2023ರಲ್ಲಿ ಕುಟುಂಬಗಳ ಸಾಲ ದ್ವಿಗುಣ: ಠೇವಣಿ ಪ್ರಮಾಣವೂ ಶೇ.55ರಷ್ಟು ಇಳಿಕೆ

Published : Sep 22, 2023, 08:39 AM IST
2023ರಲ್ಲಿ ಕುಟುಂಬಗಳ ಸಾಲ ದ್ವಿಗುಣ: ಠೇವಣಿ ಪ್ರಮಾಣವೂ ಶೇ.55ರಷ್ಟು ಇಳಿಕೆ

ಸಾರಾಂಶ

2023ನೇ ಆರ್ಥಿಕ ವರ್ಷದಲ್ಲಿ ಭಾರತೀಯ ಕುಟುಂಬಗಳ ನಿವ್ವಳ ಉಳಿತಾಯ ಶೇ.55ರಷ್ಟು ಭಾರೀ ಕುಸಿತ ಕಂಡಿದ್ದರೆ, ಸಾಲದ ಪ್ರಮಾಣ ದ್ವಿಗುಣಗೊಂಡಿದೆ ಎಂದು ವರದಿಯೊಂದು ತಿಳಿಸಿದೆ.

ಮುಂಬೈ: 2023ನೇ ಆರ್ಥಿಕ ವರ್ಷದಲ್ಲಿ ಭಾರತೀಯ ಕುಟುಂಬಗಳ ನಿವ್ವಳ ಉಳಿತಾಯ ಶೇ.55ರಷ್ಟು ಭಾರೀ ಕುಸಿತ ಕಂಡಿದ್ದರೆ, ಸಾಲದ ಪ್ರಮಾಣ ದ್ವಿಗುಣಗೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಅಂಕಿ ಅಂಶಗಳನ್ನು ಆಧರಿಸಿ ಎಸ್‌ಬಿಐ ರಿಸರ್ಸ್‌ (SBI Resources) ಸಿದ್ಧಪಡಿಸಿರುವ ವರದಿ ಅನ್ವಯ, 2023ನೇ ಹಣಕಾಸು ವರ್ಷದಲ್ಲಿ ಕುಟುಂಬದ ಉಳಿತಾಯ ಪ್ರಮಾಣವು ಶೇ.55ರಷ್ಟು ಕುಸಿತಗೊಂಡಿದೆ. ಇದು ದೇಶದ ಜಿಡಿಪಿಯ ಶೇ.5.1ರಷ್ಟಿದೆ. ಈ ಪ್ರಮಾಣವು ಕಳೆದ 50 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಎಂದು ವಿಶ್ಲೇಷಿಸಲಾಗಿದೆ. 2021ರಲ್ಲಿ ಈ ಪ್ರಮಾಣವು ಶೇ.11.5ರಷ್ಟು ಮತ್ತು ಕೋವಿಡ್‌ ಸಾಂಕ್ರಾಮಿಕದ ಅವಧಿಯಾದ 2020ರಲ್ಲಿ ಈ ಪ್ರಮಾಣವು ಶೇ.7.6ರಷ್ಟಿತ್ತು ಎಂದು ವರದಿ ಹೇಳಿದೆ.

ಇನ್ನು ಇದೇ ಅವಧಿಯಲ್ಲಿ ಕುಟುಂಬಗಳ ಸಾಲವು 15.6 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಈ ಪೈಕಿ ಬಹುಪಾಲು ಉಳಿತಾಯವು ಭೌತಿಕ ಆಸ್ತಿಗಳ ಖರೀದಿಗೆ ವಿನಿಯೋಗವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಲದ ಪ್ರಮಾಣದಲ್ಲಿ 8.2 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗಿದೆ. ಈ ಪೈಕಿ 7.1 ಲಕ್ಷ ಕೋಟಿ ರು.ನಷ್ಟು ಹಣ ಬ್ಯಾಂಕ್‌ ಸಾಲವಾಗಿದೆ. ಇದರಲ್ಲಿ ಬಹುತೇಕ ಪಾಲು ಗೃಹ ಮತ್ತು ಇತರೆ ಚಿಲ್ಲರೆ ಸಾಲವಾಗಿದೆ ಎಂದು ವರದಿ ಹೇಳಿದೆ.

ಇನ್ನು ಇದೇ ಅವಧಿಯಲ್ಲಿ ವಿಮೆ, ಪಿಎಫ್‌, ಪಿಂಚಣಿ ನಿಧಿ ಹೂಡಿಕೆಯಲ್ಲಿ 4.1 ಲಕ್ಷ ಕೋಟಿ ರು.ನಷ್ಟು ಏರಿಕೆ ದಾಖಲಾಗಿದೆ.

ನೀರವ್‌ ಮೋದಿ ಬ್ರಿಟನ್‌ನ ಖಾಸಗಿ ಜೈಲಿಗೆ ಸ್ಥಳಾಂತರ

ಲಂಡನ್‌: ಅಕ್ರಮ ಹಣ ವರ್ಗಾವಣೆ (money laundering case) ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ದೇಶಭ್ರಷ್ಟ ವಜ್ರದ ವ್ಯಾಪಾರಿ (diamond merchant) ನೀರವ್‌ ಮೋದಿ (Nirav Modi) ಲಂಡನ್‌ನಲ್ಲಿ ಖಾಸಗಿ ಜೈಲಿಗೆ ಗುರುವಾರ ಸ್ಥಳಾಂತರವಾಗಿದ್ದಾನೆ. ಭಾರತಕ್ಕೆ ಹಸ್ತಾಂತರ ಮಾಡುವುದನ್ನು ಮುಂದೂಡುತ್ತಲೇ ಬರುವಲ್ಲಿ ಯಶಸ್ವಿಯಾಗಿರುವ ನೀರವ್‌ ಮೋದಿ, ಬ್ರಿಟನ್‌ನ ಅತ್ಯಂತ ಜನದಟ್ಟಣೆಯ ಕುಖ್ಯಾತ ಸರ್ಕಾರಿ ಜೈಲಿನಿಂದ, ಖಾಸಗಿ ನಿರ್ವಹಣೆಗೆ ಜೈಲಿಗೆ ಸ್ಥಳಾಂತರವಾಗಿದ್ದಾನೆ. ಈ ಮೊದಲು ಲಂಡನ್‌ ಹೈಕೋರ್ಟ್‌ ವಿಧಿಸಿದ್ದ 1.5 ಕೋಟಿ ರು. ದಂಡ ಪಾವತಿಸಲು ನೀರವ್ ಮೋದಿ ಕೋರ್ಟ್‌ಗೆ ಹಾಜರಾಗಬೇಕಿತ್ತು. ಅದರೆ ಆತ ವಿಡಿಯೋ ಲಿಂಕ್‌ ಮೂಲಕ ಹಾಜರಾಗದ ಕಾರಣ ವಿಚಾರಣೆಯನ್ನು ನವೆಂಬರ್‌ಗೆ ಮುಂದೂಡಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ ಈತ ಯಾವಾಗ ಈ ಖಾಸಗಿ ಜೈಲಿಗೆ ಸ್ಥಳಾಂತರಗೊಂಡಿದ್ದಾನೆ ಎಂಬುದು ಬಹಿರಂಗಗೊಂಡಿಲ್ಲ. ಉಗ್ರನೊಬ್ಬ ತಪ್ಪಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ಈ ಖಾಸಗಿ ಜೈಲಿನಲ್ಲಿ ಹುಡುಕಾಟ ನಡೆಸಿದಾಗ ನೀರವ್‌ ಇಲ್ಲಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದ ಫ್ಯಾಷನ್‌ ಲೋಕವನ್ನು ಆಳುತ್ತಿರುವ ಪುಟಾಣಿ ಸೂಪರ್‌ ಮಾಡೆಲ್‌ಗಳಿ ...

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುವುದು ಖಚಿತ