ಅಮೆರಿಕ, ಯುರೋಪಿನ ಜನರಿಗೆ ಇಷ್ಟವಾಗ್ತಿದೆ ಭಾರತದ ಬಿಸ್ಕಟ್, ನೂಡಲ್ಸ್, ಕಡಲೆ ಹಿಟ್ಟು; ಕಂಪನಿಗಳಿಗೆ ಕೋಟಿ ಕೋಟಿ ಲಾಭ

Published : Jul 07, 2025, 06:03 PM IST
Super Market

ಸಾರಾಂಶ

Indian FMCG companies Products: ಸ್ಮಾರ್ಟ್‌ಫೋನ್‌ಗಳ ಬದಲು ಬಿಸ್ಕತ್ತು, ನೂಡಲ್ಸ್, ಸೋಪು, ಶಾಂಪೂಗಳಂತಹ ದಿನಬಳಕೆ ವಸ್ತುಗಳ ರಫ್ತು ಹೆಚ್ಚಳ. 

ನವದೆಹಲಿ: ಈ ಹಿಂದಿನ ಆರ್ಥಿಕ ವರ್ಷದಲ್ಲಿ ಭಾರತದಿಂದ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳು ರಫ್ತು ಆಗಿದ್ದವು. ಆದ್ರೆ ಈ ಹಣಕಾಸಿನ ವರ್ಷದಲ್ಲಿ ಭಾರತದ ಬಿಸ್ಕಟ್, ನೂಡಲ್ಸ್, ಪ್ಯಾಕಡ್ ಕಡಲೆಹಿಟ್ಟಿ, ಸೋಪಿ ಮತ್ತು ಶಾಂಪೂಗಳು ಅತ್ಯಧಿಕವಾಗಿ ವಿದೇಶಗಳಿಗೆ ರಫ್ತು ಆಗುತ್ತಿವೆ. ದೇಶಿಯ ಮಾರುಕಟ್ಟೆಗಿಂತ ವಿದೇಶಗಳಲ್ಲಿ ಇವುಗಳಿಗೆ ಬೇಡಿಕೆ ಅಧಿಕವಾಗಿದ್ದು, ಮಾರಾಟದ ಪ್ರಮಾಣ ಏರಿಕೆಯಾಗಿದೆ . ಭಾರತದ ಪ್ರಮುಖ FMCG (Fast-moving consumer goods) ಕಂಪನಿಗಳಾದ ಹಿಂದೂಸ್ತಾನ್ ಯೂನಿಲಿವರ್ (HUL), ITC, ಮಾರಿಕೊ, ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ಡಾಬರ್ ಮತ್ತು AWL ಅಗ್ರಿ ಬ್ಯುಸಿನೆಸ್ (ಹಿಂದೆ ಅದಾನಿ ವಿಲ್ಮರ್) ಉತ್ಪನ್ನಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಳವಾಗಿದೆ. ಈ FMCG ಕಂಪನಿಗಳ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ಪ್ರಮಾಣ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಈ ಕಂಪನಿಗಳ ಆದಾಯವನ್ನು ಹೆಚ್‌ಯುಎಲ್‌ಗೆ ಹೋಲಿಕೆ ಮಾಡಿದ್ರೆ ಕಡಿಮೆಯಾಗಬಹುದು. ಈ ಮಾರಾಟ ಪ್ರಮಾಣ ಹೆಚ್‌ಯುಎಲ್‌ ನ ಶೇ.3ರಷ್ಟಿರಬಹುದು. ಆದ್ರೆ ಡಾಬರ್, ಇಮಾಮಿ ಮತ್ತು ಮಾರಿಕ್ ಅಂತಹ ಕಂಪನಿಗಳ ಆದಾಯದ ಪ್ರಮಾಣ ಶೇ.20ಷ್ಟು ಹೆಚ್ಚಳಗೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ಯುನಿಲಿವರ್ ಇಂಡಿಯಾ ರಪ್ತು ಪ್ರಮಾಣ 31ನೇ ಮಾರ್ಚ್ ಅಂತ್ಯಕ್ಕೆ ಶೇ.8 ರಷ್ಟು ಏರಿಕೆ ಕಂಡಿದ್ದು, 1,285 ಕೋಟಿ ರೂಪಾಯಿ ಮಾರಾಟ ಪ್ರಮಾಣವನ್ನು ದಾಖಲಿಸಿದೆ. ಕಂಪನಿಯ ಒಟ್ಟು ನಿವ್ವಳ ಲಾಭ ಶೇ.14ರಷ್ಟು ಏರಿಕೆಯಾಗಿ 91 ಕೋಟಿ ರೂ.ಗೆ ತಲುಪಿದೆ. ಆದ್ರೆ ಭಾರತದಲ್ಲಿ ಈ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಶೇ.2ರಷ್ಟು ಮಾತ್ರ ಮಾರಾಟ ಪ್ರಮಾಣ ಹೆಚ್ಚಾಗಿದೆ.

ಚರ್ಮದ ಆರೈಕೆ, ಕೂದಲು ರಕ್ಷಣೆ, ಕ್ಲೀನಿಂಗ್, ಲೈಫ್‌ಸ್ಟೈಲ್ ಆಂಡ್ ಫ್ಯಾಶನ್ ಪ್ರೊಡೆಕ್ಟ್‌ಗಳ ರಫ್ತು ಪ್ರಮಾಣ ಹೆಚ್ಚಳವಾಗಿದೆ ಎಂದು ಹೆಚ್‌ಯುಎಲ್ ಹೇಳಿಕೊಂಡಿದೆ. ಇದರ ಜೊತೆ ಡವ್, ಹಾರ್ಲಿಕ್ಸ್, ವ್ಯಾಸಲೀನ್, ಪಿಯರ್ಸ್, ಬ್ರೂ, ಸನ್‌ಸಿಲ್ಕ್, ಗ್ಲೋ & ಲವ್ಲಿ, ಪಾಂಡ್ಸ್, ಲಕ್ಮೆ ಮತ್ತು ಲೈಫ್‌ಬಾಯ್‌ನಂತಹ ಬ್ರ್ಯಾಂಡ್‌ಗಳು ಹೆಚ್ಚು ಬೇಡಿಕೆಯನ್ನು ಹೊಂದಿವೆ.

ಭಾರತೀಯ ಆಹಾರದ ಜನಪ್ರಿಯತೆ

ಈ ಹಿಂದೆ ಭಾರತದ ಬಾಸ್ಮತಿ ಅಕ್ಕಿಗೆ ಮಾತ್ರ ಹೆಚ್ಚು ಬೇಡಿಕೆ ಇತ್ತು. ಇತ್ತೀಚಿನ ದಿನಗಳಲ್ಲಿ ಭಾರತದ ಸಾಸಿವೆ, ಸೂರ್ಯಕಾಂತಿ ಎಣ್ಣೆ, ಕಡಲೆ ಹಿಟ್ಟು, ಸೋಯಾ ಚಂಕ್ಸ್, ಅವಲಕ್ಕಿಗೂ ಬೇಡಿಕೆ ಬಂದಿದೆ. ಇದು ಆರಂಭವಾಗಿದ್ದು, ಭವಿಷ್ಯದಲ್ಲಿ ನಮ್ಮ ಎಲ್ಲಾ ಅಡುಗೆ ಸಾಮಾಗ್ರಿಗಳಿಗೆ ಬೇಡಿಕೆ ಬರಲಿದೆ. ವಿದೇಶಗಳಲ್ಲಿ ಭಾರತೀಯ ಆಹಾರ ಜನಪ್ರಿಯತೆ ಹೆಚ್ಚಾಗಿದೆ. ವಿದೇಶಿಗರು ಭಾರತೀಯ ಶೈಲಿಗಳ ಹೋಟೆಲ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಭಾರತೀಯ ರೆಸ್ಟೋರೆಂಟ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಭಾರತೀಯ ಮೂಲದವರು ಮಾತ್ರವಲ್ಲ, ವಿದೇಶಿಗರು ಸಹ ನಮ್ಮ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ ಎಂದು AWL ಅಗ್ರಿ ಬ್ಯುಸಿನೆಸ್‌ನ ಸಿಇಒ ಅಂಗ್ಶು ಮಲಿಕ್ ಹೇಳುತ್ತಾರೆ.

2024-25ನೇ ಆರ್ಥಿಕ ವರ್ಷದಲ್ಲಿ ರಫ್ತು ಪ್ರಮಾಣ ಶೇ.50 ರಿಂದ ಶೇ.80 ರಷ್ಟು ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ. AWL ನ ವರದಿ ಪ್ರಕಾರ, ಬ್ರ್ಯಾಂಡ್ ರಫ್ತಿನ ಪ್ರಮಾಣ ಕಳೆದ 3 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳಗೊಂಡು 250 ಕೋಟಿ ರೂ.ಯ ಗಡಿಯನ್ನು ದಾಟಿದೆ.

ಸರ್ಕಾರದ ಯೋಜನೆಗಳ ಲಾಭ

ಸರ್ಕಾರವು ಅನೇಕ ರಫ್ತು ಉತ್ತೇಜನಕಾರಿ ಯೋಜನೆಗಳನ್ನು ಆರಂಭಿಸಿದೆ. ರಾಗಿ ಆಧಾರಿತ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಭಾರತೀಯ ಆಹಾರ ಉತ್ಪನ್ನಗಳನ್ನು ಉತ್ತೇಜಿಸಲು ಪಿಎಲ್‌ಐ ಯೋಜನೆಯಡಿ 73 ಕಂಪನಿಗಳನ್ನು ಲಿಸ್ಟ್ ಮಾಡಲಾಗಿತ್ತು.

ತನ್ನ ಅಂತರಾಷ್ಟ್ರೀಯ ವ್ಯವಹಾರದ ಲಾಭ ಈ ಆರ್ಥಿಕ ವರ್ಷದಲ್ಲಿ ಶೇ.17ರಷ್ಟು ತಲುಪಿದೆ ಎಂದು ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಹೇಳಿಕೊಂಡಿದೆ. ಎರಡು ವರ್ಷಗಳ ಹಿಂದೆ ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಾಭದ ಪ್ರಮಾಣ ಶೇ.10ರಷ್ಟಿತ್ತು. ಇನ್ನು ಡಾಬರ್ ರಫ್ತು ಶೇ.1.3 ಏರಿಕಯಾಗಿ ಶೇ.17ರಷ್ಟು ತಲುಪಿದೆ. ಐಟಿಸಿ ತನ್ನ ವಾರ್ಷಿಕ ವರದಿಯಲ್ಲಿ ಬಿಸ್ಕಟ್, ನೂಡಲ್ಸ್, ತಿಂಡಿಗಳು ರಫ್ತು ಬೆಳವಣಿಗೆ ಏರಿಕೆ ಗ್ರೀನ್‌ ಲೈನ್‌ನಲ್ಲಿದೆ ಎಂದು ಹೇಳಿಕೊಂಡಿದೆ. ಆಶೀರ್ವಾದ ಆಟ್ಟಾ ಸಹ ಅತಿ ಹೆಚ್ಚು ಬೇಡಿಕೆ ಹೊಂದಿರುವ ಉತ್ಪನ್ನವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?