27.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌: ಆದಾಯ ಎಲ್ಲಿಂದ? ಖರ್ಚು ಹೇಗೆ?

By Web DeskFirst Published Jul 6, 2019, 7:59 AM IST
Highlights

27.86 ಲಕ್ಷ ಕೋಟಿ ರೂ ಮೌಲ್ಯದ ಕೇಂದ್ರ ಬಜೆಟ್| ಹಣಕಾಸು ಸಚಿವೆ ನಿರ್ಮಲಾ ಮಂಡಿಸಿರುವ ಬಜೆಟ್‌ಗೆ ಆದಾಯ ಎಲ್ಲಿಂದ? ಖರ್ಚು ಹೇಗೆ?| ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಲೆಕ್ಕಾಚಾರ

ನವದೆಹಲಿ[ಜು.06]: ಕೇಂದ್ರ ಸರ್ಕಾರದ ಖಜಾನೆಯ ಪ್ರತಿ ಒಂದು ರುಪಾಯಿಯಲ್ಲಿ 68 ಪೈಸೆ ನೇರ ಮತ್ತು ಪರ್ಯಾಯ ತೆರಿಗೆಗಳಿಂದ ಬರುತ್ತಿದೆ. ಇದೇವೇಳೆ ಒಟ್ಟು ವೆಚ್ಚದಲ್ಲಿ ಶೇ.23ರಷ್ಟು ರಾಜ್ಯದೊಂದಿಗಿನ ಪಾಲುಗಾರಿಕೆಯ ತೆರಿಗೆ ಮತ್ತು ಸುಂಕದಿಂದಲೇ ನಿಭಾಯಿಸಲಾಗುತ್ತಿದೆ ಎಂದು ಬಜೆಟ್‌ನ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ. ಖಜಾನೆಯ ಪ್ರತಿ ರುಪಾಯಿಯಲ್ಲಿ 19 ಪೈಸೆ ಜಿಎಸ್‌ಟಿಯಿಂದಲೇ ಸಂಗ್ರಹವಾದದ್ದಾಗಿದೆ. ಪ್ರತಿ ರುಪಾಯಿಗೆ 21 ಪೈಸೆ ಕೊಡುಗೆ ನೀಡುವ ಕಾರ್ಪೋರೇಟ್(ಉದ್ಯಮ) ತೆರಿಗೆಯು ಆದಾಯದ ಅತಿದೊಡ್ಡ ಮೂಲವಾಗಿದೆ.

ಕೇಂದ್ರ ಬಜೆಟ್‌ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu

ಸಾಲ ಮತ್ತು ಇತರೆ ಹೊಣೆಗಾರಿಕೆ ಸಂಗ್ರಹ 20 ಪೈಸೆಯಾಗಿದ್ದರೆ, ಆದಾಯ ತೆರಿಗೆಯು 16 ಪೈಸೆಯಾಗಿದೆ. ಇದೇವೇಳೆ ಸರ್ಕಾರ ಹೂಡಿಕೆಯಂತಹ ತೆರಿಗೆಯೇತರ ಆದಾಯಗಳಿಂದ 9 ಪೈಸೆ ಗಳಿಸುವ ಗುರಿ ಹೊಂದಿದ್ದರೆ, 8 ಪೈಸೆ ಕೇಂದ್ರ ಅಬಕಾರಿ ಸುಂಕದಿಂದ, 4 ಪೈಸೆ ಆಮದು ಸುಂಕದಿಂದ, 3 ಪೈಸೆ ಸಾಲೇತರ ಬಂಡವಾಳ ಸ್ವೀಕೃತಿಯಿಂದ ಗಳಿಸಲು ಉದ್ದೇಶಿಸಿದೆ. ವೆಚ್ಚದ ವಿಷಯಕ್ಕೆ ಬಂದಾಗ, ರಾಜ್ಯದೊಂದಿಗಿನ ಪಾಲುಗಾರಿಕೆಯ ತೆರಿಗೆ ಮತ್ತು ಸುಂಕ 23 ಪೈಸೆಯಾಗಿದ್ದು, ಅದಕ್ಕೆ 18 ಪೈಸೆ ಬಡ್ಡಿ ನೀಡಲಾಗುತ್ತಿದೆ.

ಇದೇವೇಳೆ ರಕ್ಷಣಾ ವಿಭಾಗಕ್ಕೆ ಈ ಹಿಂದಿನಿಂತೆಯೇ 9 ಪೈಸೆ ನೀಡಲಾಗುತ್ತಿದೆ. ಕೇಂದ್ರ ವಲಯ ಯೋಜನೆಗಳಿಗೆ 13 ಪೈಸೆ ವೆಚ್ಚ ಮಾಡಲಾಗುತ್ತಿದೆ. ಇದೇವೇಳೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ 9 ಪೈಸೆ ತೆಗೆದಿರಿಸಲಾಗಿದೆ. ವಿತ್ತ ಆಯೋಗ ಮತ್ತು ಇತರೆ ವರ್ಗಾವಣೆಯ ವೆಚ್ಚಕ್ಕೆ 7 ಪೈಸೆ ನೀಡಲಾಗಿದೆ. ಸಬ್ಸಿಡಿಗಾಗಿ 8 ಪೈಸೆ, ಪಿಂಚಣಿಗಾಗಿ 5 ಪೈಸೆ ನೀಡಲಾಗಿದೆ. ಇತರೆ ಖರ್ಚುವೆಚ್ಚಕ್ಕಾಗಿ ಸರ್ಕಾರ 8 ಪೈಸೆ ತೆಗೆದಿರಿಸಿದೆ

click me!