
ಭಾರತದಲ್ಲಿ ಕೋಟ್ಯಾಧೀಶರ (India Billionaires) ಸಂಖ್ಯೆ ದಿನದಿಂದ ಹೆಚ್ಚಾಗ್ತಿದೆ. ಈ ಶ್ರೀಮಂತರು ಹಣವನ್ನು ಎಲ್ಲಿ ಹೂಡಿಕೆ (investment) ಮಾಡ್ತಾರೆ ಎಂಬ ಪ್ರಶ್ನೆ ಮಧ್ಯಮ ವರ್ಗದವರನ್ನು ಕಾಡೋದು ಸಾಮಾನ್ಯ. ನಾವು ಶ್ರೀಮಂತರಾಗ್ಬೇಕು ಅಂದ್ರೆ ಎಲ್ಲಿ ಹಣ ಹೂಡಿಕೆ ಮಾಡ್ಬೇಕು, ಎಷ್ಟು ಹೂಡಿಕೆ ಮಾಡ್ಬೇಕು ಎಂಬೆಲ್ಲ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇತ್ತೀಚಿನ ವರದಿಯೊಂದು ಶ್ರೀಮಂತರು ಎಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡ್ತಾರೆ ಎಂಬುದನ್ನು ಬಹಿರಂಗಪಡಿಸಿದೆ.
ಶ್ರೀಮಂತರು ಇಲ್ಲಿ ಹೂಡಿಕೆ ಮಾಡ್ತಿದ್ದಾರೆ : ವರದಿ ಪ್ರಕಾರ, ಭಾರತದ ಬಹುತೇಕ ಶ್ರೀಮಂತರ ಗಮನ ರಿಯಲ್ ಎಸ್ಟೇಟ್ (Real Estate) ಮೇಲಿದೆ. ರಿಯಲ್ ಎಸ್ಟೇಟ್ ನಲ್ಲಿ ಹಣ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯಾಗ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಶೇಕಡಾ 62ರಷ್ಟು ಶ್ರೀಮಂತರು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ ಎಂದು ವರದಿ ಹೇಳಿದೆ.
ಕೌಟುಂಬಿಕ ಮಾಸಿಕ ತಲಾ ವೆಚ್ಚ ಕುರಿತ ವರದಿ ಪ್ರಕಟ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಇಂಡಿಯಾ ಸೋಥೆಬಿಸ್ ಇಂಟರ್ನ್ಯಾಷನಲ್ ರಿಯಾಲ್ಟಿ ಈ ಸಮೀಕ್ಷೆ ನಡೆಸಿದೆ. 623 ಶ್ರೀಮಂತ ಮತ್ತು ಅತಿ ಶ್ರೀಮಂತರ ಮೇಲೆ ಸಮೀಕ್ಷೆ ನಡೆದಿದೆ. ಐಷಾರಾಮಿ ವಸತಿ ಔಟ್‌ಲುಕ್ ಸಮೀಕ್ಷೆ 2025 ವರದಿ ಪ್ರಕಾರ, ದೇಶದ ಶೇಕಡಾ 62 ರಷ್ಟು ಶ್ರೀಮಂತರು ಮುಂದಿನ ಎರಡು ವರ್ಷಗಳಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ. ಭಾರತದ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಮಂದಗತಿ ಕಂಡುಬಂದಿದೆ. ಆದರೆ ರಿಯಲ್ ಎಸ್ಟೇಟ್ ಬಗ್ಗೆ ಜನರ ವಿಶ್ವಾಸ ಇನ್ನೂ ಬಲವಾಗಿದೆ. 2024 ರಲ್ಲಿ ಶೇಕಡಾ 71 ರಷ್ಟು ಶ್ರೀಮಂತರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸಿದ್ದರು, ಆದರೆ ಈ ವರ್ಷ ಈ ಅಂಕಿ ಅಂಶವು ಶೇಕಡಾ 62ಕ್ಕೆ ಇಳಿದಿದೆ. ಇದರ ಹೊರತಾಗಿಯೂ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಗೆ ಬೇಡಿಕೆ ದೊಡ್ಡ ಮಟ್ಟದಲ್ಲಿ ಕಡಿಮೆ ಆಗಿಲ್ಲ. ಅನೇಕರು ಹೊಸದಾಗಿ ಹೂಡಿಕೆ ಮಾಡಲು ಮುಂದಾಗ್ತಿದ್ದಾರೆ.
ರಿಯಲ್ ಎಸ್ಟೇಟ್ ಮೇಲೆ ಹೆಚ್ಚುತ್ತಿದೆ ಜನರ ನಂಬಿಕೆ : ವರದಿ ಪ್ರಕಾರ, ಹೆಚ್ಚಿನ ಶ್ರೀಮಂತರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಶೇಕಡಾ 12 ರಿಂದ 18 ರಷ್ಟು ಲಾಭ ಸಿಗುತ್ತದೆ ಎಂದು ನಿರೀಕ್ಷಿಸುತ್ತಾರೆ. ಸುಮಾರು ಶೇಕಡಾ 38 ರಷ್ಟು ಜನರು ಶೇಕಡಾ 12 ಕ್ಕಿಂತ ಕಡಿಮೆ ಆದಾಯ ನಿರೀಕ್ಷಿಸುತ್ತಿದ್ದರೆ, ಶೇಕಡಾ 15 ರಷ್ಟು ಜನರು ಶೇಕಡಾ 18 ಕ್ಕಿಂತ ಹೆಚ್ಚಿನ ಆದಾಯ ನಿರೀಕ್ಷಿಸುತ್ತಿದ್ದಾರೆ. ಭಾರತದ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆ 2025 ಕ್ಕೆ ನಿರಂತರ ಬೆಳವಣಿಗೆಗೆ ಸಿದ್ಧವಾಗಿದೆ. ಇದು ಎಚ್ಚರಿಕೆಯ ಮತ್ತು ಆಶಾವಾದಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮುಕೇಶ್ ಅಂಬಾನಿ ರೀತಿ ಯಶಸ್ಸು ಕಾಣಲು ಈ 5 ಗೋಲ್ಡನ್ ರೂಲ್ಸ್ ಫಾಲೋ ಮಾಡಲು ಮರಿಬೇಡಿ
ಭಾರತದ ಶ್ರೀಮಂತರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಬಗ್ಗೆ ಜಾಗರೂಕರಾಗಿದ್ರೂ ಮಾರುಕಟ್ಟೆ ಇನ್ನೂ ಲಾಭದಾಯಕ ವ್ಯವಹಾರವಾಗಬಹುದು ಎಂಬ ವಿಶ್ವಾಸದಲ್ಲಿ ಹೂಡಿಕೆ ಮಾಡ್ತಿದ್ದಾರೆ. ಅವರು ಐಷಾರಾಮಿ ಆಸ್ತಿಗಳು ಮತ್ತು ಪ್ರೀಮಿಯಂ ಸ್ಥಳಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಒಲವು ತೋರಿಸ್ತಿದ್ದಾರೆ. ಶ್ರೀಮಂತರ ಈ ಹೂಡಿಕೆಯಲ್ಲಿ ಕೆಲವು ಸಣ್ಣ ಬದಲಾವಣೆಗಳಿದ್ದರೂ ಸಹ, ರಿಯಲ್ ಎಸ್ಟೇಟ್ ಇನ್ನೂ ಬಲವಾದ ಮತ್ತು ವಿಶ್ವಾಸಾರ್ಹ ಹೂಡಿಕೆಯ ಮಾರ್ಗವಾಗಿ ಮುಂದುವರೆದಿದೆ.
ಹೆಚ್ಚಿನ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ ಮಾರ್ಗವಾಗಿದೆ. ಆದ್ರೆ ಆಸ್ತಿ ಬಗ್ಗೆ ಸರಿಯಾದ ಮಾಹಿತಿ ಅಗತ್ಯ. ಉತ್ತಮ ಆಸ್ತಿ ಜೊತೆ ಸ್ಥಳವನ್ನು ಆಯ್ಕೆ ಮಾಡಿ, ದಾಖಲೆಗಳನ್ನು ಪರಿಶೀಲಿಸಿ ಹೂಡಿಕೆ ಮಾಡಬೇಕು. ತಜ್ಞರ ಸಲಹೆ ಪಡೆದು ಹೂಡಿಕೆ ಮಾಡಿದಲ್ಲಿ ಸಿಗುವ ಲಾಭ ಹೆಚ್ಚು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.