ITR Refund: ಐಟಿಆರ್‌ ಫೈಲ್‌ ಮಾಡಿ ದಿನಗಳೇ ಆಗಿದ್ರೂ ರೀಫಂಡ್‌ ಬಂದಿಲ್ವಾ? ಈ 6 ಕಾರಣಗಳಿರಬಹುದು..

Published : Sep 13, 2025, 09:51 PM IST
ITR Refund Delayed

ಸಾರಾಂಶ

itr refund not received reasons 2024-2025ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕ. ಇಲ್ಲಿಯವರೆಗೆ ಅನೇಕ ಜನರು ತಮ್ಮ ರಿಟರ್ನ್ಸ್ ಸಲ್ಲಿಸಿದ್ದಾರೆ ಆದರೆ ಇನ್ನೂ ಹಣವನ್ನು ಸ್ವೀಕರಿಸಿಲ್ಲ. ಇದರ ಹಿಂದಿನ ಸಂಭವನೀಯ ಕಾರಣಗಳ ಹೀಗಿದೆ. 

ಬೆಂಗಳೂರು (ಸೆ.13): 2024-2025ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕ. ಆದರೆ, ಇಲ್ಲಿಯವರೆಗೆ ಅನೇಕ ಜನರು ತಮ್ಮ ರಿಟರ್ನ್ಸ್ ಸಲ್ಲಿಸಿದ್ದಾರೆ ಅವರಿಗೆ ಇನ್ನೂ ತಮ್ಮ ರೀಫಂಡ್‌ ಹಣ ಬಂದಿಲ್ಲ. ಕೆಲವರು ಸೋಶಿಯಲ್‌ ಮೀಡಿಯಾಗಳಲ್ಲಿಯೂ ಈ ಬಗ್ಗೆ ದೂರು ನೀಡಿದ್ದಾರೆ. ಹಣ ಸಿಗದಿರುವ ಹಿಂದೆ ಕೆಲವು ಕಾರಣಗಳಿರಬಹುದು. ಈ ಕಾರಣಗಳು ಯಾವುವು ಮತ್ತು ಅವುಗಳಿಗೆ ಪರಿಹಾರಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ.

ಬ್ಯಾಂಕ್ ಖಾತೆಯನ್ನು ಪೂರ್ವ-ಮೌಲ್ಯಮಾಪನ ಮಾಡದೇ ಇರೋದು

ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ ಮರುಪಾವತಿ ಪಡೆಯಲು, ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಯನ್ನು ಪೂರ್ವ-ಮೌಲ್ಯಮಾಪನ (ಪ್ರೀ ವ್ಯಾಲಿಡೇಟ್‌) ಮಾಡಬೇಕು. ಪ್ಯಾನ್ ಮತ್ತು ಬ್ಯಾಂಕ್ ಖಾತೆ ಹೆಸರು ಹೊಂದಿಕೆಯಾಗದಿದ್ದರೆ ಅಥವಾ ಐಎಫ್‌ಎಸ್‌ಸಿ ಕೋಡ್ ತಪ್ಪಾಗಿದ್ದರೆ, ಹಣ ನಿಮ್ಮ ಅಕೌಂಟ್‌ಗೆ ಬರೋದಿಲ್ಲ. ಈ ಕಾರಣದಿಂದಾಗಿ, ನಿಮ್ಮ ಹಣ ಸಿಲುಕಿಕೊಳ್ಳಬಹುದು.

ಐಟಿಆರ್ ಇ-ವೆರಿಫಿಕೇಶನ್‌ ಆಗದೇ ಇರೋದು

ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ 30 ದಿನಗಳ ಒಳಗೆ ನಿಮ್ಮ ಐಟಿಆರ್ ಅನ್ನು ಇ-ವೆರಿಫೈ ಮಾಡೋದು ಅವಶ್ಯಕ. ಹಾಗಿದ್ದರೂ, ನೀವು ನಿಮ್ಮ ಐಟಿಆರ್ ಅನ್ನು ಇ-ವೆರಿಫೈ ಮಾಡದೇ ಇದ್ದರೆ, ನಿಮ್ಮ ರಿಟರ್ನ್ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ, ಇದರ ಪರಿಣಾಮವಾಗಿ ನಿಮಗೆ ಯಾವುದೇ ರೀಫಂಡ್‌ ಸಿಗುವುದಿಲ್ಲ.

TDS

ಫಾರ್ಮ್ 26AS ಅಥವಾ AIS ನಲ್ಲಿ ತೋರಿಸಿರುವ TDS ಮತ್ತು ಕಡಿತಗೊಳಿಸುವವರು ಭರ್ತಿ ಮಾಡಿದ ಮಾಹಿತಿಯ ನಡುವೆ ವ್ಯತ್ಯಾಸವಿದೆ ಎಂದು ಅನೇಕ ಜನರು ಕಂಡುಕೊಂಡಿದ್ದಾರೆ. ಇದು ರೀಫಂಡ್‌ ನಿಲ್ಲಲು ಕಾರಣವಾಗುತ್ತದೆ.

ಹೆಚ್ಚಿನ ರಿಟರ್ನ್ಸ್‌ ಇದ್ದರೆ ಸಮಸ್ಯೆ

ಸಾಮಾನ್ಯವಾಗಿ, ಮರುಪಾವತಿ ಮೊತ್ತವು ರೂ. 50,000 ಕ್ಕಿಂತ ಹೆಚ್ಚಿದ್ದರೆ, ಆದಾಯ ತೆರಿಗೆ ಇಲಾಖೆಯು ಹೆಚ್ಚಿನ ಪರಿಶೀಲನೆಯನ್ನು ನಡೆಸುತ್ತದೆ. ದೊಡ್ಡ ಮೊತ್ತವು ಕ್ರಾಸ್‌ ವೆರಿಫಿಕೇಶನ್‌ಗೆ ಕಾರಣವಾಗುತ್ತದೆ, ಇದು ಹಣವನ್ನು ಪಡೆಯುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು.

ಬ್ಯಾಂಕ್ ವಿವರಗಳಲ್ಲಿ ದೋಷ

ಆದಾಯ ತೆರಿಗೆ ಸಲ್ಲಿಸುವಾಗ ನೀವು ತಪ್ಪು ಖಾತೆ ಸಂಖ್ಯೆಯನ್ನು ನೀಡಿದರೆ ಅಥವಾ ಹಳೆಯ ಅಥವಾ ಮುಚ್ಚಿದ ಖಾತೆಯ ಬಗ್ಗೆ ಮಾಹಿತಿಯನ್ನು ನೀಡಿದರೆ, ಮರುಪಾವತಿಯನ್ನು ಆದಾಯ ತೆರಿಗೆ ಇಲಾಖೆ ತಡೆಹಿಡಿಯುತ್ತದೆ.

ರೀಫಂಡ್‌ ವಿಳಂಬವಾದಲ್ಲಿ ಏನು ಮಾಡಬೇಕು?

ಆದಾಯ ತೆರಿಗೆ ಸಲ್ಲಿಸಿದ ನಂತರ, incometax.gov.in ಪೋರ್ಟಲ್‌ನಲ್ಲಿ ಐಟಿಆರ್ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ. ಈ ಸಮಯದಲ್ಲಿ ಯಾವುದೇ ತಪ್ಪು ಕಂಡುಬಂದರೆ, ಅದನ್ನು ತಕ್ಷಣ ಸರಿಪಡಿಸಿ. ಮಾಹಿತಿ ಸರಿಯಾಗಿದ್ದರೆ, ಇ-ವೆರಿಫೈ ಮಾಡಿ. ಇದರ ನಂತರ, 2 ರಿಂದ 5 ವಾರಗಳಲ್ಲಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!