
ನವದೆಹಲಿ (ಏ.28): 2022-23ನೇ ಹಣಕಾಸು ಸಾಲಿನ (Financial Year) ಆದಾಯ ತೆರಿಗೆ ರಿಟರ್ನ್ (ITR) ಅರ್ಜಿಗಳಿಗೆ ಆದಾಯ ತೆರಿಗೆ ಇಲಾಖೆ (Income Tax department) ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ಹೊಸ ಐಟಿಆರ್ ಅರ್ಜಿ 1ರಿಂದ 6ರ ತನಕ ಉಲ್ಲೇಖಿಸಲಾಗಿದೆ. ಹೀಗಾಗಿ 2022-23ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಫೈಲ್ ಮಾಡಲು ನೀವು ಮುಂದಾಗುವುದು ಸಹಜ. ಆದ್ರೆ ಈಗಲೇ ಐಟಿಆರ್ ಸಲ್ಲಿಕೆ ಮಾಡದೆ, ಜೂನ್ ಬಳಿಕ ಈ ಕೆಲ್ಸ ಮಾಡೋದು ಉತ್ತಮ ಎಂದಿದ್ದಾರೆ ಹೂಡಿಕೆ ತಜ್ಞರು. ಯಾಕೆ? ಇಲ್ಲಿದೆ ಮಾಹಿತಿ.
ಟಿಡಿಎಸ್ (TDS) ರಿಟರ್ನ್ ಫೈಲ್ ಮಾಡಲು ಮೇ 31 ಕೊನೆಯ ದಿನಾಂಕ. ಹೀಗಾಗಿ ಜೂನ್ ಗೂ ಮುನ್ನ ತೆರಿಗೆ ಪಾವತಿದಾರರ (Taxpayer) ಅರ್ಜಿ ನಮೂನೆ 26AS ಅಪ್ಡೇಟ್ (Update) ಆಗುವುದಿಲ್ಲ. ಟಿಡಿಎಸ್ ರಿಟರ್ನ್ ಫೈಲ್ ಆಗದೆ 2022ನೇ ಹಣಕಾಸು ಸಾಲಿನ 4ನೇ ತ್ರೈಮಾಸಿಕದಲ್ಲಿ ಟಿಡಿಎಸ್ (TDS) ಕಡಿತಗೊಂಡ ಉದ್ಯೋಗಿಗಳಿಗೆ ಅರ್ಜಿ ನಮೂನೆ 16A ನೀಡಲು ಸಂಸ್ಥೆಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ವೇತನ ಪಡೆಯುತ್ತಿರುವ ಉದ್ಯೋಗಿಗಳು 2022ರ ಮೇ 31ರ ತನಕ ಕಾದು, ಜೂನ್ ನಂತರ ಐಟಿಆರ್ ಫೈಲ್ (File) ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.
Bank Holidays: ಮೇ ತಿಂಗಳಲ್ಲಿ 11 ದಿನ ಬ್ಯಾಂಕ್ ಕ್ಲೋಸ್; ಇಲ್ಲಿದೆ ನೋಡಿ RBI ರಜಾಪಟ್ಟಿ
ಅದೇರೀತಿ ಯಾವುದೇ ಒಬ್ಬ ಉದ್ಯಮ ಪಾಲುದಾರ 2022ನೇ ಹಣಕಾಸು ಸಾಲಿನಲ್ಲಿ ಪಾವತಿ (Payment) ಮಾಡುವ ಸಮಯದಲ್ಲಿ ಯಾವುದೇ ಟಿಡಿಎಸ್ ಕಡಿತ ಮಾಡಿದ್ದರೆ ಆಗ ಸ್ವ ಉದ್ಯೋಗ ಮಾಡುತ್ತಿರುವವರು ಅಥವಾ ಸಣ್ಣ ಉದ್ಯಮಿಗಳಿಗೆ ಅಪ್ಡೇಟ್ (Update) ಆಗಿರುವ ಅರ್ಜಿ ನಮೂನೆ 26AS ಲಭಿಸುವುದಿಲ್ಲ. ಹೀಗಾಗಿ 2022ರ ಜೂನ್ ತನಕ ಕಾದು, ಒಮ್ಮೆ ಅರ್ಜಿ ನಮೂನೆ 26AS ಅಪ್ಡೇಟ್ ಆದ ಬಳಿಕ ಐಟಿಆರ್ ಫೈಲ್ ಮಾಡುವುದು ಉತ್ತಮ.
ಟಿಡಿಎಸ್ (TDS) ರಿಟರ್ನ್ (Return) ಫೈಲ್ ಗೆ ನೀಡಿರುವ ಅವಧಿ ಮುಗಿದ ತಕ್ಷಣ ತೆರಿಗೆ ಪಾವತಿದಾರರು ಆದಾಯ ತೆರಿಗೆ (Income Tax) ಫೈಲ್ ಮಾಡುವುದು ಬೇಡ ಎಂಬ ಸಲಹೆಯನ್ನು ಕೂಡ ತಜ್ಞರು ನೀಡಿದ್ದಾರೆ. ಟಿಡಿಎಸ್ ರಿಟರ್ನ್ ಫೈಲ್ ಮಾಡಲು ಇರುವ ಅವಧಿ ಮುಗಿದ ಬಳಿಕ ವೇತನ (Salary) ಪಡೆಯುವ ವ್ಯಕ್ತಿಗಳು ಅರ್ಜಿ ನಮೂನೆ 26AS ಅಪ್ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ಆಗಾಗ ಚೆಕ್ ಮಾಡುತ್ತಿರಬೇಕು. ಏಕೆಂದ್ರೆ ಅರ್ಜಿ ನಮೂನೆ 26AS ಅಪ್ಡೇಟ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಆದಾಯ ತೆರಿಗೆ ವೆಬ್ ಸೈಟ್ ಗೆ ಲಾಗಿ ಇನ್ ಆದ ತಕ್ಷಣ ತೆರಿಗೆಪಾವತಿದಾರರು ಮೊದಲು ಅರ್ಜಿ ನಮೂನೆ 26AS ಚೆಕ್ ಮಾಡಬೇಕು. ಅದು ಅಪ್ಡೇಟ್ ಆಗಿದ್ದರೆ ಮಾತ್ರ 2022-23ನೇ ಮೌಲ್ಯಮಾಪನ ಸಾಲಿಗೆ ಐಟಿಆರ್ ಸಲ್ಲಿಕೆ ಮಾಡುವಂತೆ ಕೂಡ ತಜ್ಞರು ಟಿಪ್ಸ್ ನೀಡಿದ್ದಾರೆ.
LIC IPO:ಮೇ 4-9ರ ತನಕ ಎಲ್ಐಸಿ ಐಪಿಒ; ಪ್ರತಿ ಷೇರಿನ ಬೆಲೆ ಎಷ್ಟು ಗೊತ್ತಾ? ಪಾಲಿಸಿದಾರರಿಗೆ ಡಿಸ್ಕೌಂಟ್ ಆಫರ್!
ಅದೇರೀತಿ 2.5 ಲಕ್ಷ ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯ (Annual Income) ಹೊಂದಿರುವ ವೇತನ ಪಡೆಯುತ್ತಿರುವ ವ್ಯಕ್ತಿಗಳು ಕೂಡ ಜೂನ್ ತನಕ ಕಾಯುವುದು ಉತ್ತಮ. ಏಕೆಂದ್ರೆ 2022ನೇ ಹಣಕಾಸು ಸಾಲಿನ 4ನೇ ತ್ರೈಮಾಸಿಕದಲ್ಲಿ ಅವರ ಬ್ಯಾಂಕ್ (Bank) ಠೇವಣಿಗಳಿಂದ (Deposits) ಟಿಡಿಎಸ್ (TDS) ಕಡಿತವಾಗುವ ಸಾಧ್ಯತೆಯಿದೆ. ಹೀಗಾಗಿ 2022-23ನೇ ಮೌಲ್ಯಮಾಪನ ಸಾಲಿನ ಐಟಿಆರ್ ಫೈಲಿಂಗ್‌ಗೆ ಗಡಿಬಿಡಿ ಮಾಡದೆ ಜೂನ್ ತನಕ ಕಾಯುವುದು ಉತ್ತಮ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.