ಅಮೆರಿಕ ಬ್ಯಾಂಕ್‌ ಕುಸಿತ: ಆತಂಕಗೊಂಡ ಭಾರತೀಯ ಸ್ಟಾರ್ಟಪ್‌ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ

By Kannadaprabha News  |  First Published Mar 15, 2023, 10:05 AM IST

ನಿಮ್ಮ ಸಮಸ್ಯೆಗಳನ್ನು ನಿಮ್ಮ ಪರವಾಗಿ ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮುಂದಿಡುತ್ತೇನೆ. ಈ ವಿಷಯವಾಗಿ ಸಂಪೂರ್ಣ ಬೆಂಬಲ ದೊರೆಯುವಂತೆ ಭಾರತ ಸರ್ಕಾರದ ಜೊತೆ ಕೆಲಸ ಮಾಡುತ್ತೇನೆ. ಮೊದಲಿಗೆ ನಿಮ್ಮ ವ್ಯಾಪಾರ ಮಾರ್ಗವನ್ನು ಬದಲಾಯಿಸದೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತೀಯ ಬ್ಯಾಂಕುಗಳು ಹೇಗೆ ಸಹಕಾರ ನೀಡಬಹುದು ಎಂಬುದರ ಕುರಿತಾಗಿ ಚಿಂತಿಸಲಾಗುತ್ತಿದೆ. ಇದಕ್ಕಾಗಿ ನಿಗದಿತ ಸಮಯದೊಳಗೆ ಹೊಸ ಚೌಕಟ್ಟು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.


ನವದೆಹಲಿ (ಮಾರ್ಚ್‌ 15, 2023): ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಸೇರಿ 3 ಬ್ಯಾಂಕ್‌ಗಳ ಕುಸಿತದಿಂದಾಗಿ ಭಾರತದ ಸ್ಟಾರ್ಟಪ್‌ಗಳ ಮೇಲೆ ಉಂಟಾಗಬಹುದಾದ ತೊಂದರೆಗಳ ನಿವಾರಣೆಗೆ ಭಾರತ ಸರ್ಕಾರ ಭರವಸೆ ನೀಡಿದೆ. ‘ಕಂಪನಿಗಳ ಬೆಂಬಲಕ್ಕೆ ಭಾರತ ಸರ್ಕಾರ ನಿಲ್ಲಲಿದೆ’ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಮಂಗಳವಾರ ಭರವಸೆ ನೀಡಿದ್ದಾರೆ.

ಸುಮಾರು 450 ಸ್ಟಾರ್ಟಪ್‌ಗಳ ಜೊತೆ ಮಂಗಳವಾರ ಮಾತುಕತೆ ನಡೆಸಿದ ರಾಜೀವ್‌ ಚಂದ್ರಶೇಖರ್‌ (Rajeev Chandrasekhar), ‘ಸ್ಟಾರ್ಟಪ್‌ಗಳು (Startups) ಭಾರತೀಯ ಬ್ಯಾಂಕ್‌ಗಳ (Indian Banks) ಜೊತೆ ಸಂಪರ್ಕದಲ್ಲಿರಬೇಕು. ಭಾರತದ ಬ್ಯಾಂಕಿಂಗ್‌ ವ್ಯವಸ್ಥೆ (Indian Banking System) ಇಂತಹ ಸಮಸ್ಯೆಗಳನ್ನು ನಿವಾರಿಸಲು ಶಕ್ತಿಶಾಲಿಯಾಗಿದೆ. ಅಲ್ಲದೇ ಸ್ಟಾರ್ಟಪ್‌ಗಳಿಗೆ ಬೆಂಬಲ ನೀಡಲು ಹಣಕಾಸು ಸಚಿವಾಲಯಕ್ಕೆ (Finance Ministry) ಮನವಿ ಮಾಡುತ್ತೇವೆ’ ಎಂದು ಹೇಳಿದರು.

Tap to resize

Latest Videos

ಇದನ್ನು ಓದಿ: ಅಮೆರಿಕದ ಬ್ಯಾಂಕ್‌ ಪತನದಿಂದ 1 ಲಕ್ಷ ಉದ್ಯೋಗ ನಷ್ಟ..? ಭಾರತದ ಸ್ಟಾರ್ಟಪ್‌ಗಳ ನೆರವಿಗೆ ಸಜ್ಜಾದ ಕೆಂದ್ರ ಸರ್ಕಾರ

‘ನಿಮ್ಮ ಸಮಸ್ಯೆಗಳನ್ನು ನಿಮ್ಮ ಪರವಾಗಿ ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮುಂದಿಡುತ್ತೇನೆ. ಈ ವಿಷಯವಾಗಿ ಸಂಪೂರ್ಣ ಬೆಂಬಲ ದೊರೆಯುವಂತೆ ಭಾರತ ಸರ್ಕಾರದ ಜೊತೆ ಕೆಲಸ ಮಾಡುತ್ತೇನೆ. ಮೊದಲಿಗೆ ನಿಮ್ಮ ವ್ಯಾಪಾರ ಮಾರ್ಗವನ್ನು ಬದಲಾಯಿಸದೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತೀಯ ಬ್ಯಾಂಕುಗಳು ಹೇಗೆ ಸಹಕಾರ ನೀಡಬಹುದು ಎಂಬುದರ ಕುರಿತಾಗಿ ಚಿಂತಿಸಲಾಗುತ್ತಿದೆ. ಇದಕ್ಕಾಗಿ ನಿಗದಿತ ಸಮಯದೊಳಗೆ ಹೊಸ ಚೌಕಟ್ಟು ನಿರ್ಮಾಣ ಮಾಡುತ್ತೇವೆ’ ಎಂದು ಅವರು ಹೇಳಿದರು.

ಈ ಕುರಿತಾಗಿ ಮಾತನಾಡಿದ ಸ್ಟಾರ್ಟಪ್‌ವೊಂದರ ಮುಖ್ಯಸ್ಥರೊಬ್ಬರು, ‘ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಲ್ಲಿ (Silicon Valley Bank) ಮಾಡಲಾಗಿರುವ ಹೂಡಿಕೆಗಳನ್ನು ಸಂಪೂರ್ಣವಾಗಿ ಹಿಂದಿರುಗಿಸುವುದಾಗಿ ಅಮೆರಿಕ ಭರವಸೆ ನೀಡಿದೆ. ಆದರೆ ಇದಕ್ಕಾಗಿ ಕಾಲಮಿತಿ ನಿಗದಿ ಪಡಿಸಿಲ್ಲ’ ಎಂದರು.

ಇದನ್ನೂ ಓದಿ: ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಹೊಸ ಅಸ್ತ್ರ: ಸಾಮಾಜಿಕ ಜಾಲತಾಣಗಳ ಏಕಪಕ್ಷೀಯ ನಿರ್ಧಾರ ಪ್ರಶ್ನೆಗೆ ಅವಕಾಶ

ಅಮೆರಿಕ ಬ್ಯಾಂಕ್‌ ಕುಸಿತದ ಬಗ್ಗೆ ಉತ್ತರಿಸದೇ ಎದ್ದು ಹೋದ ಬೈಡೆನ್‌
ವಾಷಿಂಗ್ಟನ್‌: ಅಮೆರಿಕದ (United States) ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಕುಸಿತದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದೇ ಅಧ್ಯಕ್ಷ ಜೋ ಬೈಡೆನ್‌ ಅರ್ಧಕ್ಕೆ ಸುದ್ದಿಗೋಷ್ಠಿ ಬಿಟ್ಟು ಎದ್ದು ಹೋದ ಘಟನೆ ನಡೆದಿದೆ. ಅಮೆರಿಕ ಅಧ್ಯಕ್ಷರ ಈ ನಡೆಯ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ ಮತ್ತು ಐತಿಹಾಸಿಕ ಆರ್ಥಿಕತೆಯನ್ನು ಉಳಿಸಿಕೊಳ್ಳುವುದರ ಬಗ್ಗೆ ಜೋ ಬೈಡೆನ್‌ ಮಾತನಾಡುತ್ತಿದ್ದರು. ಈ ವೇಳೆ, ‘ಸಿಲಿಕಾನ್‌ ಬ್ಯಾಂಕ್‌ ಕುಸಿತದ ಬಗ್ಗೆ ನಿಮಗೇನು ತಿಳಿದಿದೆ? ಇಂತಹ ಅವಘಡಗಳಿಂದ ನೀವು ಅಮೆಕನ್ನರನ್ನು ಹೇಗೆ ರಕ್ಷಿಸುತ್ತೀರಿ?’ ಎಂದು ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸದೇ ಜೋ ಬೈಡೆನ್‌ ಎದ್ದು ಹೊರ ನಡೆದರು. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಧ್ಯಕ್ಷರ ಈ ನಡೆ ಸ್ವಾಗತಾರ್ಹವಲ್ಲ ಎಂದು ಅನೇಕರು ಟೀಕಿಸಿದ್ದಾರೆ.

click me!