ಈ ಸಲವೂ ಭಾರತದ ಆರ್ಥಿಕ ಪ್ರಗತಿ ವಿಶ್ವದಲ್ಲೇ ಅತಿ ವೇಗದ್ದು

Kannadaprabha News   | Kannada Prabha
Published : Jan 08, 2026, 05:29 AM IST
  indian economy

ಸಾರಾಂಶ

3ನೇ ಬೃಹತ್‌ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿರುವ ಭಾರತ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.4ರ ದರದಲ್ಲಿ ಆರ್ಥಿಕ ಪ್ರಗತಿ (ಜಿಡಿಪಿ) ಸಾಧಿಸಲಿದೆ. ಈ ಮೂಲಕ ವಿಶ್ವದಲ್ಲೇ ಅತಿವೇಗದ ಆರ್ಥಿಕತೆ ಎಂಬ ದಾಖಲೆಯನ್ನು ಕಾಯ್ದೆಕೊಳ್ಳಲಿದೆ.

ನವದೆಹಲಿ: 3ನೇ ಬೃಹತ್‌ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿರುವ ಭಾರತ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.4ರ ದರದಲ್ಲಿ ಆರ್ಥಿಕ ಪ್ರಗತಿ (ಜಿಡಿಪಿ) ಸಾಧಿಸಲಿದೆ. ಈ ಮೂಲಕ ವಿಶ್ವದಲ್ಲೇ ಅತಿವೇಗದ ಆರ್ಥಿಕತೆ ಎಂಬ ದಾಖಲೆಯನ್ನು ಕಾಯ್ದೆಕೊಳ್ಳಲಿದೆ. ಅಮೆರಿಕದ ತೆರಿಗೆ ದಾಳಿ ಮತ್ತು ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶ ಉತ್ತಮ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಆರ್ಥಿಕ ಪ್ರಗತಿ ದರ ಶೇ.6.3ರಿಂದ ಶೇ.6.8ರ ನಡುವೆ ಬೆಳವಣಿಗೆ

2025-26ನೇ ಸಾಲಿನಲ್ಲಿ ದೇಶದ ಆರ್ಥಿಕ ಪ್ರಗತಿ ದರ ಶೇ.6.3ರಿಂದ ಶೇ.6.8ರ ನಡುವೆ ಬೆಳವಣಿಗೆ ಕಾಣಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಿವಿಧ ವಲಯಗಳ ಉತ್ತಮ ಸಾಧನೆ ಪರಿಣಾಮ ಇದೀಗ ಜಿಡಿಪಿ ದರ ಶೇ.7.4ಕ್ಕೆ ಏರುವ ವಿಶ್ವಾಸ ವ್ಯಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ದರ ಶೇ.6.5ರಷ್ಟು ದಾಖಲಾಗಿತ್ತು.

ಉತ್ಪಾದನಾ ವಲಯದ ಬೆಳವಣಿಗೆ ಈ ವರ್ಷ ಶೇ.7.3ರಷ್ಟು

2024-25ರಲ್ಲಿ ಶೇ.4.5ರಷ್ಟಿದ್ದ ಉತ್ಪಾದನಾ ವಲಯದ ಬೆಳವಣಿಗೆ ಈ ವರ್ಷ ಶೇ.7.3ರಷ್ಟು, ಸೇವಾವಲಯ ಶೇ.7.2ರಿಂದ ಏರಿಕೆ ಕಂಡು ಶೇ.9.1ಕ್ಕೆ ತಲುಪುವ ನಿರೀಕ್ಷೆ ಇದೆ. ಆದರೆ ಕೃಷಿ ಮತ್ತು ಅದರ ಸಂಬಂಧಿತ ವಲಯಗಳ ಬೆಳವಣಿಗೆ ಶೆ.4.6ರಿಂದ ಶೇ.3.1ಕ್ಕೆ ಇಳಿಯುವ ನಿರೀಕ್ಷೆ ಇದೆ ಇದೆ ಸರ್ಕಾರದ ವರದಿ ಹೇಳಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮೈನಿಂಗ್‌ ದಿಗ್ಗಜ, ವೇದಾಂತ ಚೇರ್ಮನ್‌ ಅನಿಲ್‌ ಅಗರ್ವಾಲ್‌ಗೆ ಪುತ್ರ ವಿಯೋಗ, 49ನೇ ವಯಸ್ಸಿಗೆ ಸಾವು ಕಂಡ ಏಕೈಕ ಪುತ್ರ ಅಗ್ನಿವೇಶ್‌!
ಶ್ರೀಮಂತರಾಗಲು 5 ಅಭ್ಯಾಸಗಳು…. ಇವತ್ತೇ ಶುರು ಮಾಡಿ , ನಿಮ್ಮನ್ನ ತಡೆಯೋರು ಯಾರೂ ಇರಲ್ಲ!