ಆರ್‌ಬಿಐ ಹಣದ ಮೇಲೆ ಕೇಂದ್ರ ಸರ್ಕಾರದ ಕಣ್ಣು?! ಕೊನೆಗೂ ಸತ್ಯ ಬಿಚ್ಚಿಟ್ಟ ಕೇಂದ್ರ ಹಣಕಾಸು ಸಚಿವ! 6 ತಿಂಗಳು ಸರ್ಕಾರಕ್ಕೆ ಆರ್‌ಬಿಐ ಹಣ ಬೇಕಿಲ್ಲ ಎಂದ ಜೇಟ್ಲಿ! ಮೀಸಲು ನಿಧಿ ಬಳಕೆಯ ಉದ್ದೇಶ ಸ್ಪಷ್ಟಪಡಿಸಿದ ಸಚಿವ! ಆರ್ಬಿಐನ ಸ್ವಾಯತ್ತತೆಯನ್ನು ಗೌರವಿಸುತ್ತೇವೆ ಎಂದ ಜೇಟ್ಲಿ
ನವದೆಹಲಿ(ನ.24): ಭಾರತಕ್ಕೆ ಮುಂದಿನ ಆರು ತಿಂಗಳವರೆಗೂ ಆರ್ಬಿಐನಲ್ಲಿರುವ ನಿಧಿಯ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಹಣಕಾಸಿನ ಕೊರತೆ ಆಪಾದನೆಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಳಿಹಾಕಿದ್ದಾರೆ.
2019ರ ಸಾರ್ವರ್ತಿಕ ಚುನಾವಣೆಗೂ ಮುನ್ನ ವಿವಿಧ ಯೋಜನೆಗಳಿಗಾಗಿ ಆರ್ಬಿಐನಿಂದ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದ್ದೇವು ಎಂದು ಜೇಟ್ಲಿ ನಿಧಿ ಕೋರಿಕೆ ಹಿಂದಿನ ಉದ್ದೇಶ ಬಹಿರಂಗ ಪಡಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ₹ 9 ಲಕ್ಷ ಕೋಟಿ ಮೀಸಲು ನಿಧಿಯ ಮೇಲೆ ನಿಯಂತ್ರಣ ಸಾಧಿಸಿ, ಅದರ ಸ್ವಾಯತ್ತತೆಗೆ ಧಕ್ಕ ತರಲು ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಪ್ರಥಮ ಬಾರಿಗೆ ಮೀಸಲು ನಿಧಿ ಬಳಕೆಯ ಉದ್ದೇಶವನ್ನು ಜೇಟ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಿ ಟೀಕಾಕಾರರಿಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ಆರ್‌ಬಿಐ ಹಣ ಬೇಕಿಲ್ಲ:
ಸರ್ಕಾರಕ್ಕೆ ಮುಂದಿನ ಆರು ತಿಂಗಳವರೆಗೂ ಹಣದ ಅವಶ್ಯಕತೆ ಇಲ್ಲ. ಪ್ರಸ್ತುತ ಹಣಕಾಸಿನ ಸ್ಥಿತಿ ಸದೃಢವಾಗಿದೆ. ನಾವು ಆರ್ಬಿಐನ ಸ್ವಾಯತ್ತತೆಯನ್ನು ಗೌರವಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೆಲವು ವಲಯಗಳು ನಗದು ಮತ್ತು ಸಾಲದ ಕೊರತೆಯನ್ನು ಎದುರಿಸುತ್ತಿದ್ದು, ಅಂತಹ ಸಮಸ್ಯೆಗಳನ್ನು ಗುರುತಿಸಿದ್ದೇವೆ ಎಂದು ಜೇಟ್ಲಿ ಈ ವೇಳೆ ಮಾಹಿತಿ ನೀಡಿದರು.