
ನವದೆಹಲಿ : ದೀಪಾವಳಿ ಸಂಭ್ರಮದ ನಡುವೆ ಜನರಿಗೆ ಗುಡ್ ನ್ಯೂಸ್ ಇದಾಗಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಳಿಯುತ್ತಿರುವ ಪೆಟ್ರೋಲ್ ಡೀಸೆಲ್ ದರ ಇದೀಗ ಮತ್ತೊಮ್ಮೆ ಇಳಿದಿದೆ.
ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 14 ಪೈಸೆ ಇಳಿಕೆಯಾಗಿದ್ದು, ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ದರ 78.42 ರು.ಗಳಾಗಿದೆ. ಇನ್ನು ಡೀಸೆಲ್ ದರ 9 ಪೈಸೆ ಇಳಿಕೆಯಾಗಿದ್ದು, ಇದರಿಂದ 73.07 ರು.ಗಳಷ್ಟಾಗಿದೆ.
ಇನ್ನು ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 14 ಪೈಸೆ ಇಳಿದಿದ್ದು, ಡೀಸೆಲ್ ದರದಲ್ಲಿ 10 ಪೈಸೆ ಇಳಿಕೆಯಾಗಿದೆ. ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ದರ 83.92 ರುಗಳಾಗಿದ್ದು, ಡೀಸೆಲ್ ದರ 76.57 ರು.ಗಳಾಗಿದೆ.
ತಿಂಗಳ ಹಿಂದಷ್ಟೇ ನಿರಂತರವಾಗಿ ಏರಿಕೆಯಾಗಿ 100ರ ಗಡಿ ದಾಟಿದ್ದ ಪೆಟ್ರೋಲ್, ಡೀಸೆಲ್ ದರ ಇದೀಗ ನಿರಂತರವಾಗಿ ಇಳಿಯುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.