Indian Currency Notes: ನೋಟಿನ ಮೇಲೆ ಗಾಂಧಿ ಫೋಟೋ ಮಾತ್ರ ಇರೋದು ಏಕೆ? ಸ್ಪಷ್ಟನೆ ನೀಡಿದ ಆರ್ ಬಿಐ

Published : Jul 07, 2025, 01:46 PM ISTUpdated : Jul 07, 2025, 01:58 PM IST
Indian notes

ಸಾರಾಂಶ

ಭಾರತೀಯ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಫೋಟೊಗಳನ್ನು ನಾವು ಕಾಣ್ತೇವೆ. ಮಹಾತ್ಮರ ಸಾಲಿನಲ್ಲಿ ಬರೀ ಗಾಂಧಿ ಮಾತ್ರ ಇಲ್ಲ ಎನ್ನುವವರಿಗೆ ಆರ್ ಬಿಐ ಸ್ವಷ್ಟನೆ ನೀಡಿದೆ. ಯಾಕೆ ಗಾಂಧಿ ಮಾತ್ರ ಎನ್ನುವ ಪ್ರಶ್ನೆಗೆ ಉತ್ತರ ನೀಡಿದೆ. 

ಭಾರತದ ಕರೆನ್ಸಿ (Currency of India) ಅಂದಾಗ ಮೊದಲು ನೆನಪಾಗೋದು ಮಹಾತ್ಮಾ ಗಾಂಧಿ. ಭಾರತದ ನೋಟುಗಳಲ್ಲಿ ನಾವು ಗಾಂಧಿ (Gandhi)ಯವರ ಭಾವಚಿತ್ರ ನೋಡ್ಬಹುದು. ಯಾಕೆ ಗಾಂಧಿ ಮಾತ್ರ? ನಮ್ಮ ದೇಶದಲ್ಲಿ ಗಾಂಧಿ ಅಲ್ಲದೆ ಇನ್ನೂ ಅನೇಕ ಮಹಾತ್ಮರಿದ್ದಾರೆ. ಅವರ ಫೋಟೋಗಳನ್ನೂ ನೋಟಿನ ಮೇಲೆ ಏಕೆ ಮುದ್ರಿಸಬಾರದು ಎನ್ನುವ ಪ್ರಶ್ನೆ ಕಾಡೋದು ಸಹಜ. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಯಾಕೆ ಮಹಾತ್ಮಾ ಗಾಂಧಿ ಫೋಟೋ ಮಾತ್ರ ನೋಟಿನ ಮೇಲಿದೆ ಎಂಬುದನ್ನು ಆರ್ ಬಿಐ ಹೇಳಿದೆ. ಆರ್ ಬಿಐ ಮೊದಲ ಬಾರಿ ನೋಟಿಗೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದೆ. ಆರ್ ಬಿಐ ಸಾಕ್ಷ್ಯ ಚಿತ್ರವೊಂದನ್ನು ಸಿದ್ಧಪಡಿಸಿದೆ. ಅದ್ರ ಹೆಸರು ಆರ್ಬಿಐ ಅನ್ಲಾಕ್ಡ್: ಬಿಯಾಂಡ್ ದಿ ರುಪೀ. ಇದನ್ನು ಜೀಯೋ ಸಿನಿಮಾದಲ್ಲಿ ನೀವು ವೀಕ್ಷಣೆ ಮಾಡ್ಬಹುದು.

ಭಾರತೀಯ ನೋಟಿನಲ್ಲಿ ಮಹಾತ್ಮಾ ಗಾಂಧಿ ಫೋಟೋ : ಮೊದಲೇ ಹೇಳಿದಂತೆ ಭಾರತದಲ್ಲಿ ಮಹಾನ್ ವ್ಯಕ್ತಿಗಳ ಕೊರತೆಯಿಲ್ಲ.ಈ ಹಿಂದೆ ರವೀಂದ್ರನಾಥ ಟ್ಯಾಗೋರ್, ಮದರ್ ತೆರೇಸಾ ಅವರಂತಹ ಅನೇಕ ದೊಡ್ಡ ಹೆಸರುಗಳನ್ನು ನೋಟಿನ ಮುದ್ರಣಕ್ಕೆ ಪರಿಗಣಿಸಲಾಗಿತ್ತು. ಆದ್ರೆ ಕೊನೆಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನೇ ಮುಂದುವರೆಸುವ ನಿರ್ಧಾರಕ್ಕೆ ಬರಲಾಯ್ತು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಗಾಂಧೀಜಿಯವರ ಚಿತ್ರ ಅನೇಕ ವರ್ಷಗಳ ಹಿಂದಿನಿಂದಲೂ ಇದೆ. ಅದನ್ನು ನಿರ್ವಹಣೆ ಮಾಡೋದು ಸುಲಭ. ನೋಟಿನ ಮೇಲೆ ಪ್ರಸಿದ್ಧ ವ್ಯಕ್ತಿಯ ಚಿತ್ರವಿದ್ದರೆ, ಆ ನೋಟು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪತ್ತೆ ಮಾಡೋದು ಕಷ್ಟ. ನೋಟುಗಳ ವಿನ್ಯಾಸ ಉತ್ತಮವಾಗಿಲ್ಲದಿದ್ದರೆ, ಈ ಚಿತ್ರಗಳ ಸಹಾಯದಿಂದ ನೋಟಿನ ಅಸಲಿಯತ್ತನ್ನು ಗುರುತಿಸಬಹುದು ಎಂದು ಆರ್ ಬಿಐ ಹೇಳಿದೆ. ಭಾರತದಲ್ಲಿನ ನೋಟುಗಳ ವಿನ್ಯಾಸ ಮತ್ತು ಸುರಕ್ಷತಾ ಸೌಲಭ್ಯಗಳನ್ನು ಪರಿಗಣಿಸಿ, ಅನೇಕ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ನೋಟುಗಳ ಮೇಲೆ ಮುದ್ರಿಸಬಹುದಿತ್ತು. ಅನೇಕ ಮಹಾತ್ಮರ ಹೆಸರು ಆ ಸಂದರ್ಭದಲ್ಲೂ ಕೇಳಿ ಬಂದಿತ್ತು. ಅಂತಿಮವಾಗಿ ಮಹಾತ್ಮ ಗಾಂಧಿಯನ್ನು ಆಯ್ಕೆ ಮಾಡಲಾಯಿತು ಎಂದು ಆರ್ ವಿಐ ಹೇಳಿದೆ.

ಬ್ರಿಟಿಷ್ ಯುಗದಲ್ಲಿ ನೋಟು ಹೇಗಿತ್ತು? : ಸ್ವಾತಂತ್ರ್ಯದ ಮೊದಲು ಬ್ರಿಟಿಷ್ ಆಳ್ವಿಕೆಯಲ್ಲಿ ನೋಟು ಭಿನ್ನವಾಗಿದ್ದವು. ಭಾರತೀಯ ಕರೆನ್ಸಿಗಳು ವಸಾಹತುಶಾಹಿ ಮತ್ತು ಅದಕ್ಕೆ ಸಂಬಂಧಿಸಿದ ಐತಿಹಾಸಿಕ ಮತ್ತು ರಾಜಕೀಯ ಉಲ್ಲೇಖಗಳನ್ನು ಪ್ರತಿಬಿಂಬಿಸಿದ್ದವು. ಸಸ್ಯ ಮತ್ತು ಹುಲಿ, ಜಿಂಕೆಯಂತಹ ಪ್ರಾಣಿಗಳ ಚಿತ್ರಗಳನ್ನು ಕಾಣಬಹುದಿತ್ತು. ಬ್ರಿಟಿಷ್ ಸಾಮ್ರಾಜ್ಯದ ಭವ್ಯತೆಯನ್ನು ಹೇಳುವ ಅಲಂಕೃತ ಆನೆಗಳು ಮತ್ತು ರೂಪಾಯಿಯ ಮೇಲೆ ರಾಜನ ಅಲಂಕೃತ ಚಿತ್ರಗಳಿರುತ್ತಿದ್ದವು.

ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ರೂಪಾಯಿ ಮುದ್ರಣದಲ್ಲಿ ಕ್ರಮೇಣ ಬದಲಾವಣೆ ಶುರುವಾಯ್ತು. ಆರಂಭದಲ್ಲಿ, ಸಿಂಹದ ಚಿತ್ರ ಅಶೋಕ ಸ್ತಂಭ, ಪ್ರಸಿದ್ಧ ಸ್ಥಳಗಳು ಇರ್ತಿದ್ದವು. ಭಾರತದ ಅಭಿವೃದ್ಧಿ ಮತ್ತು ಪ್ರಗತಿಯೊಂದಿಗೆ ರೂಪಾಯಿ ಅಭಿವೃದ್ಧಿಯ ಕಥೆಯನ್ನು ಹೇಳಲು ಪ್ರಾರಂಭಿಸಿತು. ದೇಶವು ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ, ಆರ್ಯಭಟನ ಸಾಧನೆಗಳು ಮತ್ತು ದೇಶದಲ್ಲಿ ಹಸಿರು ಕ್ರಾಂತಿ ತೋರಿಸಲು ರೈತರ ಚಿತ್ರಗಳನ್ನು ಮುದ್ರಿಸಲಾಯ್ತು.

ಗಾಂಧಿ ಚಿತ್ರ ಮುದ್ರಣ ಆಗಿದ್ದು ಯಾವಾಗಾ? : ಭಾರತೀಯ ರಿಸರ್ವ್ ಬ್ಯಾಂಕಿನ ವೆಬ್ಸೈಟ್ ಪ್ರಕಾರ, ಅಕ್ಟೋಬರ್ 2, 1969 ರಂದು, ಮಹಾತ್ಮ ಗಾಂಧಿಯವರ ಜನ್ಮದಿನದ 100 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೊದಲ ಬಾರಿಗೆ ಅವರ ಭಾವಚಿತ್ರ ಇರುವ 100 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ ಸೇವಾಗ್ರಾಮ ಆಶ್ರಮದೊಂದಿಗೆ ಅವರ ಚಿತ್ರವಿತ್ತು. 1987 ರಿಂದ ಅವರ ಚಿತ್ರ ನೋಟಿನ ಮೇಲೆ ನಿಯಮಿತವಾಗಿ ಕಾಣಿಸಿಕೊಳ್ಳಲು ಶುರುವಾಯ್ತು. 1996 ರಲ್ಲಿ, ಹೊಸ ಭದ್ರತಾ ವೈಶಿಷ್ಟ್ಯಗಳೊಂದಿಗೆ ಮಹಾತ್ಮ ಗಾಂಧಿ ನೋಟುಗಳ ಸರಣಿಯನ್ನು ಪ್ರಾರಂಭಿಸಲಾಯಿತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ