ಜಾಗತಿಕ ಕಂಪನಿ ಯಾವುದು ಅನ್ನೋದನ್ನು ಬಹಿರಂಗಪಡಿಸಲಾಗಿಲ್ಲ. ಅದರೊಂದಿಗೆ ಎಂಒಯು ರದ್ದು ಮಾಡಿದ್ದಕ್ಕೆ ಯಾವುದೇ ಕಾರಣವನ್ನು ತಿಳಿಸಲಾಗಿಲ್ಲ.
ಬೆಂಗಳೂರು (ಡಿ.23): ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಬೆಂಗಳೂರು ಮೂಲದ ಇನ್ಫೋಸಿಸ್ ಲಿಮಿಟೆಡ್ ಸೆಪ್ಟೆಂಬರ್‌ನಲ್ಲಿ ಜಾಗತಿಕ ಕಂಪನಿಯೊಂದಿಗೆ ಸಹಿ ಮಾಡಿದ ಒಪ್ಪಂದವನ್ನು (ಎಂಒಯು) ಅಂತ್ಯಗೊಳಿಸಲು ನಿರ್ಧರಿಸಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ತಿಳಿಸಿದೆ. ಆಧುನೀಕರಣ ಮತ್ತು ವ್ಯಾಪಾರ ಕಾರ್ಯಾಚರಣೆಗಳ ಸೇವೆಗಳೊಂದಿಗೆ ಇನ್ನಷ್ಟು ಉತ್ತಮ ಡಿಜಿಟಲ್ ಅನುಭವಗಳನ್ನು ಒದಗಿಸುವ ಇನ್ಫೋಸಿಸ್‌ಗೆ ಸಂಬಂಧಿಸಿದ ಎಂಒಯು ಕಂಪನಿಯ ಪ್ಲಾಟ್‌ಫಾರ್ಮ್‌ಗಳು ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಪರಿಹಾರಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರೂಪಿತವಾಗಿತ್ತು. ಯಾವ ಕಂಪನಿಯ ಜೊತೆ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು ಅನ್ನೋದನ್ನ ಇನ್ಫೋಸಿಸ್ ಬಹಿರಂಗಪಡಿಸಿಲ್ಲ. ಅದಲ್ಲದೆ, ಎಂಒಯು ರದ್ದು ಮಾಡಿದ್ದಕ್ಕೆ ಯಾವುದೇ ಕಾರಣವನ್ನು ತಿಳಿಸಲಾಗಿಲ್ಲ.
ಸೆಪ್ಟೆಂಬರ್‌ನಲ್ಲಿ ಕಂಪನಿ ಸಲ್ಲಿಸಿದ್ದ ಎಕ್ಸ್‌ಚೇಂಜ್ ಫೈಲಿಂಗ್ ಪ್ರಕಾರ, 15 ವರ್ಷಗಳ ಅವಧಿಯ ಎಂಒಯು ಇದಾಗಿತ್ತು. ಈ 15 ವರ್ಷಕ್ಕೆ ಆಗುವ ಒಟ್ಟಾರೆ ಖರ್ಚು 12500 ಕೋಟಿ ರೂಪಾಯಿ ಅಂದರೆ 1.5 ಬಿಲಿಯನ್ ಯುಎಸ್ ಡಾಲರ್ ಎನ್ನಲಾಗಿತ್ತು. ಆದರೆ, ಎರಡೂ ಕಂಪನಿಗಳು ಮಾಸ್ಟರ್ ಒಪ್ಪಂದಕ್ಕೆ ಬರುವ ನಿಯಮವನ್ನು ಇದು ಒಳಪಟ್ಟಿತ್ತು. ಆದರೆ, ಈಗ ಎರಡೂ ಪಕ್ಷಗಳು ಮಾಸ್ಟರ್ ಒಪ್ಪಂದಕ್ಕೆ ಪ್ರವೇಶಿಸೋದಿಲ್ಲ ಎಂದು ತಿಳಿಸಿದ್ದು, ಇಲ್ಲಿಗ ಎಂಒಯು ಕೂಡ ಕೊನೆಗೊಳ್ಳಲಿದೆ. ಕಳೆದ ವಾರ, ಇನ್ಫೋಸಿಸ್ ವಾಹನ ಬಿಡಿಭಾಗಗಳ ವಿತರಕ ಎಲ್‌ಕೆಕ್ಯೂ ಯುರೋಪ್‌ನಿಂದ ಐದು ವರ್ಷಗಳ ಒಪ್ಪಂದವನ್ನು ಪಡೆದುಕೊಂಡಿದೆ.
ಇನ್ಫೋಸಿಸ್ ಇತ್ತೀಚೆಗೆ ಲಂಡನ್ ಮೂಲದ ಲಿಬರ್ಟಿ ಗ್ಲೋಬಲ್ ಜೊತೆಗೆ ಐದು ವರ್ಷಗಳ ಅವಧಿಗೆ $1.64 ಬಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದು ಜುಲೈನಲ್ಲಿ ಅಸ್ತಿತ್ವದಲ್ಲಿರುವ ಕ್ಲೈಂಟ್‌ನೊಂದಿಗೆ $ 2 ಬಿಲಿಯನ್ ಒಪ್ಪಂದವನ್ನು ಮತ್ತು ಡ್ಯಾನ್ಸ್‌ಕೆ ಬ್ಯಾಂಕ್‌ನೊಂದಿಗೆ $ 454 ಮಿಲಿಯನ್ ಒಪ್ಪಂದವನ್ನು ಸಹ ಮಾಡಿಕೊಂಡಿತ್ತು. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇನ್ಫೋಸಿಸ್ $7.7 ಶತಕೋಟಿ ಮೌಲ್ಯದ ವ್ಯವಹಾರಗಳನ್ನು ಪಡೆದುಕೊಂಡಿದೆ. ಕಂಪನಿಯ ಭವಿಷ್ಯದ ಬೆಳವಣಿಗೆಯ ಪಥಕ್ಕೆ ಇದು ನೆರವು ನೀಡಲಿದೆ ಎಂದು ದಲಾಲ್ ಸ್ಟ್ರೀಟ್ ಕೂಡ ನಿರೀಕ್ಷೆ ಇರಿಸಿದೆ.
ಇನ್ಫಿ ಮೂರ್ತಿಗೂ ತಟ್ಟಿದ ಡೀಪ್‌ಫೇಕ್ ವಿಡಿಯೋ ಬಿಸಿ: ಹೂಡಿಕೆ ಕುರಿತ ನಕಲಿ ವಿಡಿಯೋ ವೈರಲ್!
ಬ್ರೋಕರೇಜ್ ಸಂಸ್ಥೆ ಕೋಟಾಕ್ ಸೆಕ್ಯುರಿಟೀಸ್, ಇನ್ಫೋಸಿಸ್ ತನ್ನ ಟಿಸಿವಿಯನ್‌ನು ಸರಾಸರಿ $2 ಶತಕೋಟಿಯಿಂದ $2.5 ಶತಕೋಟಿಗೆ ಹೋಲಿಸಿದರೆ $5.5 ಶತಕೋಟಿಯಿಂದ $6 ಶತಕೋಟಿಗೆ ಏರಿಕೆ ಮಾಡಬಹುದು ಎಂದು ಊಹಿಸಿದೆ. ಇನ್ಫೋಸಿಸ್ ಷೇರುಗಳು ಡಿಸೆಂಬರ್‌ನಲ್ಲಿ ಇಲ್ಲಿಯವರೆಗೆ 8% ರಷ್ಟು ಏರಿಕೆಯಾಗಿದ್ದು ನಂತರ ವರ್ಷಕ್ಕೆ ಧನಾತ್ಮಕವಾಗಿ ತಿರುಗಿವೆ. ನಿಫ್ಟಿ 50 ಸೂಚ್ಯಂಕದಲ್ಲಿ ಈ ಸ್ಟಾಕ್ ಕಳಪೆ ಪ್ರದರ್ಶನವನ್ನು ನೀಡಿದೆ. ಕಂಪನಿಯು ತನ್ನ ಡಿಸೆಂಬರ್ ತ್ರೈಮಾಸಿಕ ಆದಾಯವನ್ನು ಜನವರಿ 11ರಂದು ಘೋಷಿಸಲಿದೆ.
ದಿಗ್ಗಜ ಕಂಪೆನಿ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಉದ್ಯೋಗಿಗಳ ಸ್ಯಾಲರಿ ನಾವು, ನೀವು ಅಂದುಕೊಂಡಷ್ಟಲ್ಲ!