ದುಬೈ ಎಕ್ಸ್‌ಪೋ ಯಶಸ್ವಿ: ರಾಜ್ಯಕ್ಕೆ ಬಂಡವಾಳ ನಿರೀಕ್ಷೆ, ಸಚಿವ ನಿರಾಣಿ

By Kannadaprabha NewsFirst Published Oct 22, 2021, 7:56 AM IST
Highlights

*  ಉದ್ಯಮಿಗಳಿಂದ ಬಂಡವಾಳ ಹೂಡಿಕೆಗೆ ಆಸಕ್ತಿ
*  ಸುಮಾರು 3500 ಕೋಟಿ ರು. ಬಂಡವಾಳ ಹೂಡಿಕೆ
*  2022ರ ನವೆಂಬರಲ್ಲಿ ಹೂಡಿಕೆದಾರರ ಸಮಾವೇಶ
 

ಬೆಂಗಳೂರು(ಅ.22):  ‘ದುಬೈ ಎಕ್ಸ್‌ಪೋ 2020’(Dubai Expo 2020) ಭೇಟಿಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ರಾಜ್ಯದಲ್ಲಿ(Karnataka) ಹಲವು ಪ್ರತಿಷ್ಠಿತ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದ ಉದ್ಯೋಗಾವಕಾಶಗಳು(Jobs) ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ(Murugesh Nirani) ವಿಶ್ವಾಸ ವ್ಯಕ್ತಪಡಿಸಿದ್ದಾರೆ

ನಾಲ್ಕು ದಿನಗಳ ದುಬೈ(Dubai0 ಪ್ರವಾಸ ಕುರಿತು ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು, ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ಲುಲು ಗ್ರೂಪ್‌, ಮುಬದಾಲ, ಕೆಇಎಫ್‌ ಹೋಲ್ಡಿಂಗ್ಸ್‌ ದುಕಬ್‌, ಎಲೆಕ್ಟ್ರಿಕ್‌ ವೇ ಡಿಪಿ ವಲ್ಡ್‌ರ್‍, ಆಸ್ಟರ್‌ ಹೆಸ್‌ ಕೇರ್‌, ಶಂಶಿ ಟ್ರಾವೆಲರ್ಸ್‌, ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌, ಯುನೈಟೆಡ್‌ ಪಾರ್ಕ್ ಆ್ಯಂಡ್‌ ಸರ್ವೀಸ್‌, ಎಕ್ಸ್‌ಪೋರ್ಟ್‌ ಬಹ್ರೇನ್‌, ಎಐಎಂಎಲ್‌, ತಗ್ಲೀಪ್‌ ಇಂಡಸ್ಟ್ರೀಸ್‌ ಸೇರಿದಂತೆ ಅನೇಕ ಕಂಪನಿಗಳು ಬಂಡವಾಳ ಹೂಡಿಕೆಗೆ ಸಮ್ಮತಿಸಿವೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮೂಲಕದ ಪ್ರತಿಷ್ಠಿತ ಗಲ್ಫ್‌ ಇಸ್ಲಾಮಿಕ್‌ ಇನ್ವೆಸ್ಟ್‌ಮೆಂಟ್‌ ಬೆಂಗಳೂರಲ್ಲಿ(Bengaluru) ತನ್ನ ಕಚೇರಿ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಮುಂದಿನ ದಿನದಲ್ಲಿ ಸುಮಾರು 3500 ಕೋಟಿ ರು. ಬಂಡವಾಳ(Investment) ಹೂಡಲಿದೆ ಎಂದು ಮಾಹಿತಿ ನೀಡಿದರು.

`ದುಬೈ ಎಕ್ಸ್ ಪೋ’ದಲ್ಲಿಐಟಿ-ಬಿಟಿ ಸಚಿವರ ಮಾತು, ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನ

2022ರ ನವೆಂಬರಲ್ಲಿ ಹೂಡಿಕೆದಾರರ ಸಮಾವೇಶ:

ಮುಂದಿನ 2022ರ ನವೆಂಬರ್‌ ತಿಂಗಳಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು(Global Investor Conference) ಬೆಂಗಳೂರಲ್ಲಿ ನಡೆಸಲಿದ್ದು, ಈ ವೇಳೆ ದೊಡ್ಡ ಪ್ರಮಾಣದ ಉದ್ಯಮಿಗಳು ರಾಜ್ಯಕ್ಕೆ ಆಗಮಿಸುವ ಸಂಭವ ಇದೆ. ಕೋವಿಡ್‌(Covid19) ಕಾರಣದಿಂದಾಗಿ ಹೂಡಿಕೆದಾರರ ಸಮಾವೇಶವನ್ನು ಮುಂದೂಡಲಾಗಿತ್ತು ಎಂದು ಇದೇ ವೇಳೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಆಯುಕ್ತ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.
 

click me!