ಭಾರತ-ಅಮೆರಿಕ ತೈಲ ಮಾತುಕತೆ: ಟ್ರಂಪ್ ಕೇಳ್ತಾರಾ ನಮ್ಮ ವ್ಯಥೆ?

By Web Desk  |  First Published Oct 20, 2018, 1:52 PM IST

ಇರಾನ್ ಜೊತೆಗಿನ ತೈಲ ಒಪ್ಪಂದ ನಿಲ್ಲಿಸಲು ಸಾಧ್ಯವಿಲ್ಲ! ಅಮೆರಿಕಕ್ಕೆ ಸ್ಪಷ್ಟ ಸಂದೇಶ ಕಳುಹಿಸಿದ ಭಾರತ! ಭಾರತ-ಅಮೆರಿಕ ನಡುವಿನ ಮಾತುಕತೆ ಮುಂದುವರಿಕೆ! ಇರಾನ್ ಮೇಲಿನ ಅಮೆರಿಕದ ನಿರ್ಬಂಧ ನವೆಂಬರ್ 4 ರಿಂದ ಜಾರಿಗೆ! ಇರಾನ್ ತೈಲ ಆಮದಿನ ಅಗತ್ಯತೆ ಕುರಿತು ಅಮೆರಿಕಕ್ಕೆ ಮನವರಿಕೆ! ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಸ್ಪಷ್ಟನೆ


ನವದೆಹಲಿ(ಅ.20): ಇರಾನ್‌ನಿಂದ ಕಚ್ಚಾ ತೆಲವನ್ನು ಆಮದು ಮಾಡುವುದಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಭಾರತದ ಮಾತುಕತೆ ಮುಂದುವರೆದಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ರಷ್ಯಾದ ಜೊತೆಗಿನ ಎಸ್‌-400 ಕ್ಷಿಪಣಿ ಒಪ್ಪಂದ ಹಾಗೂ ಇರಾನ್‌ ತೈಲ ಆಮದಿನ ಅಗತ್ಯತೆ ಬಗ್ಗೆ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ರವೀಶ್‌ ಕುಮಾರ್‌ ತಿಳಿಸಿದ್ದಾರೆ. 

Tap to resize

Latest Videos

ಹಲವು ಹಂತಗಳಲ್ಲಿ ಅಮೆರಿಕಕ್ಕೆ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಇದರಿಂದ ಭಾರತದ ಪರಿಸ್ಥಿತಿ, ನಿರೀಕ್ಷೆಗಳ ಬಗ್ಗೆ ಅಮೆರಿಕಕ್ಕೆ ಚೆನ್ನಾಗಿ ಅರ್ಥವಾಗಲಿದೆ ಎಂಬ ವಿಶ್ವಾಸ ಇದೆ ಎಂದು ರವೀಶ್ ಭರವಸೆ ವ್ಯಕ್ತಪಡಿಸಿದ್ದಾರೆ.

ಅಮೆರಿಕ ನವೆಂಬರ್‌ 4ರಿಂದ ಇರಾನ್‌ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಹಾಗೂ ಎಲ್ಲ ರಾಷ್ಟ್ರಗಳೂ ಇರಾನ್‌ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಅದು ಬಯಸುತ್ತಿದೆ. 

ಆದರೆ ಇರಾನ್‌ ತೈಲ ಭಾರತದ ಆರ್ಥಿಕ ಪ್ರಗತಿಗೆ ಅವಶ್ಯಕವಾಗಿದ್ದು, ಒಂದು ವೇಳೆ ತೈಲ ಆಮದು ನಿಲ್ಲಿಸಿದರೆ ನೇರವಾಗಿ ಜನಸಾಮಾನ್ಯರಿಗೆ ಇದು ಹೊರೆಯಾಗಲಿದೆ ಎಂದು ಭಾರತ ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟಿದೆ. 

click me!