
ಬೆಂಗಳೂರು(ಜ.19): ಅಮೆಜಾನ್‌ನ ಅತಿ ದೊಡ್ಡ ಮಾರಾಟ ಮೇಳ ‘ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್’ ನಾಳೆ(ಜ.20)ಯಿಂದ ಶುರುವಾಗಲಿದೆ. ಜ.23ರವರೆಗೆ ನಡೆಯುವ ಈ ಮೆಗಾ ಸೇಲ್‌ನಲ್ಲಿ ಹಲವು ಉತ್ಪನ್ನಗಳ ಮೇಲೆ ಶೇ.70 ರಷ್ಟು ರಿಯಾಯ್ತಿ ಘೋಷಿಸಲಾಗಿದೆ.
ಇದೇ ವೇಳೆ ಅಮೆಜಾನ್ ಪ್ರೈಮ್ ಗ್ರಾಹಕರು ಇಂದು(ಜ.19)ರ ಮಧ್ಯಾಹ್ನದಿಂದಲೇ ಉತ್ಪನ್ನಗಳನ್ನು ಖರೀದಿಸುವ ಅವಕಾಶ ಈಗಾಗಲೇ ಪಡೆದಿದ್ದಾರೆ.
ಗ್ರೇಟ್ ಇಂಡಿಯನ್ ಸೇಲ್ ಆಫರ್ನಲ್ಲಿ ವಾಷಿಂಗ್ ಮಷಿನ್, ಲ್ಯಾಪ್ಟಾಪ್, ಮೊಬೈಲ್ಗಳ ಮೇಲೆ ಭಾರೀ ರಿಯಾಯ್ತಿ ನೀಡಲಾಗಿದೆ. ಪ್ರಮುಖವಾಗಿ OnePlus 6T ಸ್ಮಾರ್ಟ್ಫೋನ್ ಮೇಲೆ ಎಕ್ಸ್ಚೇಂಜ್ ಆಫರ್ ಅಡಿಯಲ್ಲಿ 2 ಸಾವಿರ ರೂ. ಹೆಚ್ಚುವರಿ ರಿಯಾಯ್ತಿ ಮತ್ತು Redmi Y2 ಮೊಬೈಲ್ ಕೇವಲ 7,999 ರೂ.ನಲ್ಲಿ ದೊರೆಯುತ್ತಿದೆ.
ಅದರಂತೆ ಮನೆ ಬಳಕೆಯ ಉತ್ಪನ್ನಗಳ ಮೇಲೂ 75% ರಿಯಾಯ್ತಿ ನೀಡಲಾಗಿದ್ದು, ಎಲೆಕ್ಟ್ರಿಕ್ ಉತ್ಪನ್ನಗಳ ಮೇಲೆ 60% ಡಿಸ್ಕೌಂಟ್ ಕೊಡಲಾಗಿದೆ. ಸ್ಮಾರ್ಟ್ ಟಿವಿ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗಿದ್ದು, ಸ್ಯಾಮ್ಸಂಗ್ ಫುಲ್ ಎಚ್ಡಿ ಸ್ಮಾರ್ಟ್ ಟಿವಿ 58,900 ರೂ. ಬದಲಾಗಿ ಕೇವಲ 36,990 ರೂ.ನಲ್ಲಿ ಖರೀದಿಸಬಹುದಾಗಿದೆ. ಇನ್ನುಳಿದಂತೆ ವಾಷಿಂಗ್ ಮಷಿನ್ ಮೇಲೆ 11 ಸಾವಿರ ರೂ. ಡಿಸ್ಕೌಂಟ್ ಘೋಷಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.