‘ಸಹಾಯ ಬೇಕಾದ್ರೆ ಚೀನಾದಿಂದ ಪಡೆದ ಸಾಲದ ಮಾಹಿತಿ ನೀಡಿ’| ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಖಡಕ್ ಸೂಚನೆ| ಚೀನಾದಿಂದ ಪೀಕಿದ್ದೆಷ್ಟು ಎಂಬ ಮಾಹಿತಿ ಕೊಡಿ ಎಂದ ಐಎಂಎಫ್| ಸಾಲಕ್ಕಾಗಿ ಐಎಂಎಫ್ ಮುಂದೆ ಅಂಗಲಾಚುತ್ತಿರುವ ಪಾಕಿಸ್ತಾನ|
ಇಸ್ಲಾಮಾಬಾದ್(ಏ.13): ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾದಿಂದ ಇದುವರೆಗೂ ಪಡೆದಿರುವ ಸಾಲದ ಕುರಿತು ಮಾಹಿತಿ ನೀಡುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪಾಕಿಸ್ತಾನಕ್ಕೆ ಆದೇಶಿಸಿದೆ.
ಪಾಕಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡಲು ಐಎಂಎಫ್ ಚಿಂತಿಸುತ್ತಿದ್ದು, ಇದಕ್ಕೂ ಮೊದಲು ಚೀನಾದಿಂದ ಪಡೆದ ಸಾಲದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದೆ.
ಈ ಕುರಿತು ಮಾತನಾಡಿರುವ ಪಾಕಿಸ್ತಾನ ಹಣಕಾಸು ಸಚಿವ ಅಸಾದ್ ಉಮರ್, ಐಎಂಎಫ್ ಹಾಗೂ ಪಾಕಿಸ್ತಾನ ಮುಂದಿನ ದಿನಗಳಲ್ಲಿ ಒಮ್ಮತಕ್ಕೆ ಬರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಚೀನಾ ಸುಮಾರು 6.2 ಬಿಲಿಯನ್ ಡಾಲರ್ ಮೊತ್ತದ 6 ಕ್ಕೂ ಹೆಚ್ಚು ಯೋಜನೆಗಳ ಒಪ್ಪಂದಕ್ಕೆ ಸಹಿ ಹಾಕಿವೆ. ಅಲ್ಲದೇ ಚೀನಾ ಪಾಕಿಸ್ತಾನಕ್ಕೆ 6.5 ಬಿಲಿಯನ್ ಡಾಲರ್ ಮೊತ್ತದ ವಾಣಿಜ್ಯ ಸಾಲವನ್ನೂ ನೀಡಿದೆ.