ಜನ್‌ಧನ್‌ ಯೋಜನೆಗೆ 7 ವರ್ಷ: 43 ಕೋಟಿ ಖಾತೆ, 1.46 ಲಕ್ಷ ಕೋಟಿ ಠೇವಣಿ!

By Suvarna NewsFirst Published Aug 29, 2021, 1:09 PM IST
Highlights

* ಪ್ರಧಾನ ಮಂತ್ರಿ ಜನಧನ ಯೋಜನೆಗೆ ಶನಿ​ವಾರ 7 ವರ್ಷ 

* ಈಗ ಬ್ಯಾಂಕ್‌ ಖಾತೆಗಳ ಸಂಖ್ಯೆ 43 ಕೋಟಿಗೆ ಏರಿಕೆ

* ಒಟ್ಟು ಖಾತೆಗಳಲ್ಲಿ 1.46 ಲಕ್ಷ ಕೋಟಿ ರು. ಠೇವಣಿ

ನವದೆಹಲಿ(ಆ.29): ಪ್ರಧಾನ ಮಂತ್ರಿ ಜನಧನ ಯೋಜನೆಗೆ ಶನಿ​ವಾರ 7 ವರ್ಷ ತುಂಬಿದೆ. ಈಗ ಬ್ಯಾಂಕ್‌ ಖಾತೆಗಳ ಸಂಖ್ಯೆ 43 ಕೋಟಿಗೆ ಏರಿಕೆಯಾಗಿದೆ. ಈ ಒಟ್ಟು ಖಾತೆಗಳಲ್ಲಿ 1.46 ಲಕ್ಷ ಕೋಟಿ ರು. ಠೇವಣಿ ಇಡಲಾಗಿದೆ.

2014ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು. ಸರ್ಕಾರ ನೀಡುವ ಹಣಕಾಸು ನೆರವು, ಪಿಂಚಣಿ, ವಿಮೆ ಮುಂತಾದ ಸೌಲಭ್ಯಗಳು ಎಲ್ಲರಿಗೂ ದೊರೆಯುವಂತೆ ಮಾಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈವರೆಗೆ 43.04 ಕೋಟಿ ಜನಧನ್‌ ಖಾತೆ ತೆರೆಯಲಾಗಿದೆ. ಇದರಲ್ಲಿ ಶೇ.55ರಷ್ಟುಮಹಿಳೆಯರು ಖಾತೆಗಳನ್ನು ಹೊಂದಿದ್ದಾರೆ. ಯೋಜನೆ ಆರಂಭವಾದ ವರ್ಷದಲ್ಲಿ 17 ಕೋಟಿ ಖಾತೆಗಳನ್ನು ತೆರೆಯಲಾಗಿತ್ತು. ಒಟ್ಟು 43.04 ಕæೂೕಟಿ ಖಾತೆಗಳಲ್ಲಿ 36.86 ಕೋಟಿ ಖಾತೆಗಳು ಸಕ್ರಿಯವಾಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಮೋದಿ ಹರ್ಷ:

ಪ್ರಧಾನ ಮಂತ್ರಿ ಜನಧನ ಖಾತೆಗೆ 7 ವರ್ಷ ತುಂಬಿದ ಹಿನ್ನಲೆಯಲ್ಲಿ ಟ್ವೀಟ್‌ ಮಾಡಿರುವ ಮೋದಿ, ‘ಈ ಯೋಜನೆಯು ಅಸಂಖ್ಯಾತ ಭಾರತೀಯರ ಹಣಕಾಸಿನ ಲಭ್ಯತೆ, ಸಬಲೀಕರಣಕ್ಕೆ ನೆರವಾಗಿದೆ. ಇದು ವ್ಯವಸ್ಥೆಯ ಪಾರದರ್ಶಕತೆ ಹೆಚ್ಚಲು ನೆರವಾಗಿದೆ. ಯೋಜನೆಗೆ ಯಶಸ್ಸಿಗೆ ಶ್ರಮಿಸಿದ ಎಲ್ಲರ ಶ್ರಮವನ್ನು ಶ್ಲಾಘಿಸುತ್ತೇನೆ’ ಎಂದು ಹೇಳಿದ್ದಾರೆ.

click me!