ಅಣ್ಣಾ ಬಿಟ್ಬಿಡು ಚಿಂತೆ: ಎಕಾನಮಿ ಮಜಬೂತ್ ಆಗೈತೆ!

By Web Desk  |  First Published Nov 24, 2018, 6:49 PM IST

ವೇಗ ಪಡೆದುಕೊಂಡ ದೇಶದ ಆರ್ಥಿಕ ಬೆಳವಣಿಗೆ ! ಜಿಡಿಪಿ ಶೇ.7.2ರಿಂದ ಶೇ.7.9ಕ್ಕೆ ಏರಿಕೆಯ ಸಂಭವ! ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ! ಜಿಡಿಪಿ ಬೆಳವಣಿಗೆಯಲ್ಲಿ ಚೀನಾ ಹಿಂದಿಕ್ಕಲಿರುವ ಭಾರತ! ಮೋದಿ ಆಡಳಿತದಲ್ಲಿ ಆರ್ಥಿಕತೆಯ ಬುನಾದಿ ಪ್ರಬಲವಾಗುತ್ತಿದೆ


ನವದೆಹಲಿ(ನ.24): ದೇಶದ ಆರ್ಥಿಕ ಬೆಳವಣಿಗೆ (ಜಿಡಿಪಿ ) ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ.7.2ರಿಂದ ಶೇ.7.9ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. 

ಚೀನಾ ಇದೇ ಅವಧಿಯಲ್ಲಿ ಶೇ.6.5ರ ಜಿಡಿಪಿ ಬೆಳವಣಿಗೆ ದಾಖಲಿಸಿದ್ದು, ಭಾರತ ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿ ಮುಂದುವರಿಯುವ ಸಾಧ್ಯತೆ ಇದೆ. 

Tap to resize

Latest Videos

ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಜಿಡಿಪಿ ಶೇ.8.2ಕ್ಕೆ ಹೆಚ್ಚಳವಾಗಿತ್ತು. ಇದರೊಂದಿಗೆ ಭಾರತದ ಜಿಡಿಪಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಬಹತೇಕ ನಿಚ್ಚಳವಾಗಿದೆ. 

ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತದ ಹೊರತಾಗಿಯೂ, ನಿರ್ಮಾಣ ಹಾಗೂ ಸೇವಾ ವಲಯದ ಪ್ರಗತಿ, ಸರಕು-ಸೇವೆಗಳ ಬಳಕೆಯಲ್ಲಿನ ಹೆಚ್ಚಳದ ಪರಿಣಾಮ ಜಿಡಿಪಿ ವೃದ್ಧಿಸಿದೆ.

ಕಳೆದ ವರ್ಷ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಜಿಎಸ್‌ಟಿ ಅನುಷ್ಠಾನದ ಆರಂಭಿಕ ಹಂತದ ಅಡಚಣೆಗಳ ಪರಿಣಾಮ ಜಿಡಿಪಿ ಪ್ರಗತಿ ಇಳಿಕೆಯಾಗಿತ್ತು. ಹೀಗಾಗಿ ಈ ವರ್ಷ ಏಪ್ರಿಲ್‌-ಜೂನ್‌ ತ್ರೈಮಾಸಿಕಕ್ಕೆ ಬೇಸ್‌ ಎಫೆಕ್ಟ್ ಇಳಿಕೆಯ ಲಾಭವಾಗಿತ್ತು. 

ಆದರೆ ಎರಡನೇ ತ್ರೈಮಾಸಿಕದಲ್ಲಿ ಸವಾಲುಗಳ ಹೊರತಾಗಿಯೂ ಜಿಡಿಪಿ ಶೇ.7.2-7.9ರ ಪ್ರಗತಿ ದಾಖಲಿಸಲಿರುವುದು ಆರ್ಥಿಕತೆಯ ಬುನಾದಿ ಪ್ರಬಲವಾಗುತ್ತಿರುವುದನ್ನು ಬಿಂಬಿಸಿದೆ. 

2018-19 ರಲ್ಲಿ ಜಿಡಿಪಿ ಶೇ. 7.5 ರ ದರದಲ್ಲಿ ಪ್ರಗತಿ ಸಾಧಿಸಬಹುದು ಎಂದು ಅಂದಾಜಿಸಿದ್ದು, ಇದಕ್ಕೆ ತಕ್ಕಂತೆ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

click me!