ಬ್ರಿಟನ್ ಹಿಂದಿಕ್ಕಲಿದೆ ಭಾರತ : ಆರ್ಥಿಕತೆಯಲ್ಲಿ ಭಾರತ ನಂ.5

By Web DeskFirst Published Jan 21, 2019, 9:04 AM IST
Highlights

ಬ್ರಿಟನ್‌ ಇದೀಗ ಆರ್ಥಿಕತೆ ವಿಚಾರದಲ್ಲಿ ಭಾರತದ ಎದುರು ಮಣಿಯುವ ಸಂದರ್ಭ ಎದುರಾಗಿದೆ. ವಿಶ್ವದ ಬೃಹತ್‌ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್‌ ಅನ್ನು ಹಿಂದಿಕ್ಕಿ ಭಾರತ 5ನೇ ಸ್ಥಾನಕ್ಕೆ ಜಿಗಿಯಲಿದೆ 

ನವದೆಹಲಿ: ಶತಮಾನಗಳ ಕಾಲ ಭಾರತದಲ್ಲಿ ಆಳ್ವಿಕೆ ನಡೆಸಿದ್ದ ಬ್ರಿಟನ್‌ ಇದೀಗ ಆರ್ಥಿಕತೆ ವಿಚಾರದಲ್ಲಿ ಭಾರತದ ಎದುರು ಮಣಿಯುವ ಸಂದರ್ಭ ಎದುರಾಗಿದೆ. ವಿಶ್ವದ ಬೃಹತ್‌ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್‌ ಅನ್ನು ಹಿಂದಿಕ್ಕಿ ಭಾರತ 5ನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಜಾಗತಿಕ ಸಲಹಾ ಸಂಸ್ಥೆಯಾಗಿರುವ ಪ್ರೈಸ್‌ವಾಟರ್‌ಹೌಸ್‌ ಕೂಪ​ರ್ಸ್ (ಪಿಡಬ್ಲ್ಯುಸಿ) ಭವಿಷ್ಯ ನುಡಿದಿದೆ.

2017ನೇ ಸಾಲಿನಲ್ಲಿ ಫ್ರಾನ್ಸ್‌ ಅನ್ನು ಹಿಂದಿಕ್ಕಿರುವ ಭಾರತ ವಿಶ್ವದ ಆರನೇ ಆರ್ಥಿಕ ಶಕ್ತಿಯ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿರುವ ಬ್ರಿಟನ್‌ ಅನ್ನು ಹಿಂದಕ್ಕೆ ದಬ್ಬಿ ಆ ಸ್ಥಾನಕ್ಕೆ ಭಾರತ ಏರಲಿದೆ ಎಂದು ಪಿಡಬ್ಲ್ಯುಸಿಯ ಜಾಗತಿಕ ಹಣಕಾಸು ಸಮೀಕ್ಷಾ ವರದಿ ಹೇಳುತ್ತದೆ.

2019ನೇ ಸಾಲಿನಲ್ಲಿ ಬ್ರಿಟನ್‌ ಶೇ.1.6 ಹಾಗೂ ಫ್ರಾನ್ಸ್‌ ಶೇ.1.7ರಷ್ಟುಜಿಡಿಪಿ ದರ ದಾಖಲಿಸಿದರೆ, ಭಾರತ ಶೇ.7.6 ದರದಲ್ಲಿ ಪ್ರಗತಿ ಹೊಂದಲಿದೆ. ಬ್ರಿಟನ್‌ ಹಾಗೂ ಫ್ರಾನ್ಸ್‌ನ ಜನಸಂಖ್ಯೆ ಹಾಗೂ ಅಭಿವೃದ್ಧಿ ಹೆಚ್ಚೂಕಡಿಮೆ ಒಂದೇ ರೀತಿ ಇರುವುದರಿಂದ ಅವೆರಡೂ ದೇಶಗಳ ರಾರ‍ಯಂಕಿಂಗ್‌ನಲ್ಲಿ ಏರಿಳಿತ ಆಗುತ್ತಲೇ ಇರುತ್ತಿತ್ತು. ಇದೀಗ ಭಾರತ ಮುನ್ನುಗ್ಗುತ್ತಿರುವುದರಿಂದ ಭಾರತವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಅವೆರಡೂ ದೇಶಗಳು ಬರಲಿಕ್ಕೆ ಆಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.


ಜಾಗತಿಕ ಆರ್ಥಿಕ ಶಕ್ತಿಗಳು

ರಾರ‍ಯಂಕ್‌    ದೇಶ    ಜಿಡಿಪಿ

1. ಅಮೆರಿಕ    1380 ಲಕ್ಷ ಕೋಟಿ ರು.

2. ಚೀನಾ    870 ಲಕ್ಷ ಕೋಟಿ ರು.

3. ಜಪಾನ್‌    347 ಲಕ್ಷ ಕೋಟಿ ರು.

4. ಜರ್ಮನಿ    260 ಲಕ್ಷ ಕೋಟಿ ರು.

5. ಬ್ರಿಟನ್‌    185 ಲಕ್ಷ ಕೋಟಿ ರು.

6. ಭಾರತ    184 ಲಕ್ಷ ಕೋಟಿ ರು.

7. ಫ್ರಾನ್ಸ್‌    183 ಲಕ್ಷ ಕೋಟಿ ರು.

click me!