IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ

By Suvarna News  |  First Published Dec 13, 2021, 2:28 PM IST

*ಅಂತಿಮ ದಿನಾಂಕದೊಳಗೆ ಐಟಿ ರಿಟರ್ನ್ಸ್ ಸಲ್ಲಿಸಲು ವಿಫಲರಾದ್ರೆ ತೊಂದರೆ
*ಇ-ಫೈಲಿಂಗ್ ಪೋರ್ಟಲ್ ನಲ್ಲಿ 26AS ಹಾಗೂ AIS ವೀಕ್ಷಿಸಲು ಮರೆಯಬೇಡಿ
*ಈ ತನಕ ಮೂರು ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ


ನವದೆಹಲಿ (ಡಿ.13): ಆದಾಯ ತೆರಿಗೆ ರಿಟರ್ನ್ಸ್(Income tax returns) ಸಲ್ಲಿಕೆ  ಪ್ರಕ್ರಿಯೆಯನ್ನು ಸರಳವಾಗಿಸೋ ಜೊತೆಗೆ ತೆರಿಗೆದಾರರ (Taxpayers) ಸ್ನೇಹಿಯಾಗಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷ ಇ-ಫೈಲಿಂಗ್ (e-filling) ಪೋರ್ಟಲ್(Portal) ಪ್ರಾರಂಭಿಸಿತ್ತು. ಈ ಪೋರ್ಟಲ್ ಮೂಲಕವೇ ಶೀಘ್ರವಾಗಿ ರಿಟರ್ನ್ಸ್ ಫೈಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ (Income Tax Department) ತೆರಿಗೆದಾರರನ್ನು(Taxpayers) ಒತ್ತಾಯಿಸಿದೆ.  2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ದಿನಾಂಕ ಎಂದು ಘೋಷಿಸುವ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಈ ಮನವಿ ಮಾಡಿದೆ. 

ಇ-ಫೈಲಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸೋ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ (IT department) ಸ್ವಯಂಚಾಲಿತ ಫೈಲಿಂಗ್ ವ್ಯವಸ್ಥೆ ( automated filing system), ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ ( AIS) ಜೊತೆಗೆ  ಇನ್ನೂ ಕೆಲವು ಕಾರ್ಯಕ್ರಮಗಳನ್ನು ಪರಿಚಯಿಸಿದೆ. 2021-22ನೇ ಅಸೆಸ್ಮೆಂಟ್ ವರ್ಷದ( assessment year) ಆದಾಯ ತೆರಿಗೆ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಇನ್ನೂ ಐಟಿಆರ್(ITR) ಸಲ್ಲಿಸದ ತೆರಿಗೆದಾರರು ನಿಗದಿತ ದಿನಾಂಕದೊಳಗೆ ತಪ್ಪದೇ ಸಲ್ಲಿಕೆ ಮಾಡಬೇಕು.  ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಸಲು ವಿಫಲರಾದ ತೆರಿಗೆದಾರರು ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೇಂದ್ರ ನೇರ ತೆರಿಗೆಗಳ ನಿಗಮ (CBDT)ಐಟಿ ರಿಟರ್ನ್ಸ್ ಸಲ್ಲಿಕೆಗೆ ಈ ಮೊದಲು ಜುಲೈ 31 ರ ಗಡುವು ನೀಡಿತ್ತು. ಆದ್ರೆ ಪೋರ್ಟಲ್ನಲ್ಲಿನ ಅನೇಕ ತಾಂತ್ರಿಕ ದೋಷಗಳ ಬಗ್ಗೆ ಬಳಕೆದಾರರಿಂದ(Users) ದೂರುಗಳು(Complaints) ಬಂದ ಹಿನ್ನೆಲೆಯಲ್ಲಿ ಈ ಅವಧಿಯನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿತು. ಆ ಬಳಿಕ ಸರ್ಕಾರ ಈ ಅವಧಿಯನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿ ಡಿಸೆಂಬರ್ 31ಕ್ಕೆ ಅಂತಿಮ ಗಡುವು ಫಿಕ್ಸ್ (fix)ಮಾಡಿತು.

Tap to resize

Latest Videos

undefined

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್!

ಆದಾಯ ತೆರಿಗೆ ಇಲಾಖೆಯ ನೂತನ ಇ-ಫೈಲಿಂಗ್ ಪೋರ್ಟಲ್ ಮೂಲಕ ಇಲ್ಲಿಯ ತನಕ ಸುಮಾರು ಮೂರು ಕೋಟಿ ಐಟಿ ರಿಟರ್ನ್ಸ್(IT returns) ಸಲ್ಲಿಕೆಯಾಗಿವೆ ಎಂದು ಹಣಕಾಸು ಸಚಿವಾಲಯ (Finance ministry)ಮಾಹಿತಿ ನೀಡಿದೆ. ಟಿಡಿಎಸ್ (TDS) ಹಾಗೂ ತೆರಿಗೆ ಪಾವತಿಗಳ ನಿಖರತೆ ಹಾಗೂ ಐಟಿಆರ್ ಎಸ್ ಪೂರ್ವ ಮಾಹಿತಿ ಸಲ್ಲಿಕೆಗಳನ್ನು ಪಡೆಯಲು ಎಲ್ಲ ತೆರಿಗೆದಾರರು ತಮ್ಮ ಅರ್ಜಿ 26AS ಹಾಗೂ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ (AIS) ಅನ್ನು ಇ-ಫೈಲಿಂಗ್ ಪೋರ್ಟಲ್ ನಲ್ಲಿ ವೀಕ್ಷಿಸುವಂತೆ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

'ಇಕ್ವಿಟಿ ( equity)ಅಥವಾ ಮ್ಯೂಚುವಲ್ ಫಂಡ್ಸ್ (Mutual funds) ಮಾರಾಟ ಅಥವಾ ಖರೀದಿ ಮಾಡಿರೋ ತೆರಿಗೆದಾರರು  AIS ಸ್ಟೇಟ್ಮೆಂಟ್ ನಲ್ಲಿರೋ ಮಾಹಿತಿಗಳನ್ನು ತಮ್ಮ ಬ್ಯಾಂಕ್ ಪಾಸ್ ಬುಕ್, ಇಂಟರ್ನೆಟ್ ಸರ್ಟಿಫಿಕೇಟ್, ಅರ್ಜಿ 16 ಹಾಗೂ ಕ್ಯಾಪಿಟಲ್ ಗೇನ್ಸ್ ಸ್ಟೇಟ್ಮೆಂಟ್ನಲ್ಲಿರೋ ಮಾಹಿತಿಗಳೊಂದಿಗೆ ಹೋಲಿಸಿ ನೋಡೋದು ತುಂಬಾ ಮುಖ್ಯ' ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 

Bank Deposit Insurance: ಬ್ಯಾಂಕ್‌ಗಳು ನಷ್ಟಕ್ಕೆ ಒಳಗಾದರೂ ಠೇವಣಿ ಹಣ ಸುರಕ್ಷಿತ: ಮೋದಿ

ಐಟಿಆರ್ ಪ್ರಕ್ರಿಯೆಗೆ ಹಾಗೂ ರಿಫಂಡ್ಸ್ ಮಾಡಲು ಆಧಾರ್ ಒಟಿಪಿ ಹಾಗೂ ಇತರ ವಿಧಾನಗಳ ಮೂಲಕ ಇ-ಪರಿಶೀಲನೆ ನಡೆಸೋದು ಇಲಾಖೆಗೆ ಅತೀಮುಖ್ಯವಾಗಿದೆ. '2.69 ಕೋಟಿ ರಿಟರ್ನ್ಸ್ ಇ-ಪರಿಶೀಲನೆ ನಡೆಸಲಾಗಿದ್ದು, ಅವುಗಳಲ್ಲಿ 2.28 ಕೋಟಿ ರಿರ್ಟನ್ಸ್ ಪರಿಶೀಲನೆಗಳನ್ನು ಆಧಾರ್ ಆಧರಿತ OTP ಮೂಲಕ ಮಾಡಿರೋದು ಉತ್ತೇಜನಕಾರಿಯಾಗಿದೆ' ಎಂದು ಸಚಿವಾಲಯ ಹೇಳಿದೆ. ಅಂತಿಮ ದಿನದೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆ ಇ-ಮೇಲ್ಸ್, ಎಸ್ಎಂಎಸ್ ಹಾಗೂ ಜಾಹೀರಾತುಗಳ ಮೂಲಕ ತೆರಿಗೆದಾರರಿಗೆ ನೆನಪಿಸೋ ಕೆಲಸ ಮಾಡುತ್ತಿದೆ. 2020-21ನೇ ಅಸೆಸ್ಮೆಂಟ್ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ಎಲ್ಲ ತೆರಿಗೆದಾರರು ಆದಷ್ಟು ಬೇಗ ರಿಟರ್ನ್ಸ್ ಸಲ್ಲಿಕೆ ಮಾಡೋ ಮೂಲಕ ಕೊನೆಯ ಕ್ಷಣದ ನಿಬಿಡತೆಯನ್ನು ತಗ್ಗಿಸುವಂತೆ ಸಚಿವಾಲಯ  ಮನವಿ ಮಾಡಿದೆ. 
 

click me!