Latest Videos

ಯುಟ್ಯೂಬ್‌ನಿಂದಾನೇ ಕೋಟ್ಯಾಂತರ ರೂ. ಸಂಪಾದಿಸೋ ಬುದ್ಧಿವಂತರಿವರು!

By Roopa HegdeFirst Published Jun 21, 2024, 10:37 AM IST
Highlights

ಆದಾಯ ಗಳಿಕೆಗೆ ಯಾವ ಕೆಲಸ ಬೆಸ್ಟ್ ಎಂಬ ಪ್ರಶ್ನೆ ಕೇಳಿದ್ರೆ ಬಹುತೇಕರ ಬಾಯಲ್ಲಿ ಬರುವ ಒಂದೇ ಶಬ್ಧ ಯುಟ್ಯೂಬ್. ಯಸ್, ಯುಟ್ಯೂಬ್ ಮೂಲಕ ಹಣ ಸಂಪಾದನೆ ಮಾಡ್ತಿರೋರ ಸಂಖ್ಯೆ ದೊಡ್ಡದಿದೆ. ಕೆಲವರು ಕೋಟಿ ಲೆಕ್ಕದಲ್ಲಿ ಆಸ್ತಿ ಮಾಡ್ತಿದ್ದಾರೆ. 
 

ಹಿಂದೆ ಇಂಜಿನಿಯರ್ಸ್, ಡಾಕ್ಟರ್ಸ್ ಹೆಚ್ಚು ಶ್ರೀಮಂತರು ಎನ್ನುವ ಮಾತೊಂದಿತ್ತು. ಹಾಗಾಗಿಯೇ ಕಾಲೇಜ್ ಮೆಟ್ಟಿಲೇರುತ್ತಿದ್ದಂತೆ ಮಕ್ಕಳು ಮುಗಿ ಬೀಳ್ತಿದ್ದಿದ್ದು ಇಂಜಿನಿಯರಿಂಗ್, ಡಾಕ್ಟರ್ ಸೀಟ್ ಗಿಟ್ಟಿಸಿಕೊಳ್ಳಲು. ಆದ್ರೀಗ ಜಗತ್ತು ಉಲ್ಟಾ ಆಗ್ತಿದೆ. ಇಂಜಿನಿಯರಿಂಗ್ ಮಾಡಿಕೊಂಡ ಅದೆಷ್ಟೋ ಮಂದಿ ಕೆಲಸ ಇಲ್ಲದೆ ಒದ್ದಾಡ್ತಿದ್ದಾರೆ. ಅದೇ ಬಿಎ, ಬಿಕಾಂ ಮಾಡಿದವರು ಮಾತ್ರವಲ್ಲ ಎಸ್ ಎಸ್ ಎಲ್ ಸಿ ಫೇಲ್ ಆದವರು ಕೂಡ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಇದಕ್ಕೆ ಕಾರಣವಾಗಿರೋದು ಸಾಮಾಜಿಕ ಜಾಲತಾಣ. ಈಗಿನ ದಿನಗಳಲ್ಲಿ ದುಡಿಮೆಗೆ ದೊಡ್ಡ ಮೂಲ ಸಾಮಾಜಿಕ ಜಾಲತಾಣವಾಗಿದೆ. ಜನರು ಯುಟ್ಯೂಬ್, ಇನ್ಸ್ಟಾ, ಫೇಸ್ಬುಕ್ ಸೇರಿದಂತೆ ಅನೇಕ ಕಡೆ ಹಣ ಸಂಪಾದನೆ ಮಾಡ್ತಿದ್ದಾರೆ. ಭಾರತದಲ್ಲಿ ಯುಟ್ಯೂಬ್ ಚಾನೆಲ್ ತೆರೆದು ಕೋಟ್ಯಾಂತರ ಹಣ ಸಂಪಾದನೆ ಮಾಡಿದ ಅನೇಕ ಯುಟ್ಯೂಬರ್ಸ್ ಇದ್ದಾರೆ. ನಾವಿಂದು ಕೆಲ ಯುಟ್ಯೂಬರ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಭುವನ್ ಬಾಮ್ : ಭಾರತದ ಪ್ರಸಿದ್ಧ ಯುಟ್ಯೂಬರ್ (Youtuber) ಭುವನ್ ಬಾಮ್. ಗಳಿಕೆ (Earnings)ಯಲ್ಲೂ ಅವರು ಮುಂದಿದ್ದಾರೆ. ಗುಜರಾತ್ ಮೂಲದ ಭುವನ್ ಬಾಮ್, ಇತಿಹಾಸ ವಿಷ್ಯದಲ್ಲಿ ಬ್ಯಾಚುಲರ್ ಡಿಗ್ರಿ ಮುಗಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅವರು ತಮ್ಮ ಪಾಲಕರನ್ನು ಕಳೆದುಕೊಂಡ್ರು. ಭುವನ್ ಬಾಮ್, ಆಗಷ್ಟೇ ಯುಟ್ಯೂಬ್ ಚಾಲ್ತಿಗೆ ಬರ್ತಿದ್ದ ಕಾಲದಲ್ಲೇ ಅದನ್ನು ಶುರು ಮಾಡಿದ್ದರು.   ಜೂನ್ 21, 2015ರಂದು ಭುವನ್ ಬಾಮ್ ಯುಟ್ಯೂಬ್ ಗೆ ಎಂಟ್ರಿಯಾಗಿದ್ದರು. ಈಗ 2.64 ಕೋಟಿ ಚಂದಾದಾರರನ್ನು ಹೊಂದಿದ್ದಾರೆ. ಭುವನ್ ಬಾಮ್ ನಿವ್ವಳ ಮೌಲ್ಯ 150 ಕೋಟಿ ರೂಪಾಯಿ. 

ರಾಹುಲ್‌ ಗಾಂಧಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಬಂಧನಕ್ಕೆ ಯುಪಿಗೆ ತೆರಳಿ ಪೇಚಿಗೆ ಸಿಲುಕಿದ ಕರ್ನಾಟಕ‌ ಪೊಲೀಸ್!

ಅಜೆ ನಗರ್ : ಯುಟ್ಯೂಬ್ ಮೂಲಕ ಅತಿ ಹೆಚ್ಚು ಸಂಪಾದನೆ ಮಾಡುವ ಇನ್ನೊಬ್ಬ ಯುಟ್ಯೂಬರ್ ಹೆಸರು ಅಜೆ ನಗರ್. ಅವರು 2014ರಲ್ಲಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸಿದ್ರು. ಸುಮಾರು 4.18 ಕೋಟಿ ಚಂದಾದಾರರನ್ನು ಅವರು ಹೊಂದಿದ್ದಾರೆ. ಅವರ ನಿವ್ವಳ ಆದಾಯ 41 ಕೋಟಿ ರೂಪಾಯಿ.  

ಮಿಸ್ಟರ್ ಇಂಡಿಯನ್ ಹ್ಯಾಕರ್  :  ದಿಲ್ರಾಜ್ ಸಿಂಗ್ ರಾವತ್, ಮಿಸ್ಟರ್ ಇಂಡಿಯನ್ ಹ್ಯಾಕರ್ ಹೆಸರಿನಲ್ಲಿ ಯುಟ್ಯೂಬ್ ಹೊಂದಿದ್ದಾರೆ. 2012ರಲ್ಲಿ ಯುಟ್ಯೂಬ್ ಚಾನೆಲ್ ಶುರು ಮಾಡಿದ ಅವರಿಗೆ 3.86 ಕೋಟಿ ಸಬ್ಸ್ಕ್ರೈಬರ್ ಇದ್ದಾರೆ. ಅವರ ನಿವ್ವಳ ಆದಾಯ 16 ಕೋಟಿ ರೂಪಾಯಿ. 

ಆಶಿಶ್ ಚಂಚಲಾನಿ : ಯುಟ್ಯೂಬ್ ಮೂಲಕ ಹಣ ಸಂಪಾದನೆ ಮಾಡ್ತಿರುವ ಇನ್ನೊಬ್ಬರ ಹೆಸರು ಆಶಿಶ್ ಚಂಚಲಾನಿ. 2009ರಲ್ಲಿ ಚಾನೆಲ್ ಶುರು ಮಾಡಿದ ಅವರ ನಿವ್ವಳ ಆದಾಯ 42 ಕೋಟಿ ರೂಪಾಯಿ. ಅವರು 3.03 ಕೋಟಿ ಚಂದಾದಾರರನ್ನು ಯುಟ್ಯೂಬ್ ನಲ್ಲಿ ಹೊಂದಿದ್ದಾರೆ. ಬೇರೆ ಸೋಶಿಯಲ್ ಮೀಡಿಯಾಗಳಿಂದಲೂ ಅವರು ಹಣ ಸಂಪಾದನೆ ಮಾಡ್ತಿದ್ದಾರೆ.

ಸಂದೀಪ್ ಮಹೇಶ್ವರಿ : ಈ ಪಟ್ಟಿಯಲ್ಲಿ ಬರುವ ಇನ್ನೊಬ್ಬರ ಹೆಸರು ಸಂದೀಪ್ ಮಹೇಶ್ವರಿ. 2012ರಲ್ಲಿ ಚಾನೆಲ್ ಶುರು ಮಾಡಿದ ಅವರಿಗೆ  2.86 ಕೋಟಿ ಚಂದಾದಾರರಿದ್ದಾರೆ. ಅವರ ಒಟ್ಟೂ ಆಸ್ತಿ 62 ಕೋಟಿ ಎಂದು ಅಂದಾಜಿಸಲಾಗಿದೆ.

ಅಮಿತ್ ಭದನಾ : ಅಮಿತ್ ಭದನಾ ಸಕ್ಸಸ್ ಫುಲ್ ಯುಟ್ಯೂಬರ್. ಅವರು 2012 ರಲ್ಲಿ ಚಾನೆಲ್ ಶುರು ಮಾಡಿದ್ರು. ಈಗ ಅವರಿಗೆ 2.44 ಚಂದಾದಾರರಿದ್ದಾರೆ. ಅವರ ನಿವ್ವಳ ಆದಾಯ 50 ಕೋಟಿ.

ವಾಸಿಂ ಅಹ್ಮದ್ :  ವಾಸಿಂ ಅಹ್ಮದ್ ಚಾನೆಲ್ ಪ್ರಾರಂಭಿಸಿದ್ದು 2016ರಲ್ಲಿ. ಅವರ ನಿವ್ವಳ ಆದಾಯ 34 ಕೋಟಿಯಷ್ಟಿದ್ದು, ಯುಟ್ಯೂಬ್ ನಲ್ಲಿ ಅವರು 3.31 ಕೋಟಿ ಚಂದಾದಾರರನ್ನು ಹೊಂದಿದ್ದಾರೆ. 

ಬೆಂಗಳೂರಿನ ಪಬ್‌ಗೆ ಹಾಟ್‌ ಆಗಿ ಹೋದ ಖ್ಯಾತ ನಿರೂಪಕಿ; ಎಲ್ಲಿದ್ದಮ್ಮ ಇಷ್ಟು ದಿನ ಎಂದು ಕಾಲೆಳೆದ ನೆಟ್ಟಿಗರು

ಅಜಯ್ : ಈ ಪಟ್ಟಿಯಲ್ಲಿ ಬರುವ ಇನ್ನೊಬ್ಬರ ಹೆಸರು ಅಜಯ್. 2018ರಲ್ಲಿ ಯುಟ್ಯೂಬ್ ಶುರು ಮಾಡಿ ಸಕ್ಸಸ್ ಆದವರಲ್ಲಿ ಇವರೂ ಒಬ್ಬರು. ಇವರು 4.12 ಕೋಟಿ ಚಂದಾದಾರರನ್ನು ಹೊಂದಿದ್ದು, 72 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.  ಯುಟ್ಯೂಬ್ ನಿಂದ ಲಕ್ಷಾಂತರ ಹಣ ಗಳಿಸ್ತಿರೋರ ಪಟ್ಟಿ ದೊಡದಿದೆ. ಅದ್ರಲ್ಲಿ ಅಮಿತ್ ಶರ್ಮಾ, ಉಜ್ವಲ್, ರೋಮನ್ ಸೈನಿ, ಧ್ರುವ ರಥೀ ಸೇರಿದಂತೆ ಅನೇಕರಿದ್ದಾರೆ. 

click me!