2022ಕ್ಕೆ ದೇಶದಲ್ಲಿ 30 ಲಕ್ಷ ಐಟಿ ಉದ್ಯೋಗ ನಷ್ಟ?

By Suvarna News  |  First Published Jun 17, 2021, 8:18 AM IST

* ದೇಶಾ​ದ್ಯಂತ ಭಾರೀ ಪ್ರಮಾ​ಣದ ನಿರು​ದ್ಯೋ​ಗದ ಸಮಸ್ಯೆ 

* ಯಾಂತ್ರೀ​ಕ​ರ​ಣ: 2022ಕ್ಕೆ 30 ಲಕ್ಷ ಐಟಿ ಉದ್ಯೋಗ ನಷ್ಟ?

* ನಾಸ್‌ಕಾಂ ಸಂಸ್ಥೆ ಸಿದ್ಧ​ಪ​ಡಿ​ಸಿದ ವರ​ದಿ​ಯಲ್ಲಿ ಉಲ್ಲೇಖ


ಮುಂಬೈ(ಜೂ.17): ದೇಶಾ​ದ್ಯಂತ ಭಾರೀ ಪ್ರಮಾ​ಣದ ನಿರು​ದ್ಯೋ​ಗದ ಸಮಸ್ಯೆ ಇರು​ವಾ​ಗಲೇ, ಕೈಗಾ​ರಿ​ಕೆ​ಗ​ಳಲ್ಲಿ ವಿಶೇ​ಷ​ವಾಗಿ ತಂತ್ರ​ಜ್ಞಾ​ನದ ಜಾಗ​ದಲ್ಲಿ ಅತಿ​ಯಾದ ಯಾಂತ್ರೀ​ಕ​ರಣದ ಕಾರ​ಣ​ದಿಂದಾಗಿ ದೇಶೀಯ ಸಾಫ್ಟ್‌​ವೇರ್‌ ಉದ್ಯ​ಮ​ಗ​ಳಲ್ಲಿ 2022ರ ವೇಳೆಗೆ 30 ಲಕ್ಷ ಉದ್ಯೋಗ ಕಡಿತ ಆಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.

ದೇಶದ ಐಟಿ ವಲಯದಲ್ಲಿ 1.6 ಕೋಟಿ ಉದ್ಯೋ​ಗಿಗಳಿದ್ದಾರೆ. ಈ ಪೈಕಿ 90 ಲಕ್ಷ ಉದ್ಯೋ​ಗಗಳು ಕಡಿಮೆ ಕೌಶಲದವರು ಅಥವಾ ಬಿಪಿಒನವರು ಎಂದು ನಾಸ್‌ಕಾಂ ಸಂಸ್ಥೆ ಸಿದ್ಧ​ಪ​ಡಿ​ಸಿದ ವರ​ದಿ​ಯಲ್ಲಿ ಉಲ್ಲೇಖಿ​ಸ​ಲಾ​ಗಿದೆ.

Tap to resize

Latest Videos

undefined

2022ರ ವೇಳೆಗೆ ಟಿಸಿ​ಎಸ್‌, ಇಸ್ಫೋ​ಸಿಸ್‌, ವಿಪ್ರೋ, ಎಚ್‌​ಸಿ​ಎಲ್‌, ಟೆಕ್‌ ಮಹಿಂದ್ರಾ ಮತ್ತು ಕಾಜ್ನಿ​ಜಾಂಟ್‌ ಸೇರಿ​ದಂತೆ ಇನ್ನಿ​ತರ ಕಂಪ​ನಿ​ಗಳು ಕಡಿಮೆ ಕೌಶ​ಲ್ಯ ಹೊಂದಿದ 30 ಲಕ್ಷ ಉದ್ಯೋ​ಗಿ​ಗ​ಳನ್ನು ಕೆಲ​ಸ​ದಿಂದ ಕೈಬಿ​ಡುವ ಸಾಧ್ಯ​ತೆ​ಯಿದೆ ಎಂದು ತಿಳಿ​ಸ​ಲಾ​ಗಿದೆ. ಇದ​ರಿಂದ ಖಾಸಗಿ ಕಂಪ​ನಿ​ಗ​ಳಿಗೆ ವಾರ್ಷಿಕ 7.3 ಲಕ್ಷ ಕೋಟಿ ರು. ಉಳಿ​ತಾ​ಯ​ವಾ​ಗ​ಲಿದೆ ಎನ್ನಲಾ​ಗಿದೆ.

ಕೆಲ​ಸ​ಕ್ಕಾಗಿ ಖಾಸಗಿ ಕಂಪ​ನಿ​ಗಳು ರೋಬೋಟ್‌ ಅಥವಾ ಆರ್‌​ಪಿಎ ಎಂಬ ಯಾಂತ್ರಿಕ ಉಪ​ಕ​ರ​ಣ​ಗ​ಳನ್ನು ಬಳ​ಸಿ​ಕೊ​ಳ್ಳು​ತ್ತಿ​ರು​ವು​ದೇ ಈ ಬೆಳ​ವ​ಣಿ​ಗೆಗೆ ಕಾರ​ಣ​ವಾ​ಗಿದೆ.

click me!