₹ 11 ಲಕ್ಷ ಕಾರು ವರ್ಷಗಳ ಬಳಿಕ ₹1.2 ಲಕ್ಷಕ್ಕೆ ಮಾರಾಟ, ಆದರೂ ಬೆಂಗ್ಳೂರು ಸಿಎಗೆ ₹2 ಲಕ್ಷ ಲಾಭ

Published : Oct 07, 2025, 02:52 PM IST
Inside car

ಸಾರಾಂಶ

₹ 11 ಲಕ್ಷ ಕಾರು ವರ್ಷಗಳ ಬಳಿಕ ₹1.2 ಲಕ್ಷಕ್ಕೆ ಮಾರಾಟ, ಆದರೂ ಬೆಂಗ್ಳೂರು ಸಿಎಗೆ ₹2 ಲಕ್ಷ ಲಾಭ ಮಾಡಿದ್ದಾರೆ. ಇದು ಹೇಗೆ ಅನ್ನೋ ಚರ್ಚೆಗೆ ಖುದ್ದು ಚಾರ್ಟೆಡ್ ಅಕೌಂಟ್ ಉತ್ತರ ನೀಡಿದ್ದಾರೆ. ಹೀಗಾಗಿ ಕಾರಿನ ಮೇಲೆ ಹೂಡಿಕೆ ಉತ್ತಮಲ್ಲ ಅನ್ನೋ ವಾದಕ್ಕೆ ಇದು ವಿರುದ್ಧವಾಗಿದೆ.

ಬೆಂಗಳೂರು (ಅ.07) ಕಾರಿನ ಮೇಲೆ ಹೂಡಿಕೆ ಉತ್ತಮವಲ್ಲ ಅನ್ನೋದು ಎಲ್ಲಾ ಆರ್ಥಿಕ ತಜ್ಞರ ಅಭಿಪ್ರಾಯ. ಕಾರಣ ಕಾರಿನ ಮೇಲೆ ಹೂಡಿಕೆ ಪ್ರತಿ ವರ್ಷ ಮೌಲ್ಯ ಇಳಿಕೆಯಾಗುತ್ತಾ ಹೋಗುತ್ತದೆ. ಹೀಗಾಗಿ ಕಾರು ಖರೀದಿಸುವಾಗ ನಾಲ್ಕು ಬಾರಿ ಯೋಚಿಸಿ ಎಂಬುದು ಹಲವರ ಅಭಿಪ್ರಾಯ. ಆದರೆ ಖುದ್ದು ಚಾರ್ಟೆಡ್ ಅಕೌಂಟೆಂಟ್ ವಿರುದ್ದ ಸಲಹೆ ನೀಡಿದ್ದಾರೆ. ಬೆಂಗಳೂರಿನ ಚಾರ್ಟೆಟ್ ಅಕೌಂಟೆಂಟ್(ಸಿಎ) ಡೌನ್‌ಪೇಮೆಂಟ್, ಇಎಂಐ, ಬಡ್ಡಿ, ಪೆಟ್ರೋಲ್, ನಿರ್ವಹಣೆ ಎಲ್ಲಾ ಸೇರಿ 5 ವರ್ಷಕ್ಕೆ 11 ಲಕ್ಷ ರೂಪಾಯಿ ಆಗಿದೆ. 5 ವರ್ಷಗಳ ಬಳಿಕ ಮಾರಾಟ ಮಾಡಿದಾಗ ಈ ಕಾರಿಗೆ ಸಿಕ್ಕಿದ್ದು ಕೇವಲ 1.2 ಲಕ್ಷ ರೂಪಾಯಿ ಮಾತ್ರ. ಆದರೂ ಈ ಸಿಎಗೆ 2 ಲಕ್ಷ ರೂಪಾಯಿ ಉಳಿತಾಯವಾಗಿದೆ ಎಂದಿದ್ದಾರೆ. ಇದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ.

ನಿಮ್ಮ ದಿನ ನಿತ್ಯದ ಬದುಕಿಗೆ ಕಾರಿನ ಅಗತ್ಯವಿದ್ದರೆ ಖರೀದಿಸಿ

ಚಾರ್ಟೆಟೆಡ್ ಅಕೌಂಟೆಂಟ್ ಸೇರಿದಂತೆ ಆರ್ಥಿಕ ತಜ್ಞರು ಕಾರು ಖರೀದಿಸಲು ಸಲಹೆ ನೀಡುವುದಿಲ್ಲ. ಆದರೆ ಬೆಂಗಳೂರಿನ ಮೀನಲ್ ಗೋಯಲ್ ದಿನ ನಿತ್ಯದ ಬದುಕಿಗೆ ಕಾರಿನ ಅತ್ಯವಿದ್ದರೆ ಖರೀದಿಸಿ ಎಂದಿದ್ದಾರೆ. ಇದರಿಂದ ನಿಮ್ಮ ಉಳಿಯಾ ಸುಲಭವಾಗಲಿದೆ ಎಂದಿದ್ದಾರೆ. ಮೀನಲ್ ಗೋಯಲ್ ಕೂಡ ಕಾರು ಖರೀದಿ ಕುರಿತು ಹಲವು ಬಾರಿ ಯೋಚಿಸಿದ್ದರು. ಬಳಿಕ ಗಟ್ಟಿ ನಿರ್ಧಾರ ಮಾಡಿ ಕಾರು ಖರೀದಿಸಿದ್ದರು. 5 ವರ್ಷಗಳ ಬಳಿಕ 1.2 ಲಕ್ಷ ರೂಪಾಯಿಗೆ ಮಾರಾಟ ಮಾಡಿದರೂ ತನಗೆ ಲಾಭವಾಗಿದ್ದು ಹೇಗೆ ಅನ್ನೋದನ್ನು ಮೀನಲ್ ಗೋಯಲ್ ಹೇಳಿದ್ದಾರೆ.

ಕಾರು ಖರೀದಿಸಬೇಕೋ, ಬೇಡ್ವೋ?

2019ರಲ್ಲಿ ಮೀನಲ್ ಹೋಯಲ್ ಬೆಂಗಳೂರಿನ ಹೊರವಲಯದಲ್ಲಿ ವಾಸವಿದ್ದರು.ಪ್ರತಿ ದಿನ ಕಚೇರಿಗೆ ತೆರಳಲು 2 ಗಂಟೆ ಸಮಯ ಬೇಕಿತ್ತು. ಬಳಿಕ ಕಚೇರಿಯಿಂದ ಮರಳಲು 2 ಗಂಟೆ. ಕ್ಯಾಬ್ ಮಾಡಿಕೊಂಡು ಕಚೇರಿಗೆ ತೆರಳುವ ದುಸ್ಸಾಹಸ ಮಾಡುತ್ತಿದ್ದ ಮೀನಲ್ ಗೋಯಲ್‌ ತಿಂಗಳ ವೇತನದಲ್ಲಿ ಶೇಕಡಾ 36ರಷ್ಟು ಕೇವಲ ಪ್ರಯಾಣಕ್ಕಾಗಿ ವೆಚ್ಚವಾಗುತ್ತಿತ್ತು. ಹೆಚ್ಚಿನ ಮೊತ್ತ ಕ್ಯಾಬ್ ಅಥವಾ ಸಾರಿಗೆಗೆ ವೆಚ್ಚ ಮಾಡುವ ಕಾರಣ ಸ್ವಂತ ಕಾರು ಖರೀದಿಸಿದರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಆದರೆ ಖುದ್ದು ಸಿಎ ಆಗಿರುವ ಕಾರಣ ಕಾರಿನ ಮೌಲ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಖರೀದಿ ಮತ್ತಷ್ಟು ಗೊಂದಲವಾಗಿತ್ತು.

10 ಲಕ್ಷ ರೂಪಾಯಿ ನಷ್ಟದ ನಡುವೆ 2 ಲಕ್ಷ ರೂಪಾಯಿ ಲಾಭ

ಗಟ್ಟಿ ನಿರ್ಧಾರ ಮಾಡಿ ಕಾರು ಖರೀದಿಸಿದ ಮೀನಲ್ ಗೋಯಲ್ 5 ವರ್ಷ ಸಾಲ ಕಟ್ಟಿದ್ದಾರೆ. ಇನ್ನು 5 ವರ್ಷದ ಓಟಾಡದ ಪೆಟ್ರೋಲ್, ನಿರ್ವಹಣೆ, ರಿಪರಿ ಎಲ್ಲಾ ಸೇರ ಈ ಕಾರಿಗೆ ಒಟ್ಟು 11.11 ಲಕ್ಷ ರೂಪಾಯಿ ಸುರಿದಿದ್ದಾರೆ. 5 ವರ್ಷ ಈ ಕಾರು ಬಳಸಿದ್ದಾರೆ. ಬಳಿಕ ಮಾರಾಟ ಮಾಡುವಾಗ ಮೀನಲ್ ಗೋಯಲ್‌ಗೆ ಸಿಕ್ಕಿದ್ದು 1.2 ಲಕ್ಷ ರೂಪಾಯಿ ಮಾತ್ರ ಅಂದರೆ ತಾವು ಹಾಕಿದ ಬಂಡವಾಳಕ್ಕೆ ಹೋಲಿಸಿದರೆ ಸರಿಸುಮಾರು 10 ಲಕ್ಷ ರೂಪಾಯಿ ನಷ್ಟ. ಅದರೂ ಮೀನಲ್ ಗೋಯಲ್‌ಗೆ 2 ಲಕ್ಷ ರೂಪಾಯಿ ಲಾಭ ಎಂದಿದ್ದಾರೆ.

ಮೀನಲ್ ಗೋಯಲ್ ಪ್ರತಿ ದಿನ ಕಚೇರಿಗೆ 27 ಕಿಲೋಮೀಟರ್ ಪ್ರಯಾಣ. ಇದು 5 ವರ್ಷಗಳ ಪ್ರಯಾಣ ವೆಚ್ಚ 8.87 ಲಕ್ಷ ರೂಪಾಯಿ. ಇನ್ನು ವೀಕೆಂಡ್‌ಗಳಲ್ಲಿ ಸರಿಸುಮಾರು 20 ಕಿಲೋಮೀಟರ್ ಪ್ರಯಾಣ ಹಾಗೂ ಕೆಲ ವಾರಾಂತ್ಯದ ಪ್ರಯಾಣ ಸೇರಿದಂತೆ ಇತರ ಪ್ರತಿ ಪ್ರಯಾಣಕ್ಕೆ 20,000 ರೂಪಾಯಿ. ಈ ಪ್ರಯಾಣ ಹಾಗೂ ಪ್ರತಿ ದಿನ ಕಚೇರಿ ಪ್ರಯಾಣ ಎಲ್ಲವನ್ನು ಒಟ್ಟು ಸೇರಿಸಿದರೆ 5 ವರ್ಷಕ್ಕೆ 13.55 ಲಕ್ಷ ರೂಪಾಯಿ ಖರ್ಚು ಮಾಡಬೇಕಿತ್ತು. ಒಟ್ಟು 2.4 ಲಕ್ಷ ರೂಪಾಯಿ ಉಳಿತಾಯ ಮಾಡಿರುವುದಾಗಿ ಮೀನಲ್ ಗೋಯಲ್ ಹೇಳಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!