
ನವದೆಹಲಿ(ಜು.28): ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಇದೇ ಮೊದಲ ಬಾರಿಗೆ 16 ವರ್ಷಗಳಲ್ಲಿ ಮೊದಲ ತ್ರೈಮಾಸಿಕ ನಷ್ಟವನ್ನು ತೋರಿಸಿದೆ. ಕೆಟ್ಟ ಸಾಲಗಳಿಗಾಗಿ, ಹೆಚ್ಚಿನ ನಿಬಂಧನೆಗಳಿಂದಾಗಿ ಮತ್ತು ಬಾಂಡ್ ನಷ್ಟದಿಂದ ಬ್ಯಾಂಕ್ ಗೆ ನಷ್ಟವಾಗಿದೆ ಎಂದು ವರದಿ ಮಾಡಿದೆ.
ಕಳೆದ ಜೂನ್ 30 ಕ್ಕೆ ಮೂರು ತಿಂಗಳ ನಿವ್ವಳ ನಷ್ಟ ರೂ. 120 ಕೋಟಿ ಆಗಿತ್ತು. ಆದರೆ ಕಳೆದ ವರ್ಷ ಇದೇ ಸಮಯದಲ್ಲಿ ಬ್ಯಾಂಕ್ 2049 ಕೋಟಿ ರೂ. ಲಾಭಗಳಿಸಿತ್ತು. ಆದರೆ ವಿಶ್ಲೇಷಕರು ಸರಾಸರಿ 1462 ಕೋಟಿ ರೂ. ಗಳ ನಿವ್ವಳ ಲಾಭ ನೀರಿಕ್ಷಿಸಿದ್ದರು.
ಒಟ್ಟಾರೆ ಸಾಲಗಳ ಶೇಕಡಾವಾರು ಮೊತ್ತದ ಒಟ್ಟು ಕೆಟ್ಟ ಸಾಲಗಳು ಜೂನ್ ಅಂತ್ಯದ ವೇಳೆಗೆ 8.81% ರಷ್ಟಿತ್ತು, ಇದು ಹಿಂದಿನ ತ್ರೈಮಾಸಿಕದ ಅಂತ್ಯದ ವೇಳೆಗೆ 8.84% ಮತ್ತು ಒಂದು ವರ್ಷದ ಹಿಂದೆ 7.99% ರಷ್ಟಿತ್ತು.
ಐಸಿಐಸಿಐ ಬ್ಯಾಂಕ್, ದೇಶದ ಖಾಸಗಿ ವಲಯದ ಸಾಲದಾತರ ಪೈಕಿ ಅತಿ ಹೆಚ್ಚು ಕೆಟ್ಟ ಸಾಲಗಳನ್ನು ಹೊಂದಿದ್ದು, 4036 ಕೋಟಿ ರೂ.ಗಳನ್ನು ಹೆಚ್ಚುವರಿ ಠೇವಣಿ ಸಾಲದಲ್ಲಿ ಸೇರಿಸಿದೆ. ಇದರ ಒಟ್ಟು ಮೊತ್ತ 53465 ಕೋಟಿ ರೂ.
ಐಸಿಐಸಿಐ ಷೇರುಗಳು ಮುಂಬಯಿ ವ್ಯಾಪಾರದಲ್ಲಿ 2.6 ಪ್ರತಿಶತಕ್ಕೆ ಕೊನೆಗೊಂಡಿದೆ. ಇನ್ನು ನ್ಯೂಯಾಕ್ ನ ಪೂರ್ವ-ಮಾರುಕಟ್ಟೆ ವಹಿವಾಟಿನಲ್ಲಿ ಶೇ. 0.5 ರಷ್ಟು ಕಡಿಮೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.