
ನವದೆಹಲಿ(ಸೆ.14): ಕಚ್ಚಾ ತೈಲ ಆಮದು ಕುರಿತಂತೆ ಅಮೆರಿಕದ ನಿರ್ಬಂಧ ಮತ್ತಷ್ಟು ಬಿಗಿಯಾಗುತ್ತಿದ್ದು, ಇರಾನ್‌ನಿಂದ ದೇಶಕ್ಕೆ ಆಮದಾಗುವ ತೈಲ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಒಟ್ಟು ತೈಲ ಆಮದು ತಿಂಗಳಿಗೆ 12 ಮಿಲಿಯನ್ ಬ್ಯಾರಲ್‌ಗೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಟೆಹ್ರಾನ್ ಮೇಲೆ ವಿಧಿಸಲಾಗಿದ್ದ ತೈಲ ವ್ಯಾಪಾರ ಕುರಿತ ನಿರ್ಬಂಧವನ್ನು ತೆರವುಗೊಳಿಸಲು ಅಮೆರಿಕ ಮುಂದಾದ ಬೆನ್ನಲ್ಲೇ, ತೈಲದ ಬಾಕಿಯನ್ನು ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
2015ರಲ್ಲಿ ಟೆಹ್ರಾನ್ ಮತ್ತು ವಿಶ್ವದ ರಾಷ್ಟ್ರಗಳ ಮೇಲಿನ ಅಣ್ವಸ್ತ್ರ ಒಪ್ಪಂದ ಹೇರಿಕೆಯನ್ನು ಅಮೆರಿಕ ತೆರವೊಗೊಳಿಸುತ್ತಿದೆ. ಆದರೆ ಇರಾನ್ ತೈಲ ಉದ್ಯಮದ ಮೇಲೆ ಅಮೆರಿಕದ ದಿಗ್ಬಂಧನದ ಪರಿಣಾಮ ಮತ್ತಷ್ಟು ಪ್ರಭಾವ ಬೀರಲಿದೆ.
ಭಾರತದ ಮೇಲೂ ಅದರ ಪರಿಣಾಮವಾಗಲಿದ್ದು, ಅಮೆರಿಕ ಕಠಿಣ ನಿರ್ಬಂಧ ಹೇರಿದರೆ, ಇರಾನ್ ಜತೆ ಆಮದನ್ನು ಕಡಿತಗೊಳಿಸಬೇಕಾಗುತ್ತದೆ. ಏಪ್ರೀಲ್‌ನಿಂದ ಆಗಸ್ಟ್‌ವರೆಗೆ ಭಾರತಕ್ಕೆ ಇರಾನ್‌ನಿಂದ ದಿನಕ್ಕೆ 6, 58, 000 ಬ್ಯಾರೆಲ್ ತೈಲ ಆಮದಾಗಿದೆ. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಅದು ಸುಮಾರು ಶೇ. 45 ಕಡಿತವಾಗಲಿದ್ದು, 3,60,000 ರಿಂದ 3,70,000 ಬ್ಯಾರೆಲ್‌ಗೆ ಇಳಿಕೆಯಾಗುವ ಸಾಧ್ಯತೆಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.