ಜಿಮ್‌: ಮೊದಲ ದಿನವೇ 5.36 ಲಕ್ಷ ಕೋಟಿ ರೂ. ಒಪ್ಪಂದ

Published : Feb 12, 2025, 08:47 AM IST
ಜಿಮ್‌: ಮೊದಲ ದಿನವೇ 5.36 ಲಕ್ಷ ಕೋಟಿ ರೂ. ಒಪ್ಪಂದ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಉದ್ಘಾಟನಾ ವೇದಿಕೆಯಲ್ಲಿ 32 ಸಂಸ್ಥೆಗಳ ಪ್ರಮುಖರು 5.36 ಲಕ್ಷ ಕೋಟಿ. ರು. ಹೂಡಿಕೆಯ ಒಡಂಬಡಿಕೆಗೆ ಸಹಿ ಹಾಕಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.  

ಬೆಂಗಳೂರು(ಫೆ.12):  ಇನ್ವೆಸ್ಟ್‌ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಮಂಗಳವಾರ ಅದ್ದೂರಿ ಚಾಲನೆ ದೊರೆತಿದ್ದು, ಉದ್ಘಾಟನೆ ದಿನವೇ ನಿರೀಕ್ಷೆಗೂ ಮೀರಿ 5. 36 ಲಕ್ಷ ಕೋಟಿ ರು. ಗೂ ಹೆಚ್ಚಿನ ಬಂಡವಾಳ ಹೂಡಿಕೆಗೆ ರಾಜ್ಯ ಸರ್ಕಾರದೊಂದಿಗೆ ದೇಶ ಮತ್ತು ವಿದೇಶದ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ.

ಬೆಂಗಳೂರು ಅರಮನೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ದಿನವೇ ಭಾರೀ ಪ್ರಮಾಣದ ಬಂಡವಾಳ ಹರಿದುಬಂದಿದೆ. ಆ ಮೂಲಕ ಬುಧವಾರದಿಂದ ಶುಕ್ರವಾರದವರೆಗೆ ನಡೆಯಲಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ರಾಜ್ಯಕ್ಕೆ ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರುವ ಮುನ್ಸೂಚನೆ ಸಿಕ್ಕಂತಾಗಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಉದ್ಘಾಟನಾ ವೇದಿಕೆಯಲ್ಲಿ 32 ಸಂಸ್ಥೆಗಳ ಪ್ರಮುಖರು 5.36 ಲಕ್ಷಕೋಟರು. ಹೂಡಿಕೆಯ ಒಡಂಬಡಿಕೆಗೆ ಸಹಿ ಹಾಕಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.

ಕರ್ನಾಟಕದಲ್ಲಿ ಹೂಡಿಕೆ ದೇಶಕ್ಕೆ ಲಾಭ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒಲವು:

ಉದ್ಘಾಟನಾ ದಿನದಂದು ಮಾಡಿಕೊಳ್ಳಲಾದ ಒಡಂಬಡಿಕೆ ಪೈಕಿ ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಹೂಡಿಕೆದಾರರು ಹೆಚ್ಚಿನ ಒಲವು ತೋರಿದ್ದಾರೆ. ಅದರಂತೆ 3.43ಲಕ್ಷ ಕೋಟಿ ರು. ಮೊತ್ತದ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಹೂಡಿಕೆಗೆ 13 ಸಂಸ್ಥೆಗಳು ಆಸಕ್ತಿ ತೋರಿದ್ದು, ಈಹೂಡಿಕೆಯಿಂದಾಗಿ 78 ಸಾವಿರಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ. 

ಕರ್ನಾಟಕ ದೇಶದ ಕೈಗಾರಿಕೆಯ ಬೆನ್ನೆಲುಬು: ಸಿಎಂ ಸಿದ್ದರಾಮಯ್ಯ

ಪ್ರಮುಖ 10 ಹೂಡಿಕೆಗಳು

* ಜೆಎಸ್‌ಡಬ್ಲ್ಯು ನಿಯೋ ಎನರ್ಜಿ ಲಿ.: 56 ಸಾವಿರ ಕೋಟಿ ರು. (ಸೌರಶಕ್ತಿ, ಪವನ ಶಕ್ತಿ)
* ಬಲ್ನೋಟಾ ಸ್ಟೀಲ್ ಆ್ಯಂಡ್ ವವರ್ ಲಿ.: 54 ಸಾವಿರ ಕೋಟಿ ರು. (ಸಮಗ್ರ ಉಕ್ಕು ತಯಾರಿಕಾ ಸ್ಥಾವರ)
* ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಲಿ.: 50 ಸಾವಿರ ಕೋಟಿ ರು. (ನವೀಕರಿಸಬಹುದಾದ ಇಂಧನ)
* ರೆನ್ಯೂ ಪ್ರೈ. ಲಿ.: 50 ಸಾವಿರ ಕೋಟಿ ರು. (ನವೀಕರಿಸಬಹುದಾದ ಇಂಧನ) ಸೆರಂಟಿಕಾ ರಿನ್ಯೂವೇಬಲ್ ಇಂಡಿಯಾ •
* ಸೆರೆಂಟಿಕಾ ರಿನ್ಯೂವೇಬಲ್‌ ಇಂಡಿಯಾ ಪ್ರೈ. ಲಿ.: 43,975 ಕೋಟಿ ರು. (ನವೀಕರಿಸಬಹುದಾದ ಇಂಧನ
* ಜೆಎಸ್‌ಡಬ್ಲ್ಯೂ ಗ್ರೂಪ್: 43,900 (ಸಿಮೆಂಟ್‌ ಅಂಡ್ ಸ್ಟೀಲ್) ಮಹೀಂದ್ರಾ, ಸಪ್ಪೆನ್ ಪ್ರೈ. ಲಿ.: 35 ಸಾವಿರ ಕೋಟಿ ರು. (ನವೀಕರಿಸಬಹುದಾದ ಇಂಧನ) 
ಹೀರೋ ಪ್ಯೂಷರ್ ಎನರ್ಜೀಸ್: 22,200 ಕೋಟಿ ರು. (ನವೀಕರಿಸಬಹುದಾದ ಇಂಧನ) 
* ಸುಜ್ಲಾನ್‌ ಎನರ್ಜಿ ಲಿ. 21,950 ಕೋಟಿ ರು. (ಪವನ ವಿದ್ಯುತ್ ಯೋಜನೆ)
* ಎಸ್ಸಾರ್‌ ರಿನ್ಯೂವೇಬಲ್‌ ಲಿ. 20 ಸಾವಿರ ಕೋಟಿ ರು. (ನವೀಕರಿಸಬಹುದಾದ ಇಂಧನ)

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ