ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!

By Suvarna News  |  First Published Jan 6, 2020, 10:04 AM IST

ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!| ಪಾಸ್‌ಪೋರ್ಟ್‌, ವಿದ್ಯುತ್‌ ಬಿಲ್‌ ಮಾಹಿತಿ ಕಡ್ಡಾಯದ ಹೊಸ ಆದಾಯ ತೆರಿಗೆ ಫಾರ್ಮ್ ರೆಡಿ| ಫಾಮ್‌ರ್‍ಗಳಿಗೆ ಸಿಬಿಟಿಡಿ ಅನುಮೋದನೆ| ಪಾಸ್‌ಪೋರ್ಟ್‌ ಸಂಖ್ಯೆ, ಹಣದ ವ್ಯವಹಾರ, ವಿದ್ಯುತ್‌ ಬಿಲ್‌ ನಮೂದಿಸಬೇಕು


ನವದೆಹಲಿ[ಜ.06]: ಹೊಸ ಅಂಶಗಳನ್ನು ಒಳಗೊಂಡ 2020-21ನೇ ಸಾಲಿನ ಐಟಿಆರ್‌-1 ‘ಸಹಜ್‌’ ಹಾಗೂ ಐಟಿಆರ್‌-4 ‘ಸುಗಮ್‌’ ರಿಟರ್ನ್‌ ಫಾಮ್‌ರ್‍ಗಳಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಒಪ್ಪಿಗೆ ಸೂಚಿಸಿದೆ. ಐಟಿಆರ್‌-1 ಸಹಜ್‌ ಫಾಮ್‌ರ್‍ಗಳು 50 ಲಕ್ಷ ರು.ವರೆಗೆ ಆದಾಯ ಹೊಂದಿದವರಿಗೆ ಇರುವ ಫಾರ್ಮ್ ಆಗಿದೆ.

ವೇತನದಾರರು, ಒಂದು ಮನೆಯ ಏಕೈಕ ಮಾಲೀಕ, ಬಡ್ಡಿಯಿಂದ ಬರುವ ಆದಾಯ, ಕೌಟುಂಬಿಕ ಪಿಂಚಣಿ ಹೊಂದಿದವರಿಗೆ ಇದು ಅನ್ವಯ. ಐಟಿಆರ್‌-4 ಸುಗಮ್‌ ಫಾಮ್‌ರ್‍ಗಳು ಕೂಡ 50 ಲಕ್ಷ ರು.ವರೆಗೆ ಆದಾಯ ಹೊಂದಿದವರಿಗೆ ಇರುವ ಫಾಮ್‌ರ್‍ಗಳಾದರೂ ಅನ್ಯ ರೀತಿಯ ಆದಾಯ ಬರುವವರಿಗೆ ಸೇರಿದ ಫಾಮ್‌ರ್‍ಗಳಾಗಿವೆ. ವ್ಯಾಪಾರದ ಮೂಲಕ ಆದಾಯ ಹೊಂದಿದವರಿಗೆ ಇದು ಅನ್ವಯವಾಗುತ್ತದೆ.

Tap to resize

Latest Videos

ಐಟಿ ರಿಟರ್ನ್ಸ್ ಬಂದಿಲ್ಲ ಅಂದ್ರೆ ಏನ್ಮಾಡಬೇಕು?: ಸಿಂಪಲ್ ಸ್ಟೆಪ್ಸ್!

ಯಾವ ಹೊಸ ಅಂಶಗಳು?:

ಐಟಿಆರ್‌-1 ಸಹಜ್‌ ಫಾರ್ಮ್‌ನಲ್ಲಿ ‘ನೀವು ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದೀರಾ? ಹೊಂದಿದ್ದರೆ ಪಾಸ್‌ಪೋರ್ಟ್‌ ನಂಬರ್‌ ತಿಳಿಸಿ’ ಎಂಬ ಹೊಸ ಅಂಶ ಹೊಂದಿದೆ.

ಇನ್ನು ಐಟಿಆರ್‌-4 ಸಹಜ್‌ ಫಾರ್ಮ್‌ನಲ್ಲಿ ‘1 ಕೋಟಿ ರು.ಗಿಂತ ಹೆಚ್ಚು ಹಣವನ್ನು ಕಳೆದ ವರ್ಷ ಚಾಲ್ತಿ ಖಾತೆಯಲ್ಲಿ ಠೇವಣಿ ಇಟ್ಟಿದ್ದೀರಾ? ಹಾಗಿದ್ದರೆ ಎಷ್ಟು ಠೇವಣಿ ಇರಿಸಿದ್ದೀರಿ ತಿಳಿಸಿ’ ಎಂಬ ಪ್ರಶ್ನೆಯಿದೆ. ವಿದೇಶ ಪ್ರವಾಸಕ್ಕೆ .2 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದರೆ ಅ ಮೊತ್ತವನ್ನೂ ನಮೂದಿಸಬೇಕು. 1 ಲಕ್ಷ ರು.ಗಿಂತ ಹೆಚ್ಚಿನ ವಿದ್ಯುತ್‌ ಬಿಲ್‌ ತುಂಬಿದ್ದರೆ, ವಿದ್ಯುತ್‌ ಬಿಲ್‌ ಮೊತ್ತವನ್ನೂ ಅರ್ಜಿಯಲ್ಲಿ ನಮೂದಿಸಬೇಕು.

ಟ್ಯಾಕ್ಸ್ ರಿಫಂಡ್ ಸ್ಟೇಟಸ್ ತಿಳಿಯೋದು ಹೀಗೆ: ಒಂದು ಕ್ಲಿಕ್‌ನ ಸೇವೆ ನಿಮಗೆ!

click me!