Indian Banks: ಭಾರತದ ಬ್ಯಾಂಕುಗಳ ಭರ್ಜರಿ ಪರ್ಫಾರ್ಮೆನ್ಸ್! HDFC, ICICI ಮುಂಚೂಣಿಯಲ್ಲಿ

Published : Aug 25, 2026, 01:52 PM IST
Indian Banks Show Strong Resilience HDFC and ICICI Lead the Pack

ಸಾರಾಂಶ

ಭಾರತದ ಬ್ಯಾಂಕುಗಳ ಸ್ಥಿತಿ ಸಖತ್ ಸ್ಟ್ರಾಂಗ್ ಆಗಿದೆ ಅಂತ ಬ್ಯಾಂಕ್ ಆಫ್ ಅಮೆರಿಕಾ ಗ್ಲೋಬಲ್ ರಿಸರ್ಚ್ ವರದಿ ಹೇಳಿದೆ. ಇದಕ್ಕೆ ಕಾರಣ, ಭರ್ಜರಿ ಸಾಲ ಬೆಳವಣಿಗೆ ಮತ್ತು ಸುಧಾರಿಸಿದ ಆಸ್ತಿ ಗುಣಮಟ್ಟ. HDFC ಮತ್ತು ICICI ಬ್ಯಾಂಕ್‌ಗಳು ಈ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿವೆ.ವಿವರಗಳಿಗೆ ಮುಂದೆ ಓದಿ..

ಭಾರತದ ಬ್ಯಾಂಕುಗಳು(Indian Banks) ಸದ್ಯಕ್ಕೆ ಆರ್ಥಿಕವಾಗಿ ತುಂಬಾನೇ ಸದೃಢವಾಗಿವೆ. ಇದಕ್ಕೆ ಮುಖ್ಯ ಕಾರಣ, ಸಾಲ ವಿತರಣೆಯಲ್ಲಿನ ಭರ್ಜರಿ ಬೆಳವಣಿಗೆ ಕಂಡುಬಂದಿದೆ. ಆಸ್ತಿ ಗುಣಮಟ್ಟದಲ್ಲಿನೂ ಬಹಳಷ್ಟು ಸುಧಾರಣೆ ಆಗಿದೆ. ಅಲ್ಲದೆ ಬಂಡವಾಳದ ಭದ್ರತೆ ಹೆಚ್ಚಿದೆ.. ಈ ವಿಚಾರದಲ್ಲಿ HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಉಳಿದ ಪ್ರಮುಖ ಬ್ಯಾಂಕ್‌ಗಳಿಗಿಂತ ಒಂದು ಹೆಜ್ಜೆ ಮುಂದಿವೆ. ಬ್ಯಾಂಕ್ ಆಫ್ ಅಮೆರಿಕಾ (BofA) ಗ್ಲೋಬಲ್ ರಿಸರ್ಚ್ ತನ್ನ ವರದಿಯಲ್ಲಿ ತಿಳಿಸಿದೆ.

Q1ನಲ್ಲಿ ಭರ್ಜರಿ ಸಾಧನೆ, ಸಾಲ ವಿತರಣೆಯಲ್ಲಿ ಜಿಗಿತ

FY27ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಬ್ಯಾಂಕುಗಳು ಬೊಂಬಾಟ್ ಫಲಿತಾಂಶ ನೀಡಿವೆ ಎಂದು ವರದಿ ಹೇಳಿದೆ. ಮಾರ್ಜಿನ್ ಮೇಲಿನ ಒತ್ತಡವನ್ನು ಸರಿದೂಗಿಸಲು ಸಾಲ ಬೆಳವಣಿಗೆ ಸಹಾಯ ಮಾಡಿದೆ. ಈ ತ್ರೈಮಾಸಿಕದಲ್ಲಿ ಬ್ಯಾಂಕಿಂಗ್ ವಲಯದ ಸರಾಸರಿ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ 13.4% ಹೆಚ್ಚಾಗಿದೆ.

ಸಾಲ ಬೆಳವಣಿಗೆಯಲ್ಲೂ ಗಮನಾರ್ಹ ಚೇತರಿಕೆ ಕಂಡಿದೆ. FY27ರ ಮೊದಲ ತ್ರೈಮಾಸಿಕದಲ್ಲಿ ಸರಾಸರಿ ಸಾಲ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ 18% ತಲುಪಿದೆ. ಇದೇ ಸಮಯದಲ್ಲಿ, ಸರಾಸರಿ ಒಟ್ಟು ಆಸ್ತಿಗಳು 13.6% ಮತ್ತು ರಿಸ್ಕ್-ವೇಯ್ಟೆಡ್ ಆಸ್ತಿಗಳು 12% ರಷ್ಟು ಬೆಳೆದಿವೆ. "ಸದೃಢ ಸಾಲ ಬೆಳವಣಿಗೆ ಮತ್ತು ಬಡ್ಡಿಯೇತರ ಆದಾಯದಿಂದಾಗಿ ಮಾರ್ಜಿನ್ ಮೇಲಿನ ಒತ್ತಡವನ್ನು ನಿಭಾಯಿಸಲಾಗಿದೆ," ಎಂದು ವರದಿ ಹೇಳಿದೆ.

ಆಸ್ತಿ ಗುಣಮಟ್ಟದಲ್ಲಿ ಭಾರೀ ಸುಧಾರಣೆ

ಬ್ಯಾಂಕಿಂಗ್ ವಲಯದಲ್ಲಿ ಅಸೆಟ್ ಕ್ವಾಲಿಟಿ(Asset quality) ಸುಧಾರಿಸುತ್ತಲೇ ಇದೆ ಎಂದು BofA ಹೇಳಿದೆ. ಜೂನ್ 2026ರ ಅಂತ್ಯಕ್ಕೆ, ಒಟ್ಟು ಮತ್ತು ನಿವ್ವಳ ಅನುತ್ಪಾದಕ ಸಾಲಗಳ (NPL) ಅನುಪಾತವು ಕ್ರಮವಾಗಿ 1.5% ಮತ್ತು 0.4% ರಷ್ಟಿತ್ತು. ಇದು ವರ್ಷದಿಂದ ವರ್ಷಕ್ಕೆ 29 ಮತ್ತು 7 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ. 'FY27ರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ, ಪ್ರಮುಖ ಭಾರತೀಯ ಬ್ಯಾಂಕುಗಳು ಸುಧಾರಿತ Asset quality ಮತ್ತು ಸದೃಢ ಬಂಡವಾಳದಿಂದಾಗಿ ಸ್ಥಿರವಾದ ಕ್ರೆಡಿಟ್ ಪ್ರೊಫೈಲ್‌ಗಳನ್ನು ಉಳಿಸಿಕೊಂಡಿವೆ ಎಂದು ವರದಿ ತಿಳಿಸಿದೆ. ಸರಾಸರಿ ಕಾಮನ್ ಈಕ್ವಿಟಿ ಟೈರ್ 1 (CET1) ಅನುಪಾತವು 15.1% ರಷ್ಟು ಪ್ರಬಲವಾಗಿದೆ.

HDFC ಮತ್ತು ICICI ಬ್ಯಾಂಕ್‌ಗಳು ಮುಂಚೂಣಿ

HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಬಲಿಷ್ಠವಾದ ಮೂಲಭೂತ ಅಂಶಗಳನ್ನು ವರದಿ ಮಾಡಿವೆ. ಈ ಬ್ಯಾಂಕ್‌ಗಳ CET1 ಅನುಪಾತಗಳು ಕ್ರಮವಾಗಿ 17.4% ಮತ್ತು 16.25% ರಷ್ಟಿವೆ. ಜೂನ್ ಅಂತ್ಯದ ವೇಳೆಗೆ, ಇವುಗಳ ಒಟ್ಟು ಮತ್ತು ನಿವ್ವಳ NPL ಅನುಪಾತಗಳು ಕೂಡ ಪ್ರಮುಖ ಭಾರತೀಯ ಬ್ಯಾಂಕ್‌ಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದ್ದವು.

ಬಂಡವಾಳದಲ್ಲಿ ಖಾಸಗಿ ಬ್ಯಾಂಕ್‌ಗಳದ್ದೇ ಮೇಲುಗೈ

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಹೋಲಿಸಿದರೆ ಖಾಸಗಿ ವಲಯದ ಬ್ಯಾಂಕ್‌ಗಳು ಬಲಿಷ್ಠ ಬಂಡವಾಳ ಸ್ಥಿತಿಯನ್ನು ಹೊಂದಿವೆ ಎಂದು BofA ವರದಿ ಹೈಲೈಟ್ ಮಾಡಿದೆ. ಖಾಸಗಿ ಬ್ಯಾಂಕ್‌ಗಳ CET1 ಅನುಪಾತಗಳು 15-17% ಇದ್ದರೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳದ್ದು 13-14% ಇದೆ.

ಸಾಲ ಚೇತರಿಕೆಯಿಂದ ದ್ರವ್ಯತೆ ಮೇಲೆ ಪರಿಣಾಮ

ಸಾಲ ಬೆಳವಣಿಗೆಯಲ್ಲಿನ ಚೇತರಿಕೆಯ ಪರಿಣಾಮವಾಗಿ ದ್ರವ್ಯತೆ (liquidity) ಪರಿಸ್ಥಿತಿಗಳು ಬಿಗಿಯಾಗಿವೆ ಎಂದು ವರದಿ ಉಲ್ಲೇಖಿಸಿದೆ. ಜೂನ್ 2026ರ ಅಂತ್ಯಕ್ಕೆ, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳ ಸಿಸ್ಟಮ್-ವೈಡ್ ಕ್ರೆಡಿಟ್-ಠೇವಣಿ ಅನುಪಾತವು 83.3% ಕ್ಕೆ ಏರಿದೆ. ಪ್ರಮುಖ ಯುಎಸ್ ಡಾಲರ್ ಬಾಂಡ್ ವಿತರಕರ ಸರಾಸರಿ ಸಾಲ-ಠೇವಣಿ ಅನುಪಾತವು ಸುಮಾರು 90% ರಷ್ಟಿತ್ತು. (ANI)

(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ವಿವರಗಳನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಖಾಲಿ ಹಾಲಿನ ಪ್ಯಾಕೆಟ್ ಕಸಕ್ಕೆ ಹಾಕೋ ಬದಲು ಹೀಗೆ ಮಾಡಿದ್ರೆ ಹಣ ಮಾಡ್ಬಹುದು !
EPFO: 10 ವರ್ಷದ ಸೇವೆಯ ನಂತರವೂ ಪಿಂಚಣಿ ಕೈತಪ್ಪಬಹುದು! EPFO ಖಾತೆಯಲ್ಲಿ ಈ ಕೆಲಸ ಇಂದೇ ಪೂರ್ಣಗೊಳಿಸಿ!