಗೆ ಬಳಸಬಹುದು. ಎರಡೂ ಪ್ಲ್ಯಾನ್‌ಗಳಲ್ಲಿ ಉಚಿತ ವಾಯ್ಸ್ ಸೇವೆ ಸಿಗುತ್ತದೆ. ದೀರ್ಘಾವಧಿಯ ಪಾವತಿಗೆ ಹೆಚ್ಚುವರಿಯಾಗಿ 7 ದಿನಗಳ ಸೇವೆಯೂ ಸಿಗಲಿದೆ. ಈಗಿರುವ ಗ್ರಾಹಕರು ಪ್ಲ್ಯಾನ್ ಬದಲಾಯಿಸಿದಾಗ, 3, 6 ಅಥವಾ 12 ತಿಂಗಳ ಮುಂಗಡ ಪಾವತಿ ಮಾಡಿದಾಗ ಹಾಗೂ ಪ್ರೀಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾದಾಗ ಈ ದೀರ್ಘಾವಧಿಯ ಪ್ರಯೋಜನ ಅನ್ವಯಿಸುತ್ತದೆ ಎಂದು Jio ತಿಳಿಸಿದೆ.

Jio TV-only ಪ್ಯಾಕ್‌ ಮಾತ್ರ ಸಾಕಾ?

ಗ್ರಾಹಕರು ಈಗ Wi-Fi ಅಥವಾ OTT ಸೇವೆ ಎಲ್ಲ ಬೇಡ, ನಿಮಗೆ JioHome TV ಮಾತ್ರ ಬೇಕು ಅಂದರೆ ಅದನ್ನೂ ಪ್ರತ್ಯೇಕವಾಗಿ ಪಡೆಯಬಹುದು. ₹2,000 ಪ್ಯಾಕ್ 5 ತಿಂಗಳವರೆಗೆ ವ್ಯಾಲಿಡಿಟಿ ಇರುತ್ತದೆ. ತಿಂಗಳಿಗೆ ಸರಾಸರಿ ₹400 ವೆಚ್ಚವಾಗುತ್ತದೆ. ಇದರಲ್ಲಿ 1,000ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಸಿಗುತ್ತವೆ. ಇವುಗಳಲ್ಲಿ 15ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ 200ಕ್ಕೂ ಹೆಚ್ಚು HD ಚಾನೆಲ್‌ಗಳೂ ಸೇರಿವೆ.

ಎರಡು ತಿಂಗಳ ಪ್ಯಾಕ್‌ಗೆ ₹1000 ರಿಚಾರ್ಜ್ ಮಾಡಿಸಬೇಕು. ಇದಕ್ಕೆ ₹200 ಸೆಟಪ್ ಶುಲ್ಕವಿದ್ದು, Jio ಈ ಮೊತ್ತವನ್ನು ತಲಾ ₹50ರ ನಾಲ್ಕು ಕೂಪನ್‌ಗಳ ರೂಪದಲ್ಲಿ ವಾಪಸ್ ನೀಡುತ್ತದೆ.

Jio Wi-Fi-only ಪ್ಯಾಕ್‌ಗಳು

100 Mbps Wi-Fi ಪ್ಯಾಕ್‌ಗೆ 5 ತಿಂಗಳಿಗೆ ₹3,000 ಪಾವತಿಸಬೇಕು. ಅಂದರೆ ತಿಂಗಳಿಗೆ ₹600 ವೆಚ್ಚವಾಗುತ್ತದೆ. 30 Mbps ಪ್ಯಾಕ್‌ಗೆ 5 ತಿಂಗಳಿಗೆ ₹2,200 ಪಾವತಿಸಬೇಕು. ಅಂದರೆ ತಿಂಗಳಿಗೆ ₹440 ವೆಚ್ಚವಾಗುತ್ತದೆ. ಎರಡು ತಿಂಗಳ ಪ್ಯಾಕ್‌ಗಳ ಬೆಲೆ ಕ್ರಮವಾಗಿ ₹1,500 ಮತ್ತು ₹1,100 ಆಗಿದೆ. ಇದಕ್ಕೆ ₹300 ಮತ್ತು ₹200 ಸೆಟಪ್ ಶುಲ್ಕವಿದ್ದು, ಈ ಮೊತ್ತವನ್ನು ₹50ರ ವೋಚರ್‌ಗಳ ರೂಪದಲ್ಲಿ ವಾಪಸ್ ನೀಡಲಾಗುತ್ತದೆ.

Jio ಡೇಟಾ ಮಿತಿ ಎಷ್ಟು?

ಎಲ್ಲಾ ಅನಿಯಮಿತ Fiber ಪ್ಲ್ಯಾನ್‌ಗಳಿಗೂ 3,300 GB ಬಳಕೆ ನೀತಿ ಅನ್ವಯಿಸುತ್ತದೆ ಎಂದು Jio ತಿಳಿಸಿದೆ. AirFiber ಬಳಕೆದಾರರಿಗೆ ಗರಿಷ್ಠ 1000 GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ಈ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ 64 Kbpsಗೆ ಇಳಿಯುತ್ತದೆ.

JioHome ಸೇವೆ ದೇಶಾದ್ಯಂತ 2 ಕೋಟಿಗೂ ಹೆಚ್ಚು ಮನೆಗಳನ್ನು ತಲುಪಿದೆ ಎಂದು Jio ಹೇಳಿಕೊಂಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Post office Schemes ಪತ್ನಿ ಜೊತೆ ಈ ಖಾತೆ ತೆರೆಯಿರಿ, ಪ್ರತಿ 3 ತಿಂಗಳಿಗೂ ಸಿಗಲಿದೆ ₹25,899!
ಕರ್ನಾಟಕದಲ್ಲಿ ಎಲ್‌ಪಿಜಿ ಸಿಲಿಂಡರ್ ತೂಕದಲ್ಲಿ ವ್ಯತ್ಯಾಸ, ಶೇ. 25 ಸಿಲಿಂಡರ್‌ಗಳಲ್ಲಿ ಗ್ಯಾಸ್ ಕಡಿತ ಪತ್ತೆ!