ಆರ್ಥಿಕ ಪ್ರಗತಿ: ಈ ವರ್ಷ ಚೀನಾ ಹಿಂದಿಕ್ಕಲಿದೆ ಭಾರತ!

Published : Jun 06, 2019, 08:19 AM IST
ಆರ್ಥಿಕ ಪ್ರಗತಿ: ಈ ವರ್ಷ ಚೀನಾ ಹಿಂದಿಕ್ಕಲಿದೆ ಭಾರತ!

ಸಾರಾಂಶ

ಪ್ರಗತಿಯಲ್ಲಿ ಈ ವರ್ಷ ಚೀನಾವನ್ನು ಹಿಂದಿಕ್ಕಲಿದೆ ಭಾರತ: ವಿಶ್ವ ಬ್ಯಾಂಕ್‌| 3 ವರ್ಷಗಳ ಕಾಲ ಶೇ.7.5ರ ದರದಲ್ಲಿ ಅಭಿವೃದ್ಧಿ

ವಾಷಿಂಗ್ಟನ್‌[ಜೂ.06]: ಅಧಿಕಾರಕ್ಕೇರಿದ ಕೂಡಲೇ ಪ್ರಗತಿ ದರ ಕುಸಿತದ ಸುದ್ದಿಯನ್ನು ಕೇಳಿದ್ದ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರಕ್ಕೆ ವಿಶ್ವ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಮುಂದಿನ 3 ವರ್ಷಗಳಲ್ಲಿ ಭಾರತ ಶೇ.7.5ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಇದೇ ವರ್ಷ ಪ್ರಗತಿ ದರದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ ಎಂದೂ ಹೇಳಿದೆ.

ಜಾಗತಿಕ ಆರ್ಥಿಕ ಮುನ್ನೋಟವನ್ನು ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿದ್ದು, 2019-20ನೇ ಹಣಕಾಸು ವರ್ಷದಲ್ಲಿ ಶೇ.7.5ರ ದರದಲ್ಲಿ ಭಾರತ ಪ್ರಗತಿ ಹೊಂದಲಿದೆ. ಎರಡು ವರ್ಷ ಅದೇ ದರವನ್ನು ಉಳಿಸಿಕೊಳ್ಳಲಿದೆ. ಚೀನಾದ ಜಿಡಿಪಿ ಹಾಲಿ ಶೇ.6.6ರಷ್ಟಿದ್ದು, ಈ ವರ್ಷ ಶೇ.6.2ಕ್ಕೆ ಕುಸಿಯಲಿದೆ. 2021ರ ವೇಳೆಗೆ ಶೇ.6ಕ್ಕೆ ತಗ್ಗಲಿದೆ. ಆಗ ಭಾರತದ ಜಿಡಿಪಿ ಚೀನಾದ್ದಕ್ಕಿಂತ ಶೇ.1.5ರಷ್ಟುಹೆಚ್ಚಿರಲಿದೆ ಎಂದು ತಿಳಿಸಿದೆ.

2018-19ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.5.8ಕ್ಕೆ ಕುಸಿದಿದೆ ಎಂದು ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಹೇಳಿತ್ತು. ಒಟ್ಟಾರೆ 2018-19ರಲ್ಲಿ ಭಾರತದ ಜಿಡಿಪಿ ಶೇ.6.2ರಷ್ಟಿದ್ದರೆ, ಚೀನಾದ್ದು ಶೇ.6.6ರಷ್ಟಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!