ದೀಪಾವಳಿ ಪ್ರಯುಕ್ತ ಸರ್ಕಾರಿ ನೌಕರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್‌ !

By Suvarna News  |  First Published Oct 21, 2021, 6:49 PM IST

-ಕೆಂದ್ರ ಸಂಪುಟದಿಂದ ತುಟ್ಟಿ ಭತ್ಯೆ  3%  ಹೆಚ್ಚಿಸಲು ಅಸ್ತು   
-ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ
-ಕೊರೋನಾ ವೈರಸ್‌ ಕಾರಣದಿಂದಾಗಿ ತುಟ್ಟಿ ಭತ್ಯೆ ತಡೆಹಿಡಿದಿದ್ದ ಸರ್ಕಾರ


ನವದೆಹಲಿ(ಅ. 21):  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರ ಶೇ. 3ರಷ್ಟು  ತುಟ್ಟಿ ಭತ್ಯೆ (Dearness allowance) ಹೆಚ್ಚಳಕ್ಕೆ ಕೇಂದ್ರ ಸಂಪುಟ ಗ್ರೀನ್‌ ಸಿಗ್ನಲ್ ನೀಡಿದೆ. ಈ ಹೆಚ್ಚಳದ ನಂತರ ಒಟ್ಟು ತುಟ್ಟಿ ಭತ್ಯೆ 31% ಆಗಲಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಭತ್ಯೆ ಪರಿಹಾರದ ಹೆಚ್ಚಳದಿಂದ 47.1 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು  68.62 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಇದರಿಂದ ಕೇಂದ್ರದ ಖಜಾನೆ ಮೇಲೆ ಪ್ರತಿ ವರ್ಷ 34,400 ಕೋಟಿ ಹೊರೆಯಾಗಲಿದೆ. ಜುಲೈ 1, 2021 ರಿಂದ ಈ ಭತ್ಯೆ ಅನ್ವಯಿಸುತ್ತದೆ ಎಂದು ಕೇಂದ್ರ ಮಂತ್ರಿ ಅನುರಾಗ್‌ ಠಾಕೂರ್‌ (Anuragh Thakur) ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅನುರಾಗ್ ಠಾಕೂರ್ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್‌ ಕೂಡ ಮಾಡಲಾಗಿದೆ.

approves release of an additional instalment of Dearness Allowance to Central Government employees and Dearness Relief to Pensions, due from 01.07.2021.

An increase of 3% over the existing rate of 28% of the Basic Pay / Pension. pic.twitter.com/22vZFKTaHF

— Office of Mr. Anurag Thakur (@Anurag_Office)

 

Latest Videos

undefined

ಕೊರೋನಾ ವೈರಸ್‌ (Coronaವirus) ಕಾರಣದಿಂದಾಗಿ ಕೇಂದ್ರ ಸರ್ಕಾರಿ ನೌಕರರು (Central govt employees) ಮತ್ತು ಪಿಂಚಣಿದಾರರು  ಜನವರಿ 1 2020, ಜುಲೈ 1 2020 ಮತ್ತು ಜನವರಿ 1 2021 ಒಟ್ಟು ಮೂರು ಕಂತಿನ ತುಟ್ಟಿಭತ್ಯೆ (ಡಿಎ) ಹಾಗೂ ತುಟ್ಟಿ ಭತ್ಯೆ ಪರಿಹಾರ (ಡಿಆರ್‌) ಮೊತ್ತವನ್ನು ತಡೆಹಿಡಿಯಲಾಗಿತ್ತು. ಒಂದು ವರ್ಷದ ನಂತರ ಜುಲೈ ತಿಂಗಳನಲ್ಲಿ  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಡಿಯರ್ನೆಸ್ ಅಲಾವೆನ್ಸ (DA) ಮತ್ತು ಡಿಯರ್ನೆಸ್ ರಿಲೀಫ್ (DR) ಅನ್ನು ಶೇ .17 ರಿಂದ 28 ಕ್ಕೆ ಹೆಚ್ಚಿಸಲು ಕೇಂದ್ರವು ಅನುಮೋದನೆ ನೀಡಿತ್ತು.  

ನವೋದ್ಯಮಿಗಳ ಪ್ರೋತ್ಸಾಹಕ್ಕೆ ನೀತಿ : ರಾಜೀವ್‌ ಚಂದ್ರಶೇಖರ್‌

ಈಗ ಮತ್ತೆ ತುಟ್ಟಿ ಭತ್ಯೆ 3% ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ನೌಕರರಿಗೆ ದೀಪಾವಳಿ ಕೊಡುಗೆಯನ್ನು ನೀಡಿದೆ. ಹಾಗಾಗಿ ಜನವರಿ 1 2020, ಜುಲೈ 1 2020 ಮತ್ತು ಜನವರಿ 1 2021 ಸೇರಿದಂತೆ ಜುಲೈ  1 2021 ರ ಭತ್ಯೆ ಬಾಕಿ ಇದೆ. ನೌಕರರ ಬೇಸಿಕ್‌ ಸ್ಯಾಲರಿಯ (Basic salary) ನಿರ್ದಿಷ್ಟ ಶೇಕಡಾ (Percentage) ಮೂಲಕ  ತುಟ್ಟಿ ಭತ್ಯೆಯನ್ನು ಲೆಕ್ಕ ಮಾಡಲಾಗುತ್ತದೆ. ನಂತರ ತುಟ್ಟಿ ಭತ್ಯೆಯನ್ನು, ಇತರ ವೇತನಗಳೊಂದಿಗೆ ಬೇಸಿಕ್‌ ಸ್ಯಾಲರಿಗೆ ಸೇರಿಸಲಾಗುತ್ತದೆ. ಇವೆಲ್ಲವೂ ಸೇರಿ ನೌಕರರ ಒಟ್ಟು ವೇತನವನ್ನು ಲೆಕ್ಕ ಮಾಡಲಾಗುತ್ತದೆ. 

IMF ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನಕ್ಕೆ ಕರ್ನಾಟಕ ಮೂಲದ ಗೀತಾ ಗೋಪಿನಾಥ್ ರಾಜೀನಾಮೆ!

ಪತ್ರಿಕಾಗೋಷ್ಟಿಯಲ್ಲಿ ಭಾರತ 100 ಕೋಟಿ ಲಸಿಕೆಗಳನ್ನು ನೀಡಿದ ದಾಖಲೆ  ಬಗ್ಗೆ ಕೂಡ ಮಾತನಾಡಿದ ಅನುರಾಗ್‌ ಠಾಕೂರ್‌ ʼ100 ಕೋಟಿ ಲಸಿಕೆ ದಾಖಲೆ ತಲುಪಿದ್ದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಭಯದ ವಾತಾವರಣ ಮಧ್ಯೆಯೇ ನಾವು ಈ ದಾಖಲೆಯನ್ನು ಬರೆದಿದ್ದೇವೆ ಎಂದುʼ ಹೇಳಿದ್ದಾರೆ.

click me!