*ಈ ಹಿಂದೆ ಡಿಸೆಂಬರ್ 31 ಐಟಿಆರ್ ಇ-ದೃಢೀಕರಣಕ್ಕೆ ಅಂತಿಮ ದಿನಾಂಕವಾಗಿತ್ತು
*ಇ-ದೃಢೀಕರಣ ಪೂರ್ಣಗೊಳ್ಳದ ಐಟಿಆರ್ ಗಳನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸೋದಿಲ್ಲ
* ಆನ್ ಲೈನ್ ಮೂಲಕ ಸಲ್ಲಿಕೆಯಾದ 2019-20ನೇ ಸಾಲಿನ ಅನೇಕ ಐಟಿಆರ್ ಗಳು ಇ-ದೃಢೀಕರಣಕ್ಕೆ ಬಾಕಿ ಉಳಿದಿವೆ
ನವದೆಹಲಿ (ಡಿ.30): 2019-20ನೇ ಆರ್ಥಿಕ ಸಾಲಿನ (2020-21ನೇ ಅಂದಾಜು ವರ್ಷ) ಆದಾಯ ತೆರಿಗೆ ರಿಟರ್ನ್(ITR) ಆನ್ ಲೈನ್ ದೃಢೀಕರಣ ( e-verification) ಮಾಡಲು ಸಾಧ್ಯವಾಗದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವನ್ನು ಡಿಸೆಂಬರ್ 31ರಿಂದ 2022ರ ಫೆಬ್ರವರಿ 28ರ ತನಕ ವಿಸ್ತರಿಸಿದೆ. ಈ ಬಗ್ಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(CBDT) ಮಾಹಿತಿ ನೀಡಿದೆ.
ಆದಾಯ ತೆರಿಗೆ ಕಾಯ್ದೆ(Income Tax Act) ಅನ್ವಯ ಡಿಜಿಟಲ್ ಸಹಿಯಿಲ್ಲದೆ (Digital signature) ಫೈಲ್ ಮಾಡಿರೋ ಆದಾಯ ತೆರಿಗೆ ರಿಟರ್ನ್ ಅನ್ನು ಆಧಾರ್ ಒಟಿಪಿ (Aadhaar OTP),ನೆಟ್ ಬ್ಯಾಂಕಿಂಗ್ ( net-banking),ಡಿಮ್ಯಾಟ್ ಖಾತೆ (demat account) ಮೂಲಕ ಕಳುಹಿಸೋ ಕೋಡ್, ಎಟಿಎಂ (ATM) ಹೀಗೆ ಈ ಯಾವುದಾದರೊಂದು ವಿಧಾನದ ಮೂಲಕ ಇ-ದೃಢೀಕರಣ ( e-verification) ನಡೆಸಬೇಕು. ಐಟಿಆರ್ ಸಲ್ಲಿಕೆ ಮಾಡಿದ 120 ದಿನಗೊಳಗೆ ಇ-ದೃಢೀಕರಣ ಮಾಡೋದು ಅಗತ್ಯ. ಆನ್ ಲೈನ್(Online) ಮೂಲಕ ಐಟಿಆರ್ ಸಲ್ಲಿಕೆ ಮಾಡಿದ ಪ್ರತಿಯಲ್ಲಿ ಸಹಿ ಹಾಕಿ ಬೆಂಗಳೂರಿನ(Bengaluru) ಕೇಂದ್ರೀಯ ಪರಿಶೀಲನಾ ಕೇಂದ್ರಕ್ಕೆ (CPC) ಸ್ಪೀಡ್ ಪೋಸ್ಟ್ (Speed post) ಕಳುಹಿಸೋ ಮೂಲಕವೂ ದೃಢೀಕರಿಸಲು ಸಾಧ್ಯವಿದೆ. ಇ-ದೃಢೀಕರಣಗೊಳ್ಳದ ಐಟಿ ರಿಟರ್ನ್ ಗಳನ್ನು ಆದಾಯ ತೆರಿಗೆ ಇಲಾಖೆ (Incme Tax Department) ಪರಿಗಣಿಸೋದಿಲ್ಲ.ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(CBDT)ನೀಡಿರೋ ಮಾಹಿತಿ ಪ್ರಕಾರ 2019-20ನೇ ಆರ್ಥಿಕ ಸಾಲಿನಲ್ಲಿ (2020-21ನೇ ಅಂದಾಜು ವರ್ಷ) ಆನ್ ಲೈನ್ ಮೂಲಕ ಸಲ್ಲಿಕೆಯಾಗಿರೋ ಅನೇಕ ಐಟಿಆರ್ ಗಳ ಇ-ದೃಢೀಕರಣ( e-verification) ಇನ್ನೂ ನಡೆದಿಲ್ಲ.
undefined
ITR ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ದಿನಾಂಕ
2020-21ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಈ ಹಿಂದೆ ಸರ್ಕಾರ 2020-21ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರ ಗಡುವು ನೀಡಿತ್ತು. ಆದ್ರೆ ಐಟಿಆರ್ ಪೋರ್ಟಲ್ ನಲ್ಲಿನ (Poral) ತಾಂತ್ರಿಕ ದೋಷಗಳ ಬಗ್ಗೆ ತೆರಿಗೆದಾರರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಗಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಿತ್ತು.ಆದ್ರೆ ಈಗಲೂ ಕೂಡ ಪೋರ್ಟಲ್ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ತೊಂದರೆ ಎದುರಾಗುತ್ತಿದೆ ಎಂದು ತೆರಿಗೆದಾರರು(Taxpayers) ದೂರಿದ್ದಾರೆ. ಅಲ್ಲದೆ, ಐಟಿ ರಿಟರ್ನ್ಸ್ (ITR) ಸಲ್ಲಿಕೆ ಗಡುವವನ್ನು ಇನ್ನೂ ಮುಂದೂಡುವಂತೆ ಆಗ್ರಹಿಸಿದ್ದಾರೆ.
ಪೋರ್ಟಲ್ ನಲ್ಲಿ ತೊಂದ್ರೆ
ಆದಾಯ ತೆರಿಗೆ ಇಲಾಖೆ ಜೂನ್ 7 ರಂದು ಪ್ರಾರಂಭಿಸಿದ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ(Portal) ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದವು. ಈ ಸಮಸ್ಯೆಗಳ ಬಗ್ಗೆ ತೆರಿಗೆದಾರರು ದೂರುಗಳನ್ನು ಕೂಡ ನೀಡಿದ್ದಾರೆ. ಇದ್ರಿಂದ ಎಚ್ಚೆತ್ತ ಇಲಾಖೆ ಅದನ್ನು ಸರಿಪಡಿಸೋ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿತ್ತು. ಕೇಂದ್ರ ವಿತ್ತ ಸಚಿವೆ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಪೋರ್ಟಲ್ ಅಭಿವೃದ್ಧಿಪಡಿಸಿರೋ ಇನ್ಫೋಸಿಸ್ ಗೆ(Infosys) ಸಮನ್ಸ್ ನೀಡಿ ಸೆಪ್ಟೆಂಬರ್ 15ರೊಳಗೆ ಸರಿಪಡಿಸುವಂತೆ ಸೂಚಿಸಿದ್ದರು. ಪೋರ್ಟಲ್ ನಲ್ಲಿನ ಸಮಸ್ಯೆಗಳ ಕಾರಣಕ್ಕೆ 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿತ್ತು. ಆ ಬಳಿಕ ಮತ್ತೆ ಡಿಸೆಂಬರ್ 31ಕ್ಕೆ ವಿಸ್ತರಿಸಲಾಯಿತು. ಇನ್ಫೋಸಿಸ್ ಅಕ್ಟೋಬರ್ ನಲ್ಲಿ ಪೋರ್ಟಲ್ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಬಳಕೆದಾರರು ಆದಾಯ ತೆರಿಗೆ ಪೋರ್ಟಲ್ ಮೂಲಕ ಯಾವುದೇ ತೊಂದರೆಯಿಲ್ಲದೆ ತೆರಿಗೆ ಪಾವತಿಸಬಹುದು ಎಂದು ಹೇಳಿತ್ತು.