Forbes Most Powerful Women list: ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡ ನಿರ್ಮಲಾ ಸೀತಾರಾಮನ್

Suvarna News   | Asianet News
Published : Dec 08, 2021, 07:30 PM IST
Forbes Most Powerful Women list: ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡ ನಿರ್ಮಲಾ ಸೀತಾರಾಮನ್

ಸಾರಾಂಶ

ಫೋಬ್ಸ್ ನಿಯತಕಾಲಿಕಾ ಪ್ರತಿವರ್ಷ ಬಿಡುಗಡೆ ಮಾಡೋ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಈ ಬಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಡ್ತಿ ಪಡೆದಿದ್ದಾರೆ. ಅವರೂ ಸೇರಿದಂತೆ ಒಟ್ಟು  4 ಭಾರತೀಯರು ಈ ಬಾರಿ ಸ್ಥಾನ ಪಡೆದಿದ್ದಾರೆ. 

ನವದೆಹಲಿ (ಡಿ.8): ಅಮೆರಿಕ ಮೂಲದ ಪ್ರಖ್ಯಾತ ನಿಯತಕಾಲಿಕಾ ಫೋಬ್ಸ್(Forbes) ಪ್ರಕಟಿಸಿರುವ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಕೇಂದ್ರ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(finance minister) ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ,  ಈ ವರ್ಷ 37ನೇ ಸ್ಥಾನ ಅಲಂಕರಿಸೋ ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷ ಸ್ಥಾನದಲ್ಲಿ ಬಡ್ತಿ ಕೂಡ ಗಳಿಸಿದ್ದಾರೆ. ಕಳೆದ ವರ್ಷ ಈ ಪಟ್ಟಿಯಲ್ಲಿ ಅವರು 41ನೇ ಸ್ಥಾನ ಗಳಿಸಿದ್ದರು. 2019ರ ಪೋಬ್ಸ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್( Nirmala Sitharaman) 34ನೇ ಸ್ಥಾನದಲ್ಲಿದ್ದರು. ಭಾರತೀಯ ಮೂಲದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಫೋಬ್ಸ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಸಮಾಜ ಸೇವಕಿ ಮ್ಯಾಕೆಂಜಿ ಸ್ಕಾಟ್ (Mackenzie Scott) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿರೋ ಭಾರತೀಯ ಮಹಿಳೆಯರು
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಒಟ್ಟು ನಾಲ್ವರು ಭಾರತೀಯ ಮಹಿಳೆಯರು ಈ ಸಾಲಿನ ಫೋಬ್ಸ್ ಜಗತ್ತಿನ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದೇಶದ ಪ್ರಮುಖ ಐಟಿ ಕಂಪನಿ ಎಚ್ ಸಿಎಲ್ ಕಾರ್ಪೋರೇಷನ್ (HCL Corporation) ಸಿಇಒ(CEO) ರೋಶನಿ ನಾಡರ್ ಮಲ್ಹೋತ್ರ (Roshni Nadar Malhotra) ಪಟ್ಟಿಯಲ್ಲಿ 52ನೇ ಸ್ಥಾನ ಅಲಂಕರಿಸಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದರ್ ಷಾ (Kiran Mazundar-Shaw) ಈ ಬಾರಿ ಕೂಡ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, 72ನೇ ಸ್ಥಾನದಲ್ಲಿದ್ದಾರೆ. ನ್ಯಾಕ (Nykaa) ಸಂಸ್ಥಾಪಕಿ ಫಲ್ಗುಣಿ ನಾಯರ್ (Falguni Nayar)ಇದೇ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದು, 88ನೇ rankನಲ್ಲಿದ್ದಾರೆ. 

ಬ್ಯಾಂಕ್ ನಿಷ್ಕ್ರಿಯ ಖಾತೆಗಳಲ್ಲಿ 26,697 ಕೋಟಿ ರೂ.: ನಿರ್ಮಲಾ ಸೀತಾರಾಮನ್

ಪ್ರತಿವರ್ಷ ಪ್ರಕಟ
ಅಮೆರಿಕ ಮೂಲದ ಬಿಜಿನೆಸ್ ನಿಯತಕಾಲಿಕ ಫೋಬ್ಸ್ ಪ್ರತಿ ವರ್ಷ ಜಗತ್ತಿನ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ವರ್ಷದ ಪಟ್ಟಿ 18ನೇ ಸಾಲಿನದ್ದಾಗಿದ್ದು, ಇದ್ರಲ್ಲಿ 40 ಸಿಇಒಗಳು, 19 ವಿಶ್ವ ನಾಯಕಿಯರು ಹಾಗೂ ಒಬ್ಬರು ರೋಗನಿರೋಧಕ ತಜ್ಞೆ ಸೇರಿದ್ದಾರೆ ಎಂದು ಫೋಬ್ಸ್ ತಿಳಿಸಿದೆ. ಫೋಬ್ಸ್ ಪ್ರಕಟಿಸೋ ವಿಶ್ವದ 100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಗಳಿಸೋದು ಸುಲಭದ ವಿಷಯವಲ್ಲ. ಇಂಥ ಪಟ್ಟಿ ಪ್ರಕಟ ಮಾಡೋ ಮುನ್ನ ಫೋಬ್ಸ್ ಪ್ರತಿಯೊಬ್ಬರ ಸಾಧನೆ ಬಗ್ಗೆಯೂ ಸಾಕಷ್ಟು ಮಾಹಿತಿ ಕಲೆ ಹಾಕಿರುತ್ತದೆ. 

ಮೊದಲ ಸ್ಥಾನಕ್ಕೆ ಹೊಸ ಮುಖ
ಫೋಬ್ಸ್ ಪ್ರತಿವರ್ಷ ಪ್ರಕಟಿಸೋ ವಿಶ್ವದ  100 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಮೊದಲ ಸ್ಥಾನವನ್ನು ಜರ್ಮನ್ ನಿರ್ಗಮಿತ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅಲಂಕರಿಸಿಕೊಂಡು ಬಂದಿದ್ದರು. ಆದ್ರೆ ಈ ಬಾರಿ ಅವರ ಸ್ಥಾನದಲ್ಲಿ ಸಮಾಜಸೇವಕಿ ಮ್ಯಾಕೆಂಜಿ ಸ್ಕಾಟ್ ಕಾಣಿಸಿಕೊಂಡಿದ್ದಾರೆ. 

ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ಒಂದು ಸ್ಥಾನ ಏರಿಕೆ ಕಂಡ ಕಮಲಾ ಹ್ಯಾರಿಸ್
ಅಮೆರಿಕದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಈ ವರ್ಷದ ಫೋಬ್ಸ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು ಮೂರನೇ ಸ್ಥಾನದಲ್ಲಿದ್ದು, ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರು ಉಪಾಧ್ಯಕ್ಷೆ ಸ್ಥಾನವನ್ನು ಅಲಂಕರಿಸಿದ ಕೀರ್ತಿಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ಧಾರೆ. ಸದ್ಯ ಅವರು ಅಮೆರಿಕದ ಅತ್ಯಂತ ಪ್ರಭಾವಶಾಲಿ ಮಹಿಳೆ. ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ವಜೀದ್ ಕೂಡ ಈ ಬಾರಿ ಫೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 43ನೇ rank ಗಳಿಸಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!