
ಪುಣೆ (ಅ.07) ಭಾರತದಲ್ಲಿ ಜಾವಾ ಯೆಝಡಿ ಮೋಟಾರ್‌ಬೈಕ್ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ದಶಕಗಳ ಬಳಿಕ ಮರಳಿ ಬಂದ ಜಾವಾ ಯೆಝಡಿ ಭಾರತದಲ್ಲಿ ಬೈಕ್ ಪ್ರೀಯರ ಮೋಡಿ ಮಾಡಿದೆ. ಭರ್ಜರಿ ಮಾರಾಟ ಕಾಣುತ್ತಿರುವ ಜಾವಾ ಯಝಡಿ ಇದೀಗ ತನ್ನ ವ್ಯಾಪ್ತಿ ವಿಸ್ತರಿಸಿದೆ. ವಿಶೇಷ ಅಂದರೆ ಜಾವಾ ಯೆಝಡಿ ಬೈಕ್ ಖರೀದಿಸಲು ಗ್ರಾಹಕರು ಇದೀಗ ಹೆಚ್ಚು ಸುತ್ತಾಡಬೇಕಿಲ್ಲ, ಡೀಲರ್ ಬಳಿ ತೆರಳಬೇಕಿಲ್ಲ. ಇದೀಗ ಅಮೇಜಾನ್ ಇ ಕಾಮರ್ಸ್‌ನಲ್ಲಿ ಜಾವಾ ಯೆಝಡಿ ಬೈಕ್ ಲಭ್ಯವಿದೆ. ಮೊಬೈಲ್ ಸೇರಿದಂತೆ ಇತರ ವಸ್ತುಗಳು ಖರೀದಿಸುವಂತೆ ಜಾವಾ ಯೆಝಡಿ ಬೈಕ್ ಅಮೇಜಾನ್ ಮೂಲಕ ಸುಲಭಾಗಿ ಖರೀದಿಸಲು ಸಾಧ್ಯವಿದೆ.
ಕಳೆದ ವರ್ಷ ಜಾವಾ ಯೆಝಡಿ ಪ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಆರಂಭಿಸಿತು. ಈ ಮೂಲಕ ಭಾರತದ ಅತೀ ದೊಡ್ಡ ಇ ಕಾಮರ್ಸ್ ಮೂಲಕ ಯಾವಾ ಯೆಝಡಿ ಹೊಸ ಕ್ರಾಂತಿ ಮಾಡಿತ್ತು. ಫ್ಲಿಪ್‌ಕಾರ್ಟ್‌ನಲ್ಲಿ ಸಿಕ್ಕ ಅಭೂತಪೂರ್ವ ಸ್ಪಂದನೆ ಬೆನ್ನಲ್ಲೇ ಇದೀಗ ಅಮೇಜಾನ್ ಇ ಕಾಮರ್ಸ್‌ಗೂ ವಿಸ್ತರಣೆಯಾಗಿದೆ.
ಜಾವಾ ಯೆಝಡಿ ಅಮೇಜಾನ್ ಮೂಲಕ ಲಭ್ಯವಿದೆ. ಮೊದಲ ಹಂತದಲ್ಲಿ 40 ನಗರಗಳಲ್ಲಿ ಈ ಸೇವೆ ಲಭ್ಯವಿದೆ. ಶೀಘ್ರದಲ್ಲೇ 100 ನಗರಗಳಿಗೆ ವಿಸ್ತರಿಸಲಾಗುತ್ತಿದೆ. ದೀಪಾವಳಿ ಹಬ್ಬದ ವೇಳೆಗೆ 100 ನಗರಗಳಲ್ಲಿ ಅಮೆಜಾನ್ ಮೂಲಕ ಸುಲಭವಾಗಿ ಜಾವಾ ಯೆಝಡಿ ಬೈಕ್ ಬುಕ್ ಮಾಡಿಕೊಳ್ಳಬುಹುದು.
ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಮೂಲಕ ಜಾವಾ ಯೆಝಡಿ ಬೈಕ್ ಖರೀದಿಸುವ ಗ್ರಾಹಕರಿಗೆ ಕೆಲ ಆಫರ್ ಲಭ್ಯವಿದೆ. ಇತರ ವಸ್ತುಗಳನ್ನು ಆನ್‌ಲೈನ್ ಶಾಪಿಂಗ್ ಮೂಲಕ ಖರೀದಿಸುವಾಗ ಸಿಗುವಂತೆ ಇದೀಗ ಬೈಕ್ ಖರೀದಿಗೂ ಆಫರ್ ಅನ್ವಯವಾಗುತ್ತಿದೆ. ಈ ಕುರಿತು ಕೆಲ ಆಫರ್ ಇಲ್ಲಿದೆ.
ಈ ಹಬ್ಬದ ಸೀಸನ್‌ನಲ್ಲಿ ಬೈಕ್ ಬುಕಿಂಗ್ ಮಾಡುವ ಗ್ರಾಹಕರಿಗೆ ಅತ್ಯಾಕರ್ಷಕ ಫಿನಾನ್ಸ್ ಆಯ್ಕೆ, ಇಎಂಐ ಯೋಜನೆ, ಕ್ಯಾಶ್‌ಬ್ಯಾಕ್ ಸೇರಿದಂತೆ ಇತರ ಕೆಲ ಆಫರ್ ಲಭ್ಯವಿದೆ.
ಅಮೆಜಾನ್ ಇದೀಗ ಜಾವಾ ಯೆಝಡಿ ಬೈಕ್ ಖರೀದಿಸುವ ಗ್ರಾಹಕರಿಗೆ ಅತೀ ಸುಲಭ ಇಎಂಐ ಆಯ್ಕೆ, ಅಮೆಜಾನ್ ಪ್ರೈಂ ಗ್ರಾಹಕರಿಗೆ ಅಮೆಜಾನ್ ಪೇ ಹಾಗೂ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್.
ಫ್ಲಿಪ್‌ಕಾರ್ಟ್ ಮೂಲಕ ಖರೀದಿಸುವ ಗ್ರಾಹಕರಿಗೆ 24 ತಿಂಗಳ ನೋ ಕಾಸ್ಟ್ ಇಎಂಐ, ಶೇಕಡಾ 5ರಷ್ಟು ಕ್ಯಾಶ್ ಬ್ಯಾಕ್ (ಗರಿಷ್ಠ 4,000 ರೂ) ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಅಂದರೆ ಫ್ಲಿಕಾರ್ಟ್ ಆ್ಯಕ್ಸಿಸ್, ಫ್ಲಿಪ್‌ಕಾರ್ಟ್ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಕ್ಯಾಶ್‌ಬ್ಯಾಕ್ ಆಫರ್ ಸಿಗಲಿದೆ. ವಿಶೇಷವ ಫಿನಾನ್ಸ್ ಸೌಲಭ್ಯಗಳು ಲಭ್ಯವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.