ವಶಕ್ಕೆ ಪಡೆದ ಹಡಗಲ್ಲಿ ಅರಬ್ ಅಕ್ರಮ ತೈಲ: ಇರಾನ್ ಆರೋಪ!

By Web Desk  |  First Published Aug 4, 2019, 6:25 PM IST

ಅರಬ್ ರಾಷ್ಟ್ರಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಕಚ್ಚಾತೈಲ ವಶ| ಗಲ್ಫ್ ಕೊಲ್ಲಿಯ ಫರ್ಸಿ ಐಲ್ಯಾಂಡ್ ಬಳಿ ಹಡಗು ವಶಕ್ಕೆ ಪಡೆದ ಇರಾನ್| ಸುಮಾರು 7 ಲಕ್ಷ ಬ್ಯಾರೆಲ್ ಕಚ್ಚಾತೈಲ ಇರಾನ್ ವಶಕ್ಕೆ| ಹಡಗಿನಲ್ಲಿದ್ದ 7 ಸಿಬ್ಬಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ| 


ಟೆಹರನ್(ಆ.04): ಇತ್ತೀಚಿಗೆ ವಶಕ್ಕೆ ಪಡೆದಿದ್ದ ಮೂಲದ ಹಡಗಿನಲ್ಲಿ ಅರಬ್ ರಾಷ್ಟ್ರಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಕಚ್ಚಾತೈಲವಿತ್ತು ಎಂದು ಇರಾನ್ ತಿಳಿಸಿದೆ.

ಗಲ್ಫ್ ಕೊಲ್ಲಿಯ ಫರ್ಸಿ ಐಲ್ಯಾಂಡ್ ಬಳಿ ಹಡಗೊಂದನ್ನು ವಶಕ್ಕೆ ಪಡೆದಿದ್ದ ಇರಾನ್, ಅದರಲ್ಲಿದ್ದ ಸುಮಾರು 7 ಲಕ್ಷ ಬ್ಯಾರೆಲ್ ಕಚ್ಚಾತೈಲವನ್ನು ವಶಕ್ಕೆ ಪಡೆದಿತ್ತು.

Tap to resize

Latest Videos

undefined

ಈ ಕಚ್ಚಾತೈಲವನ್ನು ಅಕ್ರಮವಾಗಿ ಅರಬ್ ರಾಷ್ಟ್ರಗಳಿಗೆ ರವಾನಿಸಲಾಗುತ್ತಿತ್ತು ಎಂದು ಇರಾನ್ ತಿಳಿಸಿದ್ದು, ಹಡಗಿನಲ್ಲಿದ್ದ 7 ಸಿಬ್ಬಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದೆ.

ಇದಕ್ಕೂ ಮೊದಲು ಬ್ರಿಟನ್ ಮೂಲದ ಹಡಗೊಂದನ್ನು ವಶಕ್ಕೆ ಪಡೆದಿದ್ದ ಇರಾನ್, ಭಾರತೀಯರು ಸೇರಿ ಅದರಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

click me!