ಜಾಗತಿಕ ಆರ್ಥಿಕತೆಯಲ್ಲಿ ಭಾರತ ಸ್ಟಾರ್‌ ಪರ್‌ಫಾರ್ಮರ್‌: ಐಎಂಎಫ್‌

Published : Dec 20, 2023, 06:56 AM ISTUpdated : Dec 20, 2023, 06:59 AM IST
ಜಾಗತಿಕ ಆರ್ಥಿಕತೆಯಲ್ಲಿ ಭಾರತ ಸ್ಟಾರ್‌ ಪರ್‌ಫಾರ್ಮರ್‌: ಐಎಂಎಫ್‌

ಸಾರಾಂಶ

ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಭಾರತವನ್ನು ಸ್ಟಾರ್‌ ಪರ್‌ಫಾರ್ಮರ್‌ ಎಂದು ಬಣ್ಣಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ಈ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲೇ ಶೇ.16 ರಷ್ಟು ಇರುವ ಸಾಧ್ಯತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ವಾಷಿಂಗ್ಟನ್‌: ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಭಾರತವನ್ನು ಸ್ಟಾರ್‌ ಪರ್‌ಫಾರ್ಮರ್‌ ಎಂದು ಬಣ್ಣಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ಈ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲೇ ಶೇ.16 ರಷ್ಟು ಇರುವ ಸಾಧ್ಯತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಭಾರತದಲ್ಲಿನ ಐಎಂಎಫ್‌ ಪ್ರತಿನಿಧಿ ನಡಾ ಚುಯೇರಿ, ಕಳೆದ ಕೆಲ ಸಮಯದಿಂದ ನಾವು ಗಮನಿಸುತ್ತಿರುವ ಹಾಗೆ ಭಾರತ ಅತ್ಯಂಥ ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿದೆ. ತನ್ನ ಸಮಾನ ದೇಶಗಳಿಗೆ ಹೋಲಿಸಿದರೆ ಭಾರತ ಆರ್ಥಿಕ ಪ್ರಗತಿಯಲ್ಲಿ ಸ್ಟಾರ್‌ ಫರ್‌ಫಾರ್ಮರ್‌ ಆಗಿ ಹೊರಹೊಮ್ಮಿದೆ. ಬೃಹತ್‌ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ಭಾರತ ಅತ್ಯಂತ ವೇಗದ ಆರ್ಥಿಕ ಪ್ರಗತಿ ಸಾಧಿಸಿದೆ ಮತ್ತು ನಮ್ಮ ಈಗಿನ ಲೆಕ್ಕಾಚಾರದ ಅನ್ವಯ ಜಾಗತಿಕ ಆರ್ಥಿಕ ಪ್ರಗತಿಗೆ ಭಾರತ ಶೇ.16ರಷ್ಟು ಪಾಲು ನೀಡಲಿದೆ ಎಂದು ಹೇಳಿದ್ದಾರೆ.

ದೇಶದ ಜಿಡಿಪಿ ಪ್ರಗತಿ ದರ ವಿಶ್ವದಲ್ಲೇ ನಂ.1: ಚೀನಾ ಹಿಂದಿಕ್ಕಿದ ಭಾರತ

ಜೊತೆಗೆ, ಭಾರತ ಸರ್ಕಾರ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್‌ ವಲಯದಲ್ಲಿ ಹೆಚ್ಚಿನ ಹೂಡಿಕೆಗೆ ಆದ್ಯತೆ ನೀಡುತ್ತಿದೆ. ಇದು ಸದೃಢ ಆರ್ಥಿಕ ಪ್ರಗತಿಗೆ ಅತ್ಯಂತ ಭದ್ರವಾದ ಅಡಿಪಾಯ ಒದಗಿಸುತ್ತದೆ. ಭಾರತ ಅತ್ಯಂತ ವಿಶಾಲವಾದ ಯುವ ಮತ್ತು ಬೆಳವಣಿಗೆ ಹೊಂದುತ್ತಿರುವ ಜನ ಸಮುದಾಯ ಹೊಂದಿದೆ. ಹೀಗಾಗಿ ಈ ಸಾಮರ್ಥ್ಯವನ್ನು ರಚನಾತ್ಮಕ ಸುಧಾರಣೆಗಳ ಮೂಲಕ ಬಳಸಿಕೊಂಡರೆ ಭಾರತ ಇನ್ನಷ್ಟು ಬೆಳವಣಿಗೆ ಹೊಂದಬಹುದಾಗಿದೆ ಎಂದು ನಡಾ ಚುಯೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಅಭಿಪ್ರಾಯಕ್ಕೆ ಪೂರಕವಾಗಿ ಭಾರತ ಸರ್ಕಾರ ಈಗಾಗಲೇ ತನ್ನ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದ್ದು, ಅದು ದೇಶದ ಉತ್ಪಾದಕತೆಯನ್ನು ಹೆಚ್ಚಿಸುವ ಜೊತೆಗೆ ಭವಿಷ್ಯದಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ ಎಂದು ನಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ $4 ಟ್ರಿಲಿಯನ್ ಗಡಿ ದಾಟಿದ ಭಾರತದ ಆರ್ಥಿಕತೆ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!