Personal Finance : ರೋಗಿಗಳ ಜೇಬಿಗೆ ಕತ್ತರಿ, ಮತ್ತಷ್ಟು ದುಬಾರಿ ಔಷಧಿ

By Suvarna News  |  First Published May 6, 2022, 12:21 PM IST

ಅನೇಕರಿಗೆ ಪ್ರತಿ ದಿನ ಮಾತ್ರೆ ಸೇವಿಸೋದು ಅನಿವಾರ್ಯ.  ಪ್ರತಿ ತಿಂಗಳು ಔಷಧಿಗಾಗಿ ಒಂದಿಷ್ಟು ಹಣವನ್ನು ಮೀಸಲಿಡಬೇಕು. ಆದ್ರೆ ದುಬಾರಿ ದುನಿಯಾದಲ್ಲಿ ಔಷಧಿ ಖರೀದಿ ಕಷ್ಟವಾಗ್ತಿದೆ. ಅದ್ರ ಬೆಲೆ ಏರಿಕೆ ರೋಗಿಗಳನ್ನು ಕಷ್ಟಕ್ಕೆ ನೂಕಿದೆ.
 


ಪೆಟ್ರೋಲ್ – ಡೀಸೆಲ್ (Petrol – Diesel) ಜೊತೆ ಔಷಧಿ (Medicine) ಕೂಡ ಮನುಷ್ಯನ ಜೀವನ (Life) ದ ಒಂದು ಭಾಗವಾಗಿದೆ. ಅಂಕಿ – ಅಂಶಗಳ ಪ್ರಕಾರ ದೇಶದ ಶೇಕಡಾ 80ರಷ್ಟು ಕುಟುಂಬಗಳಲ್ಲಿ ಒಬ್ಬರಲ್ಲ ಒಬ್ಬರು ಪ್ರತಿ ದಿನ ಮಾತ್ರೆ – ಔಷಧಿ ಸೇವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೋಗಿ (patient) ಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಔಷಧಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಆದ್ರೆ ಹಣದುಬ್ಬರ (Inflation) ಔಷಧಿಗಳ ಮೇಲೂ ಪರಿಣಾಮ ಬೀರುತ್ತಿದೆ. ಪೆಟ್ರೋಲ್ – ಡೀಸೆಲ್ ಬೆಲೆಗಳು ದಿನ ದಿನಕ್ಕೂ ಏರಿಕೆ ಕಾಣ್ತಿರುವಂತೆ  ಔಷಧಿಗಳ ಬೆಲೆ ಕೂಡ ಹೆಚ್ಚಾಗಿದೆ. ಔಷಧಿಗಳ ಬೆಲೆ ಏರಿಕೆ ಪ್ರತಿಯೊಂದು ವಿಭಾಗದ ಮೇಲೂ ಪರಿಣಾಮ ಬೀರಲಿದೆ. ಬೆಲೆ ಏರಿಕೆಯಿಂದ ರೋಗಿಗಳ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ.  ಎಂದಿನಂತೆ, ಮಧ್ಯಮ ವರ್ಗದವರ ಮೇಲೆ ಈ ಬೆಲೆ ಏರಿಕೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. 

ಔಷಧಿಗಳ ಬೆಲೆ ಎಷ್ಟು ಏರಿಕೆ? : ಈ ಬಾರಿ ಜನಸಾಮಾನ್ಯರ ಮೇಲೆ ಬರೆ ಮೇಲೆ ಬರೆ ಬಿದ್ದಿದೆ. ಪ್ರತಿ ವರ್ಷಕ್ಕಿಂತ ಈ ವರ್ಷ ಔಷಧಿಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ಸುಮಾರು 800 ಔಷಧಿಗಳ ಬೆಲೆಗಳು ಶೇಕಡಾ 10 ರಷ್ಟು ಹೆಚ್ಚಾಗಿದೆ. ಜ್ವರ, ಹೃದಯ ಸಂಬಂಧಿ ಖಾಯಿಲೆ. ಅಧಿಕ ರಕ್ತದೊತ್ತಡ, ವಿಟಮಿನ್ ಸಮಸ್ಯೆ,  ಶುಗರ್, ಖನಿಜ, ಚರ್ಮ ಸಂಬಂಧಿ, ರಕ್ತಹೀನತೆ, ಅಲರ್ಜಿ, ಆಂಟಿಟಾಕ್ಸಿನ್, ರಕ್ತ ತೆಳುವಾಗುವುದು, ಕುಷ್ಠರೋಗ, ಟಿಬಿ, ಮೈಗ್ರೇನ್, ಬುದ್ಧಿಮಾಂದ್ಯತೆ, ಮಾನಸಿಕ ಚಿಕಿತ್ಸೆ, ಹಾರ್ಮೋನ್, ಹೊಟ್ಟೆ ರೋಗಗಳು ಸೇರಿದಂತೆ ಅನೇಕ ಅಗತ್ಯ ಔಷಧಗಳು ಬೆಲೆ ದುಬಾರಿಯಾಗಿದೆ. 

Tap to resize

Latest Videos

LIC IPO: ಎರಡನೇ ದಿನ ದಾಖಲೆ ನಿರ್ಮಿಸಿದ ಎಲ್ಐಸಿ ಐಪಿಒ; ಶೇ.100ಕ್ಕಿಂತಲೂ ಹೆಚ್ಚು ಚಂದಾದಾರಿಕೆ ; ವಾರಾಂತ್ಯದಲ್ಲೂ ನಡೆಯಲಿದೆ ಬಿಡ್

ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಔಷಧಿಗಳ ಬೆಲೆಯನ್ನು ಹೆಚ್ಚಿಸಲು ಅನುಮತಿ ನೀಡಿದೆ. ಎನ್ ಪಿಪಿಎ (NPPA) ಕೈಗಾರಿಕಾ ಉತ್ತೇಜನ ಮತ್ತು ದೇಶೀಯ ವ್ಯಾಪಾರ ಇಲಾಖೆಯ ಆರ್ಥಿಕ ಸಲಹಾ ಕಚೇರಿ ಪ್ರಕಾರ, ವಾರ್ಷಿಕ ಶೇಕಡಾ 10.76 ಹೆಚ್ಚಳಕ್ಕೆ ಅವಕಾಶ ನೀಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹಳೇ ಔಷಧಗಳು ಇರುವುದರಿಂದ ಬೆಲೆ ಏರಿಕೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ. ಹೊಸ ಸ್ಟಾಕ್ ಬರ್ತಿದ್ದಂತೆ ಅದ್ರ ಬಿಸಿ ಗೊತ್ತಾಗಲಿದೆ.  

2019 ರಲ್ಲಿ ಶೇಕಡಾ 2 ಮತ್ತು 2020 ರಲ್ಲಿ ಕೇವಲ ಶೇಕಡಾ 0.5 ರಷ್ಟು ಹೆಚ್ಚಳ : ಈ ಬಾರಿ ಔಷಧಿಗಳ ಬೆಲೆ ಶೇಕಡಾ 10ರಷ್ಟು ಏರಿಕೆಯಾಗಿರುವುದರಿಂದ ಜನಸಾಮಾನ್ಯರ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಪ್ರತಿ ವರ್ಷ  ಔಷಧಿಗಳ ಬೆಲೆ ಏರಿಕೆಗೆ ಅವಕಾಶವಿದೆ. ಪ್ರತಿ ವರ್ಷ ಶೇಕಡಾ 2 ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿಯೇ ಬೆಲೆ ಏರಿಕೆಯಾಗ್ತಿತ್ತು. 2019 ರಲ್ಲಿ ಔಷಧಿಗಳ ಬೆಲೆಗಳನ್ನು ಶೇಕಡಾ 2 ರಷ್ಟು ಮತ್ತು 2020ರಲ್ಲಿ ಶೇಕಡಾ 0.5 ರಷ್ಟು ಹೆಚ್ಚಿಸಲಾಗಿತ್ತು. 

Aadhaar Card ಸುರಕ್ಷಿತವಾಗಿಡಲು ಹೀಗೆ ಮಾಡಿ

ದೇಶದ ಔಷಧ ಮಾರುಕಟ್ಟೆ 1.6 ಲಕ್ಷ ಕೋಟಿ : ಡಬ್ಲ್ಯುಪಿಐ ಹೆಚ್ಚಳವು ಔಷಧಿಗಳ ಬೆಲೆಯನ್ನು ಹೆಚ್ಚಿಸಿದೆ. ದೇಶದಲ್ಲಿ ಸುಮಾರು 1.6 ಲಕ್ಷ ಕೋಟಿ ರೂಪಾಯಿಗಳ ಔಷಧೀಯ ಮಾರುಕಟ್ಟೆಯಿದ್ದು, ಇದರಲ್ಲಿ ಅಧಿಸೂಚಿತ ಔಷಧಗಳ ಪಾಲು ಶೇಕಡಾ 18 ರಷ್ಟಿದೆ. ಬೆಲೆಗಳ ಹೆಚ್ಚಳದಿಂದಾಗಿ ಅನೇಕ ದೊಡ್ಡ ಕಂಪನಿಗಳ ವಹಿವಾಟಿನಲ್ಲಿ ಅಭೂತಪೂರ್ವ ಹೆಚ್ಚಳ ಕಂಡುಬರಲಿದೆ.  ಆನ್‌ಲೈನ್ ಔಷಧಿ ಮಾರುಕಟ್ಟೆಗೂ ಹೆಚ್ಚಿನ ಪ್ರೋತ್ಸಾಹ ಸಿಗ್ತಿದೆ. ಆದ್ರೆ ವರ್ಷದಿಂದ ವರ್ಷಕ್ಕೆ ಔಷಧಿಗಳ ಬೆಲೆ ಹೆಚ್ಚಾಗ್ತಿರುವುದು ಮಾರುಕಟ್ಟೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಸಾರ್ವಜನಿಕರ ಸ್ಥಿತಿ ಚಿಂತಾಜನಕವಾಗಿದೆ. ಗಾಯದ ಮೇಲೆ ಉಪ್ಪು ಸರಿದಂತಾಗಿದೆ. ಒಂದರಿಂದ ಚೇತರಿಸಿಕೊಳ್ಳುವ ಮೊದಲೇ ಇನ್ನೊಂದರ ಬೆಲೆ ಏರಿಕೆ ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ. 
 

click me!