ಇರಾನ್‌ನಿಂದ ತೈಲ ಆಮದು ಪ್ರಮಾಣ ಇಳಿಕೆ

 |  First Published Jul 11, 2018, 2:23 PM IST

ಇರಾನ್‌ನಿಂದ ತೈಲ ಆಮದು ಪ್ರಮಾಣ ಇಳಿಕೆ

ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಮುಂದುವರಿಕೆ

ಜೂನ್‌ನಲ್ಲಿ ತೈಲ ಆಮದು ಪ್ರಮಾಣದಲ್ಲಿ ಇಳಿಕೆ

ತೈಲಕ್ಕಾಗಿ ಟೆಹರಾನ್ ನತ್ತ ಮುಖ ಮಾಡಿದ ಭಾರತ


ನವದೆಹಲಿ(ಜು.11): ಅಮೆರಿಕಾ ಇರಾನ್ ಮೇಲಿನ ನಿರ್ಬಂಧವನ್ನು ವಿಸ್ತರಿಸಲಿದೆ ಎಂಬುದು ಖಚಿತವಾಗುತ್ತಿದ್ದಂತೇ ಇರಾನ್‌ನಿಂದ ಭಾರತಕ್ಕೆ ಆಮದಾಗುವ ತೈಲದಲ್ಲಿ ಜೂನ್ ತಿಂಗಳಲ್ಲಿ ಶೇ. 15.9 ರಷ್ಟು ಕಡಿತ ಮಾಡಲಾಗಿದೆ.

ಶಿಪ್ಪಿಂಗ್ ಮತ್ತು ಇಡಸ್ಟ್ರಿ ಮೂಲಗಳ ಪ್ರಕ್ಕಾರ ಜೂನ್ ತಿಂಗಳಲ್ಲಿ ಭಾರತವು ಇರಾನ್‌ನಿಂದ ಪ್ರತಿ ದಿನ 592,800 ಬ್ಯಾರಲ್ ತೈಲ ಆಮದು ಮಾಡಿಕೊಂಡಿದೆ. ಆದರೆ ಕಳೆದ ಮೇ ತಿಂಗಳಲ್ಲಿ 705,200 ಬಿಪಿಡಿ ತೈಲ ಆಮದಾಗಿತ್ತು.

Tap to resize

Latest Videos

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾದ ನಂತರದ ಸ್ಥಾನ ಭಾರತದ್ದಾಗಿದೆ. ಆದರೆ ಇದೀಗ ತೈಲ ರಿಫೈನರ್ ಗಳಿಗೆ ಪರ್ಯಾಯ ತೈಲ ಸರಬರಾಜು ಮೂಲಗಳನ್ನು ಪತ್ತೆ ಮಾಡುವಂತೆ ಸರ್ಕಾರ ಕೇಳಿಕೊಂಡಿದೆ. ಅಮೆರಿಕ ನವೀಕರಿಸಿದ ನಿರ್ಬಂಧದ ಅನುಸಾರ ಟೆಹರಾನ್ ನಿಂದ ಭಾರತ ತೈಲ ಆಮದನ್ನು ಮುಂದುವರಿಸಬೇಕಿದೆ

ಇರಾನ್, ರಷ್ಯಾ, ಚೀನಾ, ಫ್ರಾನ್ಸ್, ಜರ್ಮನಿ, ಮತ್ತು ಬ್ರಿಟನ್ ನೊಂದಿಗೆ 2015 ರಲ್ಲಿ ಮಾಡಿಕೊಂಡ ಒಪ್ಪಂದ ರದ್ದುಗೋಲಿಸಿದ ಬಳಿಕ ಅಮೆರಿಕ ಇರಾನ್ ಮೇಲಿನ ತನ್ನ ನಿರ್ಬಂಧವನ್ನು ನವೀಕರಿಸಿದೆ. ಅದೇ ವೇಳೆ ಟೆಹರಾನ್ ತಾನು ಅಮೆರಿಕದೊಡನೆ ಈ ಹಿಂದೆ ಮಾಡಿಕೊಂಡಿರುವ ಒಪ್ಪಂದದಂತೆ ಅದರ ಪರಮಾಣು ಚಟುವಟಿಕೆಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದೆ.

ಖಾಸಗಿ ತೈಲ ರಿಫೈನರಿಗಳು ಜೂನ್‌ ತಿಂಗಳಲ್ಲಿ ಇರಾನ್‌ನಿಂದ ತೈಲ ಆಮದು ಪ್ರಮಾಣವನ್ನು ಕಡಿತಗೊಳಿಸಿದ್ದರೂ, ರಾಜ್ಯ ಒಡೆತನದ ತೈಲ ರಿಫೈನರಿಗಳು ತೈಲ ಆಮದಿನ ಪ್ರಮಾಣವನ್ನು ಹೆಚ್ಚಳ ಮಾಡಿದೆ.

click me!