ಶೇ. 69ರಷ್ಟು ಕುಸಿತ, ಆದ್ರೂ 567 ಕೋಟಿ ಲಾಭ: ಎಸ್‌ಬಿಐ ಅಬ್ಬಬ್ಬಾ!

By Web DeskFirst Published Nov 6, 2018, 2:10 PM IST
Highlights

ಎಸ್‌ಬಿಐ ಎರಡನೇ  ತ್ರೈಮಾಸಿಕ ಲಾಭ 576.46 ಕೋಟಿ ರೂ.! ವಸೂಲಾಗದ ಸಾಲದಿಂದಾಗಿ ಮೊದಲ ಆರ್ಥಿಕ ವರ್ಷದಲ್ಲಿ ನಷ್ಟ! ಎಸ್‌ಬಿಐಗೆ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ. 69 ರಷ್ಟು ಕುಸಿತ! ನಿವ್ವಳ ಲಾಭ 1. 581. 55 ಕೋಟಿ ಯಿಂದ 944.87ಕ್ಕೆ ಕುಸಿತ

ನವದೆಹಲಿ(ನ.6): ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡ ಎರಡನೇ  ತ್ರೈಮಾಸಿಕ ಅವಧಿಯಲ್ಲಿ ಶೇ. 69 ರಷ್ಟು ಕುಸಿತದೊಂದಿಗೆ 576.46 ಕೋಟಿ ರೂ. ಲಾಭ ಗಳಿಸಿದೆ.

ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ ಒಟ್ಟಾರೇ,  1.840.43 ಕೋಟಿ ರೂ ಲಾಭ ಗಳಿಸಿತ್ತು. ವಸೂಲಾಗದ ಸಾಲದಿಂದಾಗಿ ಮೊದಲ ಆರ್ಥಿಕ ವರ್ಷದಲ್ಲಿ ಎಸ್‌ಬಿಐಗೆ 4.875.85 ಕೋಟಿ ರೂ.ನಷ್ಟ  ಉಂಟಾಗಿತ್ತು.

ವರ್ಷದ ಹಿಂದೆ ಇದ್ದ 74.948.51 ಕೋಟಿ ರೂ. ಆದಾಯಕ್ಕೆ  ಹೋಲಿಸಿದರೆ  ಈ ಅವಧಿಯಲ್ಲಿ ಒಟ್ಟಾರೇ, 79, 302.72 ಕೋಟಿ ರೂ. ಲಾಭ ಬಂದಿದೆ ಎಂದು ಎಸ್‌ಬಿಐ ಹೇಳಿದೆ.  ಶೇ .4.84 ರಷ್ಟಿದ್ದ ವಸೂಲಾಗದ ಸಾಲದ ಪ್ರಮಾಣ ಶೇ. 4.53 ರಷ್ಟಿದೆ.

ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 16.842.18 ಕೋಟಿ ರೂ. ವಸೂಲಾಗದ ಸಾಲದ ಮೇಲಿನ ವಿನಾಯಿತಿ ಈ ಅವಧಿಯಲ್ಲಿ  10.381.31 ಕೋಟಿ ಆಗಿದೆ. ಬ್ಯಾಂಕ್ ನಿವ್ವಳ ಲಾಭ 1.581.55 ಕೋಟಿ ರೂ.ದಿಂದ 944.87 ಕೋಟಿ ರೂ.ಗೆ ಕುಸಿತ ಕಂಡಿದೆ.

click me!